ETV Bharat / city

ಪ್ರವಾಹಕ್ಕೆ ಸಿಕ್ಕು ಸಾವಿರಾರು ಕಿ.ಮೀ. ರಸ್ತೆ, ನೂರಾರು ಸೇತುವೆಗಳು ಹಾನಿ... ದುರಸ್ತಿ ಆಗಿದ್ದು ಎಷ್ಟು?

author img

By

Published : Nov 16, 2019, 7:30 AM IST

ಕಳೆದ ಕೆಲವು ತಿಂಗಳ ಹಿಂದೆ ಸುರಿದ ಭಾರಿ ಮಳೆ ಹಾಗೂ ಜಲ ಪ್ರವಾಹದಿಂದ ರಾಜ್ಯದಲ್ಲಿ ಸಾವಿರಾರು ಕಿ.ಮೀ ರಸ್ತೆಗಳು ಹಾನಿಗೀಡಾಗಿದ್ದು, ನೂರಾರು ಸೇತುವೆಗಳು ಕೊಚ್ಚಿ ಹೋಗಿವೆ. ಅಪಾರ ಪ್ರಮಾಣದ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ನಷ್ಟ ಉಂಟಾಗಿದೆ. ಆದರೆ, ಇದರಲ್ಲಿ ಈವರೆಗೂ ಪೂರ್ಣಗೊಂಡಿರುವ ದುರಸ್ತಿ ಕಾಮಗಾರಿಗಳು ಮಾತ್ರ ಬೆರಳೆಣಿಕೆಯಷ್ಟಿವೆ.

ಲೋಕೋಪಯೋಗಿ ಇಲಾಖೆಯ ಅಂಕಿ ಅಂಶ

ಬೆಂಗಳೂರು: ಪ್ರವಾಹಕ್ಕೆ ರಾಜ್ಯದಲ್ಲಿ ಹಾನಿಗೀಡಾದ ರಸ್ತೆ, ಸೇತುವೆಗಳು ಅಪಾರ. ಆದರೆ, ಇದರಲ್ಲಿ ಈವರೆಗೂ ಪೂರ್ಣಗೊಂಡಿರುವ ದುರಸ್ತಿ ಕಾಮಗಾರಿಗಳು ಬೆರಳೆಣಿಕೆಯಷ್ಟು ಮಾತ್ರ.

ಲೋಕೋಪಯೋಗಿ ಇಲಾಖೆಯ ಇತ್ತೀಚಿನ ಅಂಕಿ-ಅಂಶಗಳಲ್ಲಿ ನೆರೆ ಪರಿಹಾರ ಕಾಮಗಾರಿ ಪ್ರಗತಿಯ ವಸ್ತುಸ್ಥಿತಿ‌ ನೋಡಿದರೆ ಶಾಕ್​ ಆಗುವುದು ಖಂಡಿತ. ಸಾವಿರಾರು ಕಿಲೋಮೀಟರ್ ರಸ್ತೆಗಳು ಹಾಗೂ ನೂರಾರು ಸೇತುವೆಗಳು ಭೀಕರ ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ನೆರೆಗೆ 1,166 ಕಿ.ಮೀ. ರಾಜ್ಯ ಹೆದ್ದಾರಿ, 2,341 ಕಿ.ಮೀ. ಪ್ರಮುಖ ಜಿಲ್ಲಾ ರಸ್ತೆಗಳು ಹಾನಿಯಾಗಿವೆ. ನೆರೆ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದ್ದರೂ, ವಾಸ್ತವದಲ್ಲಿ ಮಾತ್ರ ನಿರಾಶಾದಾಯಕವಾಗಿದೆ.

ಲೋಕೋಪಯೋಗಿ ಇಲಾಖೆಯ ಅಂಕಿ-ಅಂಶ ಇಂತಿದೆ...

ಉತ್ತರ ವಲಯ:

ಹಾನಿಯಾದ ರಸ್ತೆ, ಸೇತುವೆಗಳ ದುರಸ್ತಿಗೆ ಸಂಬಂಧಿಸಿದಂತೆ 1,016 ಕಾಮಗಾರಿಗಳ ಪೈಕಿ ಈವರೆಗೂ ಕೈಗೆತ್ತಿಕೊಂಡಿರುವ 724 ಕಾಮಗಾರಿಗಳು ಆರಂಭಿಕ ಹಂತದಲ್ಲಿವೆ. ಉಳಿದ 292 ಕಾಮಗಾರಿಗಳು ಇನ್ನೂ ಆರಂಭ ಆಗಿಲ್ಲ. ಅಂದಾಜು ₹ 3,017.43 ಕೋಟಿ ಹಾನಿಯಾಗಿದ್ದು, ₹ 227 ಕೋಟಿ ಮಾತ್ರ ಬಿಡುಗಡೆಯಾಗಿದೆ.

ದಕ್ಷಿಣ ವಲಯ:

ಒಟ್ಟು 667 ಕಾಮಗಾರಿಗಳ ಪೈಕಿ 384 ಕಾಮಗಾರಿಗಳನ್ನು ಮಾತ್ರ ಆರಂಭಿಸಲಾಗಿದ್ದು, ಇದರಲ್ಲಿ 133 ಮಾತ್ರ ಪೂರ್ಣಗೊಂಡಿವೆ. 256 ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, 278 ಕಾಮಗಾರಿಗಳು ಆರಂಭವೆ ಕಂಡಿಲ್ಲ. ಅಂದಾಜು ₹ 3,031.46 ಕೋಟಿ ನಷ್ಟ ಆಗಿದ್ದು, ದುರಸ್ತಿಗಾಗಿ ₹ 175 ಕೋಟಿ ಅನುದಾನ ನೀಡಲಾಗಿದೆ.

ಈಶಾನ್ಯ ವಲಯ:

ಈಶಾನ್ಯ ವಲಯದ 55 ಕಾಮಗಾರಿಗಳ ಪೈಕಿ 28 ಕಾಮಗಾರಿಗಳು ಆರಂಭವಾಗಿವೆ. ಇದರಲ್ಲಿ ಹಲವು ಪ್ರಗತಿ ಹಂತದಲ್ಲಿದ್ದು, ಅಂದಾಜು ₹ 40.15 ಕೋಟಿ ನಷ್ಟ ಉಂಟಾಗಿದೆ. ₹ 25 ಕೋಟಿ ಅನುದಾನ ನೀಡಲಾಗಿದೆ.

ಒಟ್ಟು ಕಾಮಗಾರಿ ಪ್ರಗತಿ ಹೀಗಿದೆ

ಮೂರು ವಲಯಗಳಲ್ಲಿನ ಒಟ್ಟು 1,738 ಕಾಮಗಾರಿಗಳ ಪೈಕಿ 1,131 ಕಾಮಗಾರಿಗಳು ಮಾತ್ರ ಆರಂಭಿಸಲಾಗಿದೆ. ಇದರಲ್ಲಿ 133 ಮಾತ್ರ ಪೂರ್ಣಗೊಂಡಿದ್ದು, 1,008 ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ 597 ಕಾಮಗಾರಿಗಳ ಕೆಲಸವೇ ಆರಂಭಿಸಿಲ್ಲ. ರಾಜ್ಯಾದ್ಯಂತ ನೆರೆಗೆ ಅಂದಾಜು ₹ 6,089 ಕೋಟಿ ಮೊತ್ತದ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಇದಕ್ಕಾಗಿ ಸರ್ಕಾರ ₹ 427 ಕೋಟಿ ನೀಡಿದೆ.

Intro:Body:KN_BNG_02_FLOODHITROADRESTORE_PROGRESS_SCRIPT_7201951

ಪ್ರವಾಹಕ್ಕೆ ಕೊಚ್ಚಿಹೋದ ರಸ್ತೆ, ಸೇತುವೆಗಳ ದುರಸ್ತಿ ಕಾಮಗಾರಿಗಳ ಪ್ರಗತಿಯ ಅಸಲಿ ಚಿತ್ರ ಹೀಗಿದೆ ನೋಡಿ!

ಬೆಂಗಳೂರು: ಪ್ರವಾಹಕ್ಕೆ ರಾಜ್ಯದಲ್ಲಿ ಹಾನಿಗೀಡಾದ ರಸ್ತೆ, ಸೇತುವೆಗಳು ಅಪಾರ, ಆದರೆ ಈವರೆಗೆ ಪೂರ್ಣಗೊಂಡಿರುವ ರಸ್ತೆ, ಸೇತುವೆಗಳ ದುರಸ್ತಿ ಕಾಮಗಾರಿಗಳು ಮಾತ್ರ ಎಳ್ಳಷ್ಟು. ಲೋಕೋಪಯೋಗಿ ಇಲಾಖೆಯ ಅಂಕಿಅಂಶದಲ್ಲಿ ನೆರೆ ಪರಿಹಾರ ಕಾಮಗಾರಿಯ ಪ್ರಗತಿಯ ವಸ್ತುಸ್ಥಿತಿ‌ಯ ಅಸಲಿ ಚಿತ್ರ ಗೊತ್ತಾಗುತ್ತದೆ.

ಭೀಕರ ಪ್ರವಾಹಕ್ಕೆ ರಾಜ್ಯದ ಸಾವಿರಾರು ಕಿಲೋಮೀಟರ್ ರಸ್ತೆಗಳು ಹಾಗೂ ನೂರಾರು ಸೇತುವೆಗಳು ಕೊಚ್ಚಿ ಹೋಗಿವೆ. ಲೋಕೋಪಯೋಗಿ ಅಂಕಿಅಂಶದ ಪ್ರಕಾರ ನೆರೆಗೆ ಒಟ್ಟು 1,166 ಕಿ.ಮೀ. ರಾಜ್ಯ ಹೆದ್ದಾರಿ, 2,341 ಕಿ.ಮೀ. ಪ್ರಮುಖ ಜಿಲ್ಲಾ ರಸ್ತೆಗಳು ಹಾನಿಯಾಗಿವೆ. ಲೋಕೋಪಯೋಗಿ ಇಲಾಖೆ ಒಟ್ಟು 1,738 ಕೆಲಸಗಳನ್ನು ಕೈಗೊಂಡಿದೆ. ಕಳೆದ ಮೂರು ತಿಂಗಳಲ್ಲಿ ನೆರೆಗೆ ಹಾನಿಗೊಳಗಾದ ರಸ್ತೆ, ಸೇತುವೆಗಳ ದುರಸ್ತಿ ಕಾಮಗಾರಿ ಪೂರ್ಣಗೊಂಡಿರುವ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ನೆರೆ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಿದ್ದೇವೆ ಎಂದು ಸರ್ಕಾರ ಹೇಳುತ್ತಿದ್ದರೂ, ವಾಸ್ತವದಲ್ಲಿ ರಸ್ತೆ, ಸೇತುವೆಗಳ ದುರಸ್ತಿ ಕಾಮಗಾರಿಗಳ ಪ್ರಗತಿ ಮಾತ್ರ ನಿರಾಶಾದಾಯಕವಾಗಿದೆ. ಇದಕ್ಕೆ ಲೋಕೋಪಯೋಗಿ ಇಲಾಖೆ ನೀಡಿದ ಕಾಮಗಾರಿಗಳ ಅಂಕಿಅಂಶ ಸಾಕ್ಷಿಯಾಗಿದೆ.

ಉತ್ತರ ವಲಯದಲ್ಲಿನ ಪ್ರಗತಿ ಎಷ್ಟು?:

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಉತ್ತರ ವಲಯದಲ್ಲಿ ನೆರೆಗೆ ಹಾನಿಗೀಡಾದ ರಸ್ತೆ, ಸೇತುವೆಗಳ ದುರಸ್ತಿಗೆ ಸಂಬಂಧಿಸಿದಂತೆ ಒಟ್ಟು 1,016 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 724 ಕಾಮಗಾರಿಗಳ ಕೆಲಸ‌ ಪ್ರಾರಂಭಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳ ಕೆಲಸ‌ ಪ್ರಗತಿ ಹಂತದಲ್ಲೇ ಇದೆ. ಹಿಡಿದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಇನ್ನು 292 ಕೆಲಸಗಳು ಇನ್ನೂ ಪ್ರಾರಂಭನೇ ಆಗಿಲ್ಲ. ಉತ್ತರ ವಲಯದಲ್ಲಿ ಸುಮಾರು 3,017.43 ಕೋಟಿ ರೂ. ಅಂದಾಜು ರಸ್ತೆ, ಸೇತುವೆಗಳು ಹಾನಿಯಾಗಿವೆ. ಈಗಾಗಲೇ ಸುಮಾರು 227 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.

ದಕ್ಷಿಣ ವಲಯದ ಪ್ರಗತಿ ಸ್ಥಿತಿಗತಿ:

ಇನ್ನು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ದಕ್ಷಿಣ ವಲಯದಲ್ಲಿ ಒಟ್ಟು 667 ಕೆಲಸಗಳನ್ನು ಕೈಗೆತ್ತಿಗೊಳ್ಳಲಾಗಿದೆ. ಇದರಲ್ಲಿ 384 ಕಾಮಗಾರಿಗಳ ಕೆಲಸವನ್ನು ಪ್ರಾರಂಭಿಸಲಾಗಿದೆ. ಆದರೆ ಸಂಪೂರ್ಣಗೊಂಡಿರುವುದು ಕೇವಲ 133 ಕೆಲಸಗಳು. 256 ಕಾಮಗಾರಿಗಳ ಕೆಲಸಗಳು ಇನ್ನೂ ಪ್ರಗತಿ ಹಂತದಲ್ಲೇ ಇದೆ.

278 ಕಾಮಗಾರಿ ಕೆಲಸವನ್ನು ಇನ್ನೂ ಪ್ರಾರಂಭಿಸಲಾಗಿಲ್ಲ. ದಕ್ಷಿಣ ವಲಯದಲ್ಲಿ 3031.46 ಕೋಟಿ ರೂ. ನಷ್ಟ ಆಗಿದೆ. ಇದಕ್ಕಾಗಿ ಒಟ್ಟು 175 ಕೋಟಿ ರೂ. ಅನುದಾನ ನೀಡಲಾಗಿದೆ.

ಈಶಾನ್ಯ ವಲಯದಲ್ಲಿನ ಪ್ರಗತಿ:

ಇತ್ತ ಈಶಾನ್ಯ ವಲಯದಲ್ಲಿನ ರಸ್ತೆ, ಸೇತುವೆಗಳ ಪ್ರಗತಿ ಕಾರ್ಯ ತೀರಾ ನಿರಾಶದಾಯಕವಾಗಿದೆ.

ಈಶಾನ್ಯ ವಲಯದಲ್ಲಿ ಒಟ್ಟು 55 ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಕೆಲಸ ಪ್ರಾರಂಭವಾಗಿದ್ದು 28. ಈ ಪೈಕಿ 28 ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ ಯಾವುದೇ ಕಾಮಗಾರಿಗಳು ಪೂರ್ಣಗೊಂಡಿಲ್ಲ.

27 ಕಾಮಗಾರಿಗಳ ಕೆಲಸವನ್ನು ಇನ್ನೂ ಪ್ರಾರಂಭಿಸಲಾಗಿಲ್ಲ. ಈಶಾನ್ಯ ವಲಯದಲ್ಲಿ ಸುಮಾರು 40.15 ಕೋಟಿ ರೂ.‌ ಮೊತ್ತದ ರಸ್ತೆ, ಸೇತುವೆಗಳು ನೆರೆಗೆ ಕೊಚ್ಚಿಹೋಗಿವೆ. ಅದಕ್ಕಾಗಿ ಸರ್ಕಸ್ 25 ಕೋಟಿ ರೂ. ಅನುದಾನ ನೀಡಿದೆ.

ಒಟ್ಟು ಕಾಮಗಾರಿ ಪ್ರಗತಿ ಹೀಗಿದೆ:

ದಕ್ಷಿಣ, ಉತ್ತರ ಹಾಗೂ ಈಶಾನ್ಯ ವಲಯದಲ್ಲಿ ಒಟ್ಟು 1738 ಕಾಮಗಾರಿಗಳ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಒಟ್ಟು 1,131 ಕಾಮಗಾರಿಗಳ ಕೆಲಸಗಳನ್ನು ಪ್ರಾರಂಭಿಸಲಾಗಿದೆ. ಆದರೆ ಪೂರ್ಣಗೊಂಡಿರುವುದು ಕೇವಲ 133 ಕಾಮಗಾರಿಗಳು.

ಒಟ್ಟು 1008 ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ ಸುಮಾರು 597 ಕಾಮಗಾರಿಗಳ ಕೆಲಸವೇ ಪ್ರಾರಂಭಿಸಲಾಗಿಲ್ಲ. ರಾಜ್ಯಾದ್ಯಂತ ನೆರೆಗೆ ಒಟ್ಟು 6,089 ಕೋಟಿ ರೂ. ಮೊತ್ತದ ರಸ್ತೆ, ಸೇತುವೆಗಳು ನೆರೆಗೆ ಕೊಚ್ಚಿ ಹೋಗಿವೆ. ಇದಕ್ಕಾಗಿ ಸರ್ಕಾರ ಒಟ್ಟು 427 ಕೋಟಿ ರೂ. ಹಣ ನೀಡಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.