ಬೆಂಗಳೂರು ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ!

author img

By

Published : Jan 13, 2022, 1:23 PM IST

no permission to two wheelers on Nice Road at night time in Bangalore

ಇದೇ ತಿಂಗಳ 16ರಿಂದ ರಾತ್ರಿ 10ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಬೆಂಗಳೂರು: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಮುಂದಾಗಿರುವ ನೈಸ್ ಸಂಸ್ಥೆ ಇದೇ ತಿಂಗಳ 16ರಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ ಹೇರಿದೆ.

ಸುರಕ್ಷತಾ ದೃಷ್ಟಿಯಿಂದ ರಾತ್ರಿ ವೇಳೆ ಟೂ ವೀಲರ್​ಗೆ ನಿಷೇಧ ಹೇರಲಾಗಿದೆ. ಸರಣಿ ಅಪಘಾತಗಳಿಂದ ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗಿತ್ತು.‌ ಅಲ್ಲದೇ ರಾತ್ರಿ ಸಮಯದಲ್ಲಿ ವೇಗವಾಗಿ ಚಾಲನೆ ಮಾಡುತ್ತಿದ್ದ ಇತರ ವಾಹನಗಳು ಟೂ ವೀಲರ್ಸ್ ಗಳನ್ನು ಗಮನಕ್ಕೆ ಇಟ್ಟುಕೊಳ್ಳುತ್ತಿರಲಿಲ್ಲ. ಈ ಕಾರಣದಿಂದ ಬೈಕ್ ಅಪಘಾತಗಳು ಹೆಚ್ಚಾಗಿತ್ತು‌.‌ ಇದೇ ಕಾರಣಕ್ಕೆ ರಾತ್ರಿ ಸಮಯದಲ್ಲಿ ನೈಸ್​ ರಸ್ತೆಯಲ್ಲಿ ಬೈಕ್​ಗಳಿಗೆ ನೋ ಎಂಟ್ರಿ ಮಾಡಬೇಕು ಎಂದು ಸಂಚಾರಿ ಜಂಟಿ ಆಯುಕ್ತ ರವಿಕಾಂತೇಗೌಡ ನೈಸ್ ಸಂಸ್ಥೆಗೆ ಸೂಚಿಸಿದ್ದರು.‌

ಇದನ್ನೂ ಓದಿ: ಹೈಕೋರ್ಟ್​​ ಮೆಟ್ಟಿಲೇರಿದ ಶುಲ್ಕ ಪಾವತಿಸದ ವಿದ್ಯಾರ್ಥಿ.. ಪರೀಕ್ಷೆ ಬರೆಯಲು ಅನುಮತಿಸಿ ಎಂದ ನ್ಯಾಯಾಲಯ!

ಈ ಹಿನ್ನೆಲೆ ಇದೇ 16ರಿಂದ ನೈಸ್ ರಸ್ತೆಯಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೆ ಸಂಚಾರಕ್ಕೆ ನಿರ್ಬಂಧ ಹೇರಿ ನೈಸ್ ಸಂಸ್ಥೆ ಅಧಿಕೃತ ಆದೇಶ ಹೊರಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.