ETV Bharat / city

ಮಹಿಳೆಯ ಕೊಲೆ : ಪತಿ, ಪ್ರಿಯಕರನ ಮೇಲೆ ಅನುಮಾನ!

author img

By

Published : May 15, 2022, 11:35 AM IST

35 ವರ್ಷದ ಮಹಿಳೆ ಕೊಲೆಯಾಗಿದ್ದು, ಪತಿ ಮತ್ತು ಪ್ರಿಯಕರನ ನಡೆಯ ಮೇಲೆ ಅನುಮಾನ ಮೂಡಿದೆ..

ಮಹಿಳೆಯ ಕೊಲೆ
ಮಹಿಳೆಯ ಕೊಲೆ

ದೊಡ್ಡಬಳ್ಳಾಪುರ : ತಾಲೂಕಿನ ವಡಗೆರೆ ಗ್ರಾಮದಲ್ಲಿ ಇಂದು ಬೆಳಗ್ಗೆ 5 ಗಂಟೆಯ ಸಮಯದಲ್ಲಿ ಮಹಿಳೆಯ ಕೊಲೆಯಾಗಿದೆ. ಮೃತ ಮಹಿಳೆಯ ಪತಿ ಸಂಬಂಧಿಕರ ಗೃಹ ಪ್ರವೇಶಕ್ಕೆ ತೆರಳಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.

ಗ್ರಾಮದ 35 ವರ್ಷದ ಮಹಿಳೆ ಕೊಲೆಯಾಗಿದ್ದಾಳೆ. ಘಟನೆ ನಂತರ ಗಂಡ ಚನ್ನಬಸವಯ್ಯನ ಫೋನ್ ಸ್ವಿಚ್ ಆಫ್ ಆಗಿದೆ. ಇನ್ನು ಕೊಲೆಯಾದ ಭಾಗ್ಯಶ್ರೀ ಇದೇ ಗ್ರಾಮದ ರಿಯಾಜ್ (27) ವರ್ಷದ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಂತೆ.

ಜೊತೆಗೆ ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಸಹ ಇತ್ತು. ಆದ್ರೆ, ಕೆಲವು ದಿನಗಳಿಂದ ಇವರಿಬ್ಬರ ಮಧ್ಯೆ ಜಗಳವಾಗಿದ್ದರಿಂದ ದೂರವಾಗಿದ್ದರಂತೆ. ಇದರಿಂದ ಮಹಿಳೆಯ ಕೊಲೆ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ. ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ಓದಿ: ಉಡುಪಿಗೆ ಬಂದು 18 ತಿಂಗಳ ಹಿಂದೆ ಮಣ್ಣು ಮಾಡಿದ್ದ ಶವ ಹೊರತೆಗೆಸಿದ ಪಂಜಾಬ್ ಪೊಲೀಸರು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.