ETV Bharat / city

ಡ್ರಗ್ಸ್​ ನಶೆಯಲ್ಲಿ ತಲೆಯ ಮೇಲೆ ಮೂತ್ರ ವಿಸರ್ಜಿಸಿದ ಪತಿ.. ಠಾಣೆ ಮೆಟ್ಟಿಲೇರಿದ ಪತ್ನಿ

author img

By

Published : Aug 10, 2022, 1:38 PM IST

Updated : Aug 10, 2022, 2:45 PM IST

ಡ್ರಗ್ಸ್​ ಚಟಕ್ಕೆ ಬಿದ್ದ ವ್ಯಕ್ತಿ ಪತ್ನಿಯನ್ನು ಕ್ರೂರವಾಗಿ ನಡೆಸಿಕೊಂಡು, ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಿ ಪತ್ನಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

wife-filed-case-against-husbands-harassment
ಡ್ರಗ್ಸ್​ ನಶೆಯಲ್ಲಿ ತಲೆಯ ಮೇಲೆ ಮೂತ್ರ ವಿಸರ್ಜಿಸಿದ ಪತಿ

ಬೆಂಗಳೂರು: ಗಂಡ ಡ್ರಗ್ಸ್​ ಚಟಕ್ಕೆ ದಾಸನಾಗಿದ್ದಾರೆ. ಅದರ ಮತ್ತಿನಲ್ಲಿ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪತ್ನಿಯೊಬ್ಬರು ಬಸವನಗುಡಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ತೆಲಂಗಾಣದ ಪ್ರತಿಷ್ಠಿತ ಬಟ್ಟೆ ಕಂಪನಿಯ ಮಾಲೀಕರ ಮಗಳನ್ನು ಆರೋಪಿ ಸಂದೀಪ್ ಎಂಬುವರಿಗೆ ಕಳೆದ ಜನವರಿಯಲ್ಲಿ ವಿವಾಹ ಮಾಡಿಕೊಡಲಾಗಿತ್ತು‌. ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ 4 ಕೆ.ಜಿ ಚಿನ್ನ, ಮಿನಿ‌ಕೂಪರ್ ಕಾರನ್ನು ಸಂದೀಪ್​ಗೆ ವರದಕ್ಷಿಣೆಯಾಗಿ ನೀಡಲಾಗಿತ್ತು. ವಿವಾಹಕ್ಕಾಗಿ 6 ಕೋಟಿ ರೂಪಾಯಿ ಖರ್ಚು ಖರ್ಚು ಮಾಡಲಾಗಿತ್ತು.

ಇದಲ್ಲದೇ, ತೆಲಂಗಾಣದಲ್ಲಿರುವ 2 ಜವಳಿ ಅಂಗಡಿಗಳನ್ನೂ ಕೂಡ ಸಂದೀಪ್ ಹೆಸರಿಗೆ ಬರೆದುಕೊಡಲಾಗಿತ್ತು. ಆದರೆ, ಸಂದೀಪ್ ಮಾತ್ರ ದುಶ್ಚಟಕ್ಕೆ ಬಿದ್ದಿದ್ದರು. ಮನೆಗೆ ಸ್ನೇಹಿತರನ್ನು ಕರೆಸಿಕೊಂಡು ಡ್ರಗ್ಸ್​ ಪಾರ್ಟಿ ಮಾಡುತ್ತಿದ್ದರು. ಇದನ್ನು ವಿರೋಧಿಸಿದರೆ ಗೆಳೆಯರ ಮುಂದೆಯೇ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದರು. ಬಳಿಕ ಅಶ್ಲೀಲವಾಗಿ ವರ್ತಿಸುತ್ತಿದ್ದರು ಎನ್ನಲಾಗ್ತಿದೆ.

ಕೆಲ ದಿನಗಳ ಹಿಂದೆ ಡ್ರಗ್ಸ್​ ಸೇವಿಸಿದ ತನ್ನ ಪತಿ ನಶೆಯಲ್ಲಿ ನನ್ನ ತಲೆಯ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾರೆ. ಈ ಬಗ್ಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೊಂದ ಪತ್ನಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಓದಿ: ಆಷಾಢ ಮಾಸದಲ್ಲಿ ತವರಿಗೆ ಬಂದ ಯುವತಿ.. ಪ್ರಿಯಕರನ ಜೊತೆ ಪರಾರಿಯಾಗಿದ್ದ ನವವಧು ಆತ್ಮಹತ್ಯೆ

Last Updated : Aug 10, 2022, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.