ETV Bharat / city

ಶಿಕ್ಷಕರ ನೇಮಕ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಇಲ್ಲ: ಸಚಿವರ ಸ್ಪಷ್ಟನೆ

author img

By

Published : May 10, 2022, 5:08 PM IST

ಶಿಕ್ಷಕ ನೇಮಕಾತಿ ಪರೀಕ್ಷೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ಶಿಕ್ಷಕರ ನೇಮಕಾತಿ ಪರೀಕ್ಷಾ ದಿನಾಂ
ಶಿಕ್ಷಕರ ನೇಮಕಾತಿ ಪರೀಕ್ಷಾ ದಿನಾಂ

ಬೆಂಗಳೂರು: ಮೇ 21, 22 ರಂದು ಶಿಕ್ಷಕ ನೇಮಕಾತಿ ಪರೀಕ್ಷೆ ನಡೆಯುತ್ತದೆ ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರೀಕ್ಷಾ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ. ಸಮಾಜ ವಿಜ್ಞಾನದಲ್ಲಿ ವಿಷಯದಲ್ಲಿ 1:50 ಇದೆ. ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. 1,06,083 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 435 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಚಿಕ್ಕೋಡಿಯಲ್ಲಿ ಹೆಚ್ಚು ಕೇಂದ್ರಗಳಿವೆ. ಸುಮಾರು 11 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಹೀಗಾಗಿ ಅಲ್ಲಿ ಕೇಂದ್ರ ಜಾಸ್ತಿ ಮಾಡಲಾಗಿದೆ ಎಂದರು.

ಇಂದು ಉನ್ನತ ಅಧಿಕಾರಿಗಳ‌ ಜೊತೆಗೆ ಸಭೆ ಮಾಡಿ ಅನುಭವಗಳನ್ನ ಪಡೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಎಲೆಕ್ಟ್ರಾನಿಕ್ ವಸ್ತುಗಳನ್ನ ತರುವಂತಿಲ್ಲ. ಪರೀಕ್ಷೆ ಕೇಂದ್ರಕ್ಕೆ ತರಬೇಡಿ ಎಂದು ತಿಳಿಸಿದ್ದೇವೆ. ಒಂದು ಗಂಟೆ ಒಳಗೆ ಕೇಂದ್ರಗಳಿಗೆ ಬರಬೇಕು. ಅರ್ಧ ಗಂಟೆಗೆ ಮುಂಚಿತವಾಗಿ ಕೊಠಡಿಗೆ ಬರಬೇಕು. ಪ್ರತಿರೂಮ್​​ನಲ್ಲೂ ಗಡಿಯಾರ, ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು. ಎಲ್ಲಾ ತರದ ಸಲಹೆ ತೆಗೆದುಕೊಳ್ಳಲಾಗಿದೆ. ಒಂದು ರೂಮ್​​ನಲ್ಲಿ 20 ಜನರು ಮಾತ್ರ ಇರ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಯಾವ ಗೊಂದಲಕ್ಕೀಡಾಗದೆ ಪರೀಕ್ಷೆಗೆ ಬರಬೇಕು ಎಂದು ತಿಳಿಸಿದರು.

ಸೂಕ್ಷ್ಮ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡ್ತೀವಿ. ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಸಿಇಒ, ಎಸ್ಪಿಗಳ ನೇತೃತ್ವದಲ್ಲಿ ಕಮಿಟಿ ಮಾಡಲಾಗಿದೆ. ಪರೀಕ್ಷೆ ಜವಾಬ್ದಾರಿ ಈ ಕಮಿಟಿ ನೋಡುತ್ತದೆ. ಪರೀಕ್ಷೆಗೆ ಖಾಸಗಿ ಶಾಲಾ ಕೊಠಡಿಗಳನ್ನ ತೆಗೆದುಕೊಳ್ತೀವಿ. ಆ ಶಾಲೆಯನ್ನ ಶಿಕ್ಷಣ ಇಲಾಖೆ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತದೆ ಮತ್ತು ಅದೇ ಶಾಲೆಯ ಶಿಕ್ಷಕರನ್ನು ಪರೀಕ್ಷೆಗಳಿಗೆ ಬಳಸಿಕೊಳ್ಳುವುದಿಲ್ಲ. ಪ್ರತಿ ಕೇಂದ್ರಕ್ಕೂ ತಹಶೀಲ್ದಾರ್ ಮೇಲ್ಪಟ್ಟ ಅಧಿಕಾರಿಗಳನ್ನ ನೇಮಕ ಮಾಡಲಾಗುವುದು. ಪರೀಕ್ಷಾ ಕೇಂದ್ರದಲ್ಲಿ 144 ಸೆಕ್ಷನ್ ಇರಲಿದೆ. ಪೊಲೀಸ್ ಇಲಾಖೆ ಸಂಪೂರ್ಣ ಹದ್ದಿನ ಕಣ್ಣು ಇಟ್ಟಿದೆ ಎಂದು ವಿವರಿಸಿದರು.

(ಓದಿ: ಇದೇ ತಿಂಗಳ ಮೂರನೇ ವಾರದಲ್ಲಿ SSLC ಫಲಿತಾಂಶ ಪ್ರಕಟ: ಸಚಿವ ನಾಗೇಶ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.