ETV Bharat / city

ಬಿಜೆಪಿ ಕಚೇರಿಯಲ್ಲಿ ಸಿಎಂಗೆ ಮುಜುಗರ : ಕತ್ತಲಲ್ಲಿ ಭಾಷಣ ಮಾಡಿದ ಬಸವರಾಜ ಬೊಮ್ಮಾಯಿ

author img

By

Published : Jan 28, 2022, 7:27 PM IST

Updated : Jan 28, 2022, 8:00 PM IST

ಸೇವಾ ಮನೋಭಾವದಿಂದ ಸಾರ್ವಜನಿಕ ಜೀವನದಲ್ಲಿ ಬಂದವರೆಲ್ಲರೂ ಸೇರಿ ಬಿಜೆಪಿಯನ್ನು ಕಟ್ಟಿದ್ದಾರೆ. ಇಂತಹ ಮೇರು ಪಂಕ್ತಿ ಹಾಕಿರುವ ರಾಷ್ಟ್ರೀಯ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದು, ನನ್ನ ಮೇಲೆ ಗುರುತರವಾದ ಜವಾಬ್ದಾರಿ ಇದೆ. ಈ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು..

power-interruption
ಕತ್ತಲಲ್ಲಿ ಭಾಷಣ

ಬೆಂಗಳೂರು : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಸಂದ ಹಿನ್ನೆಲೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾಷಣದ ವೇಳೆ ಪದೇಪದೆ ವಿದ್ಯುತ್​ ಕಡಿತಗೊಂಡು ಸಿಎಂ ಅವರು ಮುಜುಗರಗೊಂಡ ಘಟನೆ ನಡೆಯಿತು.

ಮುಖ್ಯಮಂತ್ರಿಗಳಾಗಿ 6 ತಿಂಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಮಲ್ಲೇಶ್ವರದಲ್ಲಿನ ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ಅಭಿನಂದಿಸಲಾಯಿತು.

ಕತ್ತಲಲ್ಲಿ ಭಾಷಣ ಮಾಡಿದ ಬಸವರಾಜ ಬೊಮ್ಮಾಯಿ

ಈ ವೇಳೆ ಪ್ರಾಸ್ತಾವಿಕವಾಗಿ ಸಂಸದ ಪಿ.ಸಿ ಮೋಹನ್ ಮಾತನಾಡುವಾಗ ವಿದ್ಯುತ್ ಕೈಕೊಟ್ಟು ಕತ್ತಲಲ್ಲೇ ಭಾಷಣ ಮಾಡುವಂತಾಯಿತು. ನಂತರ ಮುಖ್ಯಮಂತ್ರಿಗಳು ಭಾಷಣ ಮಾಡುವಾಗಲೂ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರೆಸಿತು.

15 ಬಾರಿ ವಿದ್ಯುತ್ ಕೈಕೊಟ್ಟು ನಂತರ ಕತ್ತಲಲ್ಲೇ ಸಿಎಂ ಭಾಷಣ ಮಾಡಿ ಮುಗಿಸಬೇಕಾಯಿತು. ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಇಂತಹ ಲೋಪವಾದರೂ ಸರಿಪಡಿಸಲು ಸಿಬ್ಭಂದಿ ವಿಫಲವಾಗಿದ್ದಕ್ಕೆ ಸ್ವತಃ ಸಿಎಂ ಮುಜುಗರಕ್ಕೊಳಗಾದರು.

ಕಾರ್ಯಕ್ರಮದಲ್ಲಿ ಸಿಎಂ ಹೇಳಿದ್ದೇನು?

ಸೇವಾ ಮನೋಭಾವದಿಂದ ಸಾರ್ವಜನಿಕ ಜೀವನದಲ್ಲಿ ಬಂದವರೆಲ್ಲರೂ ಸೇರಿ ಬಿಜೆಪಿಯನ್ನು ಕಟ್ಟಿದ್ದಾರೆ. ಇಂತಹ ಮೇರು ಪಂಕ್ತಿ ಹಾಕಿರುವ ರಾಷ್ಟ್ರೀಯ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದು, ನನ್ನ ಮೇಲೆ ಗುರುತರವಾದ ಜವಾಬ್ದಾರಿ ಇದೆ. ಈ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು.

ಓದಿ: ಬಿಹಾರದಲ್ಲಿ ಸೇನಾ ವಿಮಾನ ಪತನ; ಇಬ್ಬರು ಪೈಲಟ್​ಗಳು ಪ್ರಾಣಾಪಾಯದಿಂದ ಪಾರು

ಸರ್ಕಾರಕ್ಕೆ 6 ತಿಂಗಳು ಸಂದಿರುವುದು ಮತ್ತು ನನ್ನ ಹುಟ್ಟುಹಬ್ಬ ಒಂದೇ ದಿನ ಬಂದಿರುವುದು ಕಾಕತಾಳೀಯ. 6 ತಿಂಗಳ ಸಾಧನಾ ಸಂಭ್ರಮಾಚರಣೆ ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ, ಜನರಿಗೆ ನನ್ನ ರಿಪೋರ್ಟ್ ಕಾರ್ಡ್ ಕೊಡಬೇಕಿತ್ತು. ನಮ್ಮ ಸರ್ಕಾರ ಏನು ಮಾಡಿದೆ ಎಂದು ಕರ್ನಾಟಕದ ಜನತೆಯ ಮುಂದೆ ಇಡಬೇಕಿತ್ತು. ಅದಕ್ಕಾಗಿ ಎರಡು ಪುಸ್ತಕಗಳನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಕಳೆದ 6 ತಿಂಗಳಿನಲ್ಲಿ ಒಂದು ಕಡೆ ಕೊರೊನಾ ಮತ್ತೊಂದು ಕಡೆ ಪ್ರವಾಹ 2 ಸಂಕಷ್ಟಗಳನ್ನು ಏಕಕಾಲದಲ್ಲಿ ಎದುರಿಸಿದ್ದೇವೆ. ಆರ್ಥಿಕ ಹಿಂಜರಿತದಲ್ಲೂ ರೈತಾಪಿ ವರ್ಗ, ದುಡಿಯುವ ವರ್ಗ, ಕೂಲಿ ಕಾರ್ಮಿಕರು, ದೀನ-ದಲಿತರ ಕೈಬಿಟ್ಟಿಲ್ಲ. ಎಲ್ಲರ ಹಿತ ಗಮನಿಸಿ ಕೆಲಸ ಮಾಡಿದ್ದೇವೆ ಎಂದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated :Jan 28, 2022, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.