ETV Bharat / city

ಅನ್ನಭಾಗ್ಯ ಅಕ್ಕಿ ಕಡಿತಗೊಳಿಸಿದರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ : ಎಚ್ ಕೆ ಪಾಟೀಲ್​

author img

By

Published : Apr 22, 2021, 6:50 PM IST

ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿಯಲ್ಲಿ 3 ಕೆ.ಜಿಗೆ ಕಡಿತ ಮಾಡುವ ತೀರ್ಮಾನ ಕೈಗೊಳ್ಳಬಾರದು. ಈಗಾಗಲೇ ನೀಡಿದ ಭರವಸೆಯಂತೆ 5 ಕೆ.ಜಿ ಅಕ್ಕಿ ಜೊತೆ 3 ಕೆ.ಜಿ ಗೋಧಿ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕು. ಬಡವರ ವಿರೋಧಿ ನಿಲುವು ಕೈಗೊಂಡರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಸ್ಥಿತಿ ಎದುರಿಸಬೇಕಾಗಿ ಬರಲಿದೆ ಎಂದು ಮಾಜಿ ಸಚಿವ ಎಚ್​ ಕೆ ಪಾಟೀಲ್​ ಅವರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಹೆಚ್ ಕೆ ಪಾಟಿಲ್
ಹೆಚ್ ಕೆ ಪಾಟಿಲ್

ಬೆಂಗಳೂರು: ರಾಜ್ಯ ಸರ್ಕಾರ ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿದರೆ ಅದು ಜನತೆಗೆ ಮಾಡಿದ ಬಹುದೊಡ್ಡ ಅನ್ಯಾಯವಾಗಲಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 7 ಕೆ.ಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆ ಅಡಿ ನೀಡುತ್ತಿತ್ತು. ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಇದರಲ್ಲಿ 2 ಕೆ.ಜಿ ಕಡಿತಗೊಳಿಸಿ 5 ಕೆ.ಜಿಗೆ ಇಳಿಸಿತ್ತು. ಆದರೆ ಇದೀಗ ಮಾಧ್ಯಮಗಳಲ್ಲಿ ಮತ್ತೆ 3ಕೆ.ಜಿ ಕಡಿತ ಮಾಡಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಲಭಿಸಿದೆ. ಈ ರೀತಿ ಕ್ರಮ ಕೈಗೊಂಡರೆ ಅದು ರಾಜ್ಯದ ಜನತೆಯ ಪಾಲಿಗೆ ಅತ್ಯಂತ ಮಾರಕ ನಿರ್ಧಾರ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ ಕೆ ಪಾಟಿಲ್
ಹೆಚ್ ಕೆ ಪಾಟೀಲ್ ಮಾಧ್ಯಮ ಪ್ರಕಟಣೆ

ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿಯಲ್ಲಿ 3 ಕೆ.ಜಿಗೆ ಕಡಿತ ಮಾಡುವ ತೀರ್ಮಾನ ಕೈಗೊಳ್ಳಬಾರದು. ಈಗಾಗಲೇ ನೀಡಿದ ಭರವಸೆಯಂತೆ 5 ಕೆ.ಜಿ ಅಕ್ಕಿ ಜೊತೆ 3 ಕೆ.ಜಿ ಗೋಧಿ ನೀಡುವ ಕಾರ್ಯವನ್ನು ಮಾಡಬೇಕು. ಬಡವರ ವಿರೋಧಿ ನಿಲುವು ಕೈಗೊಂಡರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಸ್ಥಿತಿ ಎದುರಿಸಬೇಕಾಗಿ ಬರಲಿದೆ ಎಂದು ಎಚ್​ಕೆಪಿ ಎಚ್ಚರಿಸಿದ್ದಾರೆ.

ದಿನೇಶ್ ಗುಂಡೂರಾವ್ ವಿರೋಧ: ರಾಜ್ಯ ಸರ್ಕಾರದ ಈ ಯೋಚನೆಯನ್ನು ಖಂಡಿಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಇಂತಹ ಕಷ್ಟ ಕಾಲದಲ್ಲಿ ⁦ ರಾಜ್ಯ ಬಿಜೆಪಿ ⁩ಸರ್ಕಾರ ಜನರಿಗೆ ದೊಡ್ಡ ಆಘಾತ ನೀಡಿದೆ. ನಾನು ಸರ್ಕಾರದವರಿಗೆ ಆಗ್ರಹಿಸುತ್ತೇನೆ, ಪಡಿತರದಾರರಿಗೆ ಅಕ್ಕಿಯನ್ನು ಕಡಿತ ಮಾಡಬಾರದು. ಹೆಚ್ಚುವರಿಯಾಗಿ ಬೇಕಾದರೆ ರಾಗಿ/ ಜೋಳ ನೀಡಿ. ಈ ಅಮಾನವೀಯ ನಿರ್ಧಾರವನ್ನು ಹಿಂಪಡೆಯರಿ ಎಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.