ETV Bharat / city

ಕೊರೊನಾ ನಿವಾರಣೆಗಾಗಿ ಇಷ್ಟಲಿಂಗ ಪೂಜೆ ಸಲ್ಲಿಸಿದ ಮಠಾಧೀಶರು!

author img

By

Published : Apr 13, 2020, 10:26 PM IST

Updated : Apr 13, 2020, 10:59 PM IST

ಅಖಿಲ ಭಾರತ ವೀರಶೈವ ಮಹಾಸಭಾ ನೀಡಿದ್ದ ಕರೆಯಂತೆ ಕೊರೊನಾ ಸೋಂಕಿನ ನಿವಾರಣೆಗಾಗಿ ಮಠಾಧೀಶರು, ಶಿವ ಭಕ್ತರು ಇಷ್ಟಲಿಂಗ ಪೂಜೆ ನೆರವೇರಿಸಿದರು.

worship for Corona exculpation
ಕೊರೊನಾ ನಿವಾರಣೆಗಾಗಿ ಇಷ್ಟಲಿಂಗ ಪೂಜೆ..ವೀರಶೈವ ಮಹಾಸಭಾ ಕರೆಯಂತೆ ಪೂಜೆ ಸಲ್ಲಿಸಿದ ಮಠಾಧಿಪತಿಗಳು...!

ಬೆಂಗಳೂರು: ಕೊರೊನಾ ಸೋಂಕಿನ ನಿವಾರಣೆಗಾಗಿ ಪ್ರಾರ್ಥಿಸಿ ಇಷ್ಟಲಿಂಗ ಪೂಜೆ ನೆರವೇರಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ನೀಡಿದ್ದ ಕರೆಯಂತೆ ಇಂದು ಮಠಾಧೀಶರು, ಶಿವ ಭಕ್ತರು ಇಷ್ಟಲಿಂಗ ಪೂಜೆ ನೆರವೇರಿಸಿದರು.

worship for Corona exculpation
ಕೊರೊನಾ ನಿವಾರಣೆಗಾಗಿ ಇಷ್ಟಲಿಂಗ ಪೂಜೆ: ವೀರಶೈವ ಮಹಾಸಭಾ ಕರೆಯಂತೆ ಪೂಜೆ ಸಲ್ಲಿಸಿದ ಮಠಾಧೀಶರು!

ಜೀವಾತ್ಮರಿಗೆ ಒಳ್ಳೆಯದನ್ನ ಬಯಸುವ ಸದುದ್ದೇಶದೊಂದಿಗೆ ಸಮಸ್ತ ವೀರಶೈವ ಲಿಂಗಾಯತರು, ಇಂದು ಸಂಜೆ 7 ಗಂಟೆಗೆ ಇಷ್ಟಲಿಂಗ ಪೂಜೆಯನ್ನ ತಾವು ಇರುವ ಸ್ಥಳಗಳಿಂದಲೇ ಸಲ್ಲಿಸಿ, ಧ್ಯಾನಸ್ಥರಾಗಿ ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ಹಾವಳಿಯಿಂದ ಮುಕ್ತಗೊಳಿಸಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.

worship for Corona exculpation
ಕೊರೊನಾ ನಿವಾರಣೆಗಾಗಿ ಇಷ್ಟಲಿಂಗ ಪೂಜೆ: ವೀರಶೈವ ಮಹಾಸಭಾ ಕರೆಯಂತೆ ಪೂಜೆ ಸಲ್ಲಿಸಿದ ಮಠಾಧೀಶರು!

ಅಖಿಲ ಭಾರತ ವೀರಶೈವ ಮಹಾಸಭಾ ನೀಡಿದ್ದ ಕರೆಯಂತೆ ಪಂಚ ಪೀಠಗಳ ಪೀಠಾಧೀಶರು, ವೀರಶೈವ ಲಿಂಗಾಯತ ಸಮಾಜದ ವಿವಿಧ ಮಠಾಧೀಶರು, ಸುತ್ತೂರು ಶ್ರೀಗಳು, ತುಮಕೂರಿನ ಸಿದ್ಧಗಂಗಾ ಮಠಾಧೀಶರು, ಚಿತ್ರದುರ್ಗದ ಬೃಹನ್ ಮಠ, ಹುಬ್ಬಳ್ಳಿ ಸಿದ್ದಾರೂಢ ಹಾಗೂ ಮೂರು ಸಾವಿರ ಮಠ, ಚಿತ್ರದುರ್ಗದ ಸಾಣೇಹಳ್ಳಿ ಮಠ, ಕೂಡಲ ಸಂಗಮ ಪಂಚಮಸಾಲಿ ಪೀಠ, ಧಾರವಾಡದ ಮುರುಘಾ ಮಠ, ಬೆಳಗಾವಿಯ ನಾಗನೂರು ಮಠ, ಗದಗಿನ ತೋಂಟದಾರ್ಯ ಮಠ, ಕಲಬುರಗಿಯ ಶರಣ ಬಸಪ್ಪ ಅಪ್ಪಗಳ ಮಹಾಸಂಸ್ಥಾನ ಹಾಗೂ ಬೀದರ್​ ಭಾಲ್ಕಿ ಮಠಗಳ ಪೀಠಾಧ್ಯಕ್ಷರು ಹಾಗೂ ಭಕ್ತಗಣ ತಮ್ಮ ತಮ್ಮ ನಿವಾಸದಲ್ಲಿಯೇ ಇಷ್ಟಲಿಂಗ ಪೂಜೆ ನೆರವೇರಿಸಿದರು.

Last Updated : Apr 13, 2020, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.