ETV Bharat / city

ಪಕ್ಷದ ರಾಷ್ಟ್ರೀಯ ನಾಯಕರ ವಿಚಾರ: ಬಿಜೆಪಿ-ಕಾಂಗ್ರೆಸ್ ನಡುವೆ ಟ್ವೀಟ್ ವಾರ್

author img

By

Published : Jul 29, 2021, 10:55 PM IST

ರಾಜ್ಯ ಬಿಜೆಪಿ ಪಕ್ಷದಿಂದ ಸ್ಥಿರ ಸರ್ಕಾರ ಮರೀಚಿಕೆ ಅಷ್ಟೇ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

Congress and BJP
ಬಿಜೆಪಿ-ಕಾಂಗ್ರೆಸ್

ಬೆಂಗಳೂರು: ಪಕ್ಷದ ರಾಷ್ಟ್ರೀಯ ನಾಯಕರ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಟ್ವೀಟ್ ವಾರ್ ನಡೆಸಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ವಿಚಾರವಾಗಿ ಬಿಜೆಪಿ ಮಾಡಿದ ಟೀಕೆಗೆ ಕಾಂಗ್ರೆಸ್ ಪಕ್ಷ ಪ್ರತಿ ಟೀಕೆ ಮಾಡಿದ್ದು, ಟ್ವೀಟ್​​ಗಳಲ್ಲೇ ಉಭಯ ಪಕ್ಷಗಳ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರವನ್ನು ಥರಾಟೆಗೆ ತೆಗೆದುಕೊಂಡಿದೆ.

ಬಿಜೆಪಿ ಟ್ವೀಟ್ ಮಾಡಿ, ಗಾಂಧಿ ಕುಟುಂಬಕ್ಕಾಗಿ ಚಪ್ಪಲಿ ಸವೆಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೊಸ ಜವಾಬ್ದಾರಿ ಲಭಿಸಿದೆ. ತೊದಲು ನುಡಿಯ ಪಪ್ಪುವಿಗೆ ಪಾಠ ಹೇಳಿ ಕೊಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಗಾಂಧಿ ಕುಟುಂಬದ ಸೇವೆಯೇ ದೇಶ ಸೇವೆ ಎಂದು ಲೇವಡಿ ಮಾಡಿ ರಾಹುಲ್ ಗಾಂಧಿ ಭಾಷಣದ ತುಣುಕನ್ನು ಲಗತ್ತಿಸಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷಕ್ಕಾಗಿ, ದೇಶಕ್ಕಾಗಿ ಬದುಕು ಸವೆಸಿದ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಪಕ್ಷ ಸಂಘಟಿಸುವ ಸಂಸ್ಕೃತಿ ನಮ್ಮಲ್ಲಿದೆ. ನೀವು ಅಡ್ವಾಣಿ, ಮು.ಮ ಜೋಶಿಯವರನ್ನ ಮೂಲೆಗೆ ಕೂರಿಸಿದಂತೆ ನಮ್ಮಲ್ಲಿಲ್ಲ. ಹೇಡಿ ಫೆಕೇಂದ್ರನಿಗೆ ತಾಕತ್ತಿದ್ದರೆ ಒಂದೇ ಒಂದು ಪತ್ರಿಕಾಗೋಷ್ಠಿ ಹಾಗೂ ಟೆಲಿಪ್ರಾಂಪ್ಟರ್ ಇಲ್ಲದೆ ಭಾಷಣ ಮಾಡಲು ಹೇಳಿ ಎಂದು ಸವಾಲು ಹಾಕಿದೆ.

ಸ್ಥಿರ ಸರ್ಕಾರ ಮರೀಚಿಕೆ:

ಕೋವಿಡ್ ನಂತರ ರಾಜ್ಯದಲ್ಲಿ ಮಕ್ಕಳು ಶಾಲೆ ಬಿಟ್ಟಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ ಸುಮಾರು 1.70 ಲಕ್ಷದಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದ ವರದಿ ಅತೀ ಆತಂಕಕಾರಿ. ಇದು ಬಾಲಕಾರ್ಮಿಕರನ್ನ, ಬಾಲ್ಯವಿವಾಹವನ್ನ ಹೆಚ್ಚುಗೊಳಿಸುತ್ತದೆ ಹಾಗು ರಾಜ್ಯದ ಶೈಕ್ಷಣಿಕ ದರ ಕುಸಿತಕ್ಕೆ ಕಾರಣವಾಗಲಿದೆ. ಈ ಗಂಭೀರ ಹಾಗೂ ಸೂಕ್ಷ್ಮ ಕಾಲದಲ್ಲಿ ರಾಜ್ಯ ಬಿಜೆಪಿ ರಾಜಕೀಯದಾಟ ಆಡುತ್ತಿದೆ, ಜನರ ಕಾಳಜಿಯನ್ನು ಕೋರ್ಟ್ ವಹಿಸುತ್ತಿದೆ ಎಂದಿದೆ.

  • ನಾಯಕತ್ವ ಬದಲಾವಣೆಯಿಂದ #BJPvsBJP ಆಂತರಿಕ ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಲಿದೆ.@JagadishShettar ಮುನಿಸಿಕೊಂಡಿದ್ದಾರೆ, @ikseshwarappa ಸೆಟೆದು ಕುಳಿತಿದ್ದಾರೆ!

    ಸಂಪುಟ ರಚನೆ ಮುಗಿಯುವಷ್ಟರಲ್ಲಿ ಮತ್ತೊಂದಿಷ್ಟು ಬಂಡಾಯಗಾರರು ಸೃಷ್ಟಿಯಾಗುತ್ತಾರೆ, ಒಟ್ಟಿನಲ್ಲಿ @BJP4Karnataka ಪಕ್ಷದಿಂದ ಸ್ಥಿರ ಸರ್ಕಾರ ಮರೀಚಿಕೆ ಅಷ್ಟೇ.

    — Karnataka Congress (@INCKarnataka) July 29, 2021 " class="align-text-top noRightClick twitterSection" data=" ">

ನಾಯಕತ್ವ ಬದಲಾವಣೆಯಿಂದ ಬಿಜೆಪಿ ವರ್ಸಸ್ ಬಿಜೆಪಿ ಆಂತರಿಕ ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಲಿದೆ ಎಂದಿದೆ. ಜಗದೀಶ್ ಶೆಟ್ಟರ್ ಮುನಿಸಿಕೊಂಡಿದ್ದಾರೆ, ಕೆ.ಎಸ್. ಈಶ್ವರಪ್ಪ ಸೆಟೆದು ಕುಳಿತಿದ್ದಾರೆ. ಸಂಪುಟ ರಚನೆ ಮುಗಿಯುವಷ್ಟರಲ್ಲಿ ಮತ್ತೊಂದಿಷ್ಟು ಬಂಡಾಯಗಾರರು ಸೃಷ್ಟಿಯಾಗುತ್ತಾರೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿ ಪಕ್ಷದಿಂದ ಸ್ಥಿರ ಸರ್ಕಾರ ಮರೀಚಿಕೆ ಅಷ್ಟೇ ಎಂದು ಲೇವಡಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.