ETV Bharat / city

ಖಾಸಗಿ ಬಸ್ ದರ ಸುಲಿಗೆ ಆರೋಪ: ಆರ್​ಟಿಒ ಅಧಿಕಾರಿಗಳಿಂದ ದಿಢೀರ್​ ತಪಾಸಣೆ

author img

By

Published : Apr 10, 2021, 10:46 PM IST

ಶಿವಮೊಗ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್​ನವರಿಂದ ಹೆಚ್ಚುವರಿ ದರ ವಸೂಲಿ ಮಾಡಲಾಗಿದ್ದು, 370ರ ಬದಲು 400 ರೂ. ದರ ಕೇಳಿದ ಖಾಸಗಿ ಬಸ್ ಕಂಡಕ್ಟರ್ ವಿರುದ್ಧ ರೊಚ್ಚಿಗೆದ್ದ ಪ್ರಯಾಣಿಕರ ಗಲಾಟೆಯಲ್ಲಿ ಜಂಟಿ ಆಯುಕ್ತ ಹಾಲಸ್ವಾಮಿ ಮಧ್ಯಪ್ರವೇಶ ಮಾಡಿದರು. ಪ್ರಯಾಣಿಕರಿಂದ ಪಡೆದ ಹೆಚ್ಚುವರಿ ದರ ವಾಪಸ್ ಕೊಡಿಸಿದ ಹಾಲಸ್ವಾಮಿ ಎಲ್ಲಾ ಖಾಸಗಿ ಬಸ್​ಗಳಲ್ಲೂ ಜಿಲ್ಲಾವಾರು ದರ ಪಟ್ಟಿ ಅಂಟಿಸಿದರು.

ಆರ್.ಟಿ.ಓ ಅಧಿಕಾರಿ
ಆರ್.ಟಿ.ಓ ಅಧಿಕಾರಿ

ಬೆಂಗಳೂರು: ಖಾಸಗಿ‌ ಬಸ್​ಗಳ ದರ ಸುಲಿಗೆ ಆರೋಪ ಹಿನ್ನೆಲೆ ಮೆಜೆಸ್ಟಿಕ್ ಹಾಗೂ ಕೆಎಸ್ಆರ್​ಟಿಸಿ ಬಸ್​​ ನಿಲ್ದಾಣಕ್ಕೆ ಮಫ್ತಿಯಲ್ಲಿ ಬಂದ ಅಪರ ಸಾರಿಗೆ ಆಯುಕ್ತ ನರೇಂದ್ರ ಹೊಳಲ್ಕರ ನೇತೃತ್ವದ ತಂಡ ತಪಾಸಣೆ ನಡೆಸಿತು.

ಪ್ರಯಾಣಿಕರಿಂದಲೂ ದರದ ಬಗ್ಗೆ ಮಾಹಿತಿ ಪಡೆದ ನರೇಂದ್ರ ಹೋಳ್ಕರ್, ದರ ಪಟ್ಟಿ ಹಿಡಿದು ಜನರ ಬಳಿ ದರದ ಬಗ್ಗೆ ವಿಚಾರಣೆ ನಡೆಸಿದರು. ಖಾಸಗಿ ಬಸ್‌ಗಳ ದುಪ್ಪಟ್ಟು ಸುಲಿಗೆ ಬಗ್ಗೆ ವಿಚಾರಣೆ ನೆಡೆಸಿ, ಹೆಚ್ಚು ದರ ಪಡೆಯದಂತೆ ಖಾಸಗಿ‌ ಬಸ್​ನವರಿಗೂ ತಾಕೀತು ಮಾಡಿದರು.

ಆರ್.ಟಿ.ಒ ಅಧಿಕಾರಿಗಳಿಂದ ದರ ತಪಾಸಣೆ

ಅಲ್ಲದೆ, ಜಂಟಿ ಸಾರಿಗೆ ಆಯುಕ್ತ ಹಾಲಸ್ವಾಮಿ ಕೂಡ ಭೇಟಿ ನೀಡಿ ಪರಿಶೀಲನೆ ನೆಡೆಸಿದರು. ಹಾಲಸ್ವಾಮಿ ಸಮ್ಮುಖದಲ್ಲೇ ಪ್ರಯಾಣಿಕರಿಂದ ಹೆಚ್ಚು ದರ ವಸೂಲು ಮಾಡಿದ್ದು ಕಂಡು ಬಂದಿತು. ಶಿವಮೊಗ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್​ನವರಿಂದ ಹೆಚ್ಚುವರಿ ದರ ವಸೂಲು ಮಾಡಲಾಗಿದ್ದು, 370ರ ಬದಲು 400 ರೂ. ದರ ಕೇಳಿದ ಖಾಸಗಿ ಬಸ್ ಕಂಡಕ್ಟರ್ ವಿರುದ್ಧ ರೊಚ್ಚಿಗೆದ್ದ ಪ್ರಯಾಣಿಕರ ಗಲಾಟೆಯಲ್ಲಿ ಜಂಟಿ ಆಯುಕ್ತ ಹಾಲಸ್ವಾಮಿ ಮಧ್ಯಪ್ರವೇಶ ಮಾಡಿದರು. ಪ್ರಯಾಣಿಕರಿಂದ ಪಡೆದ ಹೆಚ್ಚುವರಿ ದರ ವಾಪಸ್ ಕೊಡಿಸಿದ ಹಾಲಸ್ವಾಮಿ ಎಲ್ಲಾ ಖಾಸಗಿ ಬಸ್​ಗಳಲ್ಲೂ ಜಿಲ್ಲಾವಾರು ದರ ಪಟ್ಟಿ ಅಂಟಿಸಿದರು.

ಹಬ್ಬದ ಸಂಭ್ರಮದಲ್ಲಿ ಭರಪೂರ ಆದಾಯ ನಿರೀಕ್ಷಿಸಿದ್ದ ಖಾಸಗಿ ಬಸ್ ಮಾಲೀಕರ ಆದಾಯಕ್ಕೂ ಖೋತಾ

ಕೊರೊನಾ ಹಾಗೂ ಬಸ್​ ಮುಷ್ಕರ ಹಿನ್ನೆಲೆ ಸಾಲು ಸಾಲು ರಜೆ ಇದ್ದರೂ ಊರುಗಳಿಗೆ ಹೋಗಲು ಜನರ ಹಿಂದೇಟು ಹಾಕುತ್ತಿದ್ದಾರೆ. ಇವತ್ತು ಎರಡನೇ ಶನಿವಾರ, ನಾಳೆ ಭಾನುವಾರ ರಜೆ, ಸೋಮವಾರ ಒಂದು ದಿನ ಮಾತ್ರ ರಜೆ ಇಲ್ಲದಾಗಿದ್ದು, ಮಂಗಳವಾರ ಮತ್ತು ಬುಧವಾರ ಎರಡೂ ದಿನ ರಜೆ ಇದೆ, ಸಾಲು ಸಾಲು‌ ರಜೆ ಇದ್ದರೂ ಊರುಗಳಿಗೆ ಹೋಗಲು ಜನರ ಹಿಂದೇಟು ಹಾಕುತ್ತಿದ್ದಾರೆ.

ಯುಗಾದಿ ಹಬ್ಬದ ಸಂದರ್ಭದಲ್ಲೂ ಪ್ರಯಾಣಿಕರ ಕೊರತೆ ಖಾಸಗಿ ಬಸ್​ಗಳು ಎದುರಿಸುತ್ತಿದ್ದಾರೆ. ಬಸ್​​ ನಿಲ್ದಾಣದತ್ತ ಪ್ರಯಾಣಿಕರೇ ಬರುತ್ತಿಲ್ಲ. ಇದರಿಂದ ಹಬ್ಬದ ಸಂದರ್ಭದಲ್ಲಿ ಭರಪೂರ ಆದಾಯ ನಿರೀಕ್ಷಿಸಿದ್ದ ಖಾಸಗಿ ಬಸ್ ಮಾಲೀಕರು ಆದಾಯಕ್ಕೂ ಖೋತಾ ಬಿದ್ದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.