ETV Bharat / city

SSLC ಪರೀಕ್ಷೆ: ಮೊದಲ ಪತ್ರಿಕೆಯ ಕೀ ಉತ್ತರ ರಿಲೀಸ್​, ನಿಮ್ಮ ಅಂಕ ಪರೀಕ್ಷಿಸಿಕೊಳ್ಳಿ

author img

By

Published : Jul 22, 2021, 10:55 PM IST

ಕೋವಿಡ್​ ಭೀತಿಯ ನಡುವೆ ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ನಡೆದಿವೆ. ಇದೀಗ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಕ್ಕೂ ಮುನ್ನ ಪ್ರಶ್ನೆಗಳ ಕೀ ಉತ್ತರ ಬಿಡುಗಡೆ ಮಾಡಿದೆ. ಈ ಮೂಲಕ ವಿದ್ಯಾರ್ಥಿಗಳು ತಮ್ಮ ಅಂಕಗಳ ಕುರಿತು ಮುಂಚಿತವಾಗಿಯೇ ಅಂದಾಜಿಸಬಹುದಾಗಿದೆ.

sslc-key-answers-released
ಎಸ್ಎಸ್ಎಲ್​ಸಿ ಬಹು ಆಯ್ಕೆ ಪ್ರಶ್ನೆಗಳ ಕೀಲಿ ಉತ್ತರ ಬಿಡುಗಡೆ

ಬೆಂಗಳೂರು: ಆರು ದಿನಗಳ ಪರೀಕ್ಷೆಗೆ ಈ ವರ್ಷ ಬ್ರೇಕ್ ಹಾಕಿ, ಎರಡು ದಿನಗಳ ಬಹುಆಯ್ಕೆ ಪ್ರಶ್ನೆಗಳ ಮಾದರಿ ಪ್ರಶ್ನೆಗಳ ಜೊತೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ಸುಗಮವಾಗಿ ನಡೆದಿದೆ. ಇದೀಗ ಶಿಕ್ಷಣ ಇಲಾಖೆ ಬಹು ಆಯ್ಕೆ ಪ್ರಶ್ನೆಗಳ ಉತ್ತರ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಫಲಿತಾಂಶ ಬರೋ ಮುನ್ನವೇ ತಮ್ಮ ಫಲಿತಾಂಶವನ್ನು ಅಂದಾಜಿಸಬಹುದಾಗಿದೆ‌.

ಜುಲೈ 19-22 ರಂದು ಎಸ್​​ಎಸ್​ಎಲ್​ಸಿ ಪರೀಕ್ಷೆ ಪೂರ್ಣಗೊಂಡಿದ್ದು, ಇದೀಗ ಮೊದಲ ಹಂತವಾಗಿ ಪ್ರಮುಖ ವಿಷಯಗಳು- ಪತ್ರಿಕೆ 1 ಗಣಿತ, ವಿಜ್ಞಾನ ಸಮಾಜ ವಿಜ್ಞಾನ ಹಾಗೂ ಪರ್ಯಾಯ ವಿಷಯಗಳಾದ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ ಮತ್ತು ಜೆ.ಟಿ.ಎಸ್ ವಿಷಯಗಳು - ಪತ್ರಿಕೆ 3 ಎಲಿಮೆಂಟ್ಸ್ ಆಫ್ ಮ್ಯಾನೇಜ್ಮೆಂಟ್ ಮತ್ತು ಎಲೆಕ್ಟ್ರಿಕ್ ಇಂಜಿನಿಯರಿಂಗ್, ಎಂಜಿನಿಯರಿಂಗ್ ಗ್ರಾಫಿಕ್ಸ್ 2, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ ವಿಷಯಗಳ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ.

ಇನ್ನು ಇಂದು ನಡೆದ ಭಾಷಾ ವಿಷಯದ ಕೀ ಉತ್ತರಗಳು ನಾಳೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಬಹುಆಯ್ಕೆ ಪ್ರಶ್ನೆಗಳ ಉತ್ತರ ವೀಕ್ಷಿಸಲು https://sslc.karnataka.gov.in ಲಾಗಿನ್ ಆಗಿ, ದಾಖಲೆಗಳು ಎಂಬ ಆಯ್ಕೆ ಮಾಡಿಕೊಂಡು ಎಸ್ಎಸ್ಎಲ್ ಸಿ- ನಂತರ ಪ್ರಶ್ನೆ ಪತ್ರಿಕೆ ಆಯ್ಕೆ ಮಾಡಿಕೊಂಡು ಮಾದರಿ ಪ್ರಶ್ನೆ ಪತ್ರಿಕೆ ಗಳ ಉತ್ತರ ಕೀ ಮೇಲೆ ಕ್ಲಿಕ್ ಮಾಡಿದರೆ ಲಭ್ಯವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.