ETV Bharat / city

ಮುಜರಾಯಿ ದೇವಸ್ಥಾನ ಭಕ್ತರ ಸುಪರ್ದಿಗೆ : ಮೋಹನ್ ಭಾಗವತ್ ಹೇಳಿಕೆಗೆ ದಿನೇಶ್ ಗುಂಡೂರಾವ್ ಕಿಡಿ

author img

By

Published : Oct 17, 2021, 10:17 PM IST

ನಮ್ಮ ರಾಜ್ಯವೊಂದರಲ್ಲೇ ಎಬಿಸಿ ಕೆಟಗರಿಯ 36 ಸಾವಿರ ದೇವಸ್ಥಾನಗಳಿವೆ. ಇವುಗಳ ಆಸ್ತಿ ಮೌಲ್ಯ ಸುಮಾರು 10 ಲಕ್ಷ ಕೋಟಿ. ಈ ದೇವಸ್ಥಾನಗಳ ಸುಪರ್ದಿ ಖಾಸಗಿ ವ್ಯಕ್ತಿಗಳ ಪಾಲಾದರೆ ದೇಗುಲದ ಆಸ್ತಿಗಳ ರಕ್ಷಣೆಯ ಹೊಣೆ ಯಾರದ್ದು? ಇದು ಭೂ ಅವ್ಯವಹಾರಕ್ಕೆ ಆಸ್ಪದ ನೀಡಿದಂತಲ್ಲವೆ?. ಹಾಗಾಗಿ, ದೇಗುಲಗಳ ನಿರ್ವಹಣೆ ಸರ್ಕಾರದ ಬಳಿಯೇ ಇರುವುದು ಸಮಂಜಸ..

Dinesh Gundu Rao
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು : ಮೋಹನ್ ಭಾಗವತ್ ಮಾತು ಕೇಳಿಕೊಂಡು ದೇವಾಲಯಗಳನ್ನು ಖಾಸಗಿಯವರ ಕೈಗೆ ನೀಡುವ ಕಾರ್ಯವನ್ನು ಸರ್ಕಾರ ಮಾಡಬಾರದು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.

  • 1
    ಮುಜರಾಯಿ ದೇವಸ್ಥಾನಗಳನ್ನು ಭಕ್ತರ ಸುಪರ್ದಿಗೆ ನೀಡಬೇಕು ಎಂಬ ಮೋಹನ್ ಭಾಗವತ್ ಹೇಳಿಕೆಯಲ್ಲಿ ಅರ್ಥವಿಲ್ಲ.

    ಇದು ಪೂಜಾವೃತ್ತಿಯನ್ನು ನಂಬಿರುವ ಅಸಂಖ್ಯಾತ ಅರ್ಚಕ ಸಮುದಾಯದ ಬದುಕಿನ ಮೇಲೆ ಪರಿಣಾಮ ಬೀರಲಿದೆ.

    ಖಾಸಗಿ ವ್ಯಕ್ತಿಗಳಿಗೆ ದೇಗುಲ ನಿರ್ವಹಣೆ ನೀಡಿದರೆ ಅರ್ಚಕರ ಬದುಕಿಗೆ ಭದ್ರತೆ ಒದಗಿಸುವರ್ಯಾರು?

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 17, 2021 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮುಜರಾಯಿ ದೇವಸ್ಥಾನಗಳನ್ನು ಭಕ್ತರ ಸುಪರ್ದಿಗೆ ನೀಡಬೇಕು ಎಂಬ ಮೋಹನ್ ಭಾಗವತ್ ಹೇಳಿಕೆಯಲ್ಲಿ ಅರ್ಥವಿಲ್ಲ. ಇದು ಪೂಜಾವೃತ್ತಿಯನ್ನು ನಂಬಿರುವ ಅಸಂಖ್ಯಾತ ಅರ್ಚಕ ಸಮುದಾಯದ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಖಾಸಗಿ ವ್ಯಕ್ತಿಗಳಿಗೆ ದೇಗುಲ ನಿರ್ವಹಣೆ ನೀಡಿದರೆ ಅರ್ಚಕರ ಬದುಕಿಗೆ ಭದ್ರತೆ ಒದಗಿಸುವರ್ಯಾರು? ಎಂದು ಪ್ರಶ್ನಿಸಿದ್ದಾರೆ.

ನಮ್ಮ ರಾಜ್ಯವೊಂದರಲ್ಲೇ ಎಬಿಸಿ ಕೆಟಗರಿಯ 36 ಸಾವಿರ ದೇವಸ್ಥಾನಗಳಿವೆ. ಇವುಗಳ ಆಸ್ತಿ ಮೌಲ್ಯ ಸುಮಾರು 10 ಲಕ್ಷ ಕೋಟಿ. ಈ ದೇವಸ್ಥಾನಗಳ ಸುಪರ್ದಿ ಖಾಸಗಿ ವ್ಯಕ್ತಿಗಳ ಪಾಲಾದರೆ ದೇಗುಲದ ಆಸ್ತಿಗಳ ರಕ್ಷಣೆಯ ಹೊಣೆ ಯಾರದ್ದು? ಇದು ಭೂ ಅವ್ಯವಹಾರಕ್ಕೆ ಆಸ್ಪದ ನೀಡಿದಂತಲ್ಲವೆ?. ಹಾಗಾಗಿ, ದೇಗುಲಗಳ ನಿರ್ವಹಣೆ ಸರ್ಕಾರದ ಬಳಿಯೇ ಇರುವುದು ಸಮಂಜಸ ಎಂದು ಹೇಳಿದ್ದಾರೆ.

ಭಾಗವತ್​​ ಅವರ ಹೇಳಿಕೆಯನ್ನು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರ ಒಕ್ಕೂಟದ ಅಧ್ಯಕ್ಷನಾಗಿ ಖಂಡಿಸುತ್ತೇನೆ. ಅರ್ಚಕ ವೃತ್ತಿ ಲಾಭದಾಯಕ ವೃತ್ತಿಯಲ್ಲ. ಅರ್ಚಕರಿಗೆ ಸಂಭಾವನೆಯೂ ಇಲ್ಲ. ಭಾಗವತ್‌ರ ಹೇಳಿಕೆ ಅರ್ಚಕರಷ್ಟೇ ಅಲ್ಲದೆ, ದೇವಸ್ಥಾನಕ್ಕೆ ಸಂಬಂಧಪಟ್ಟ ಲಕ್ಷಾಂತರ ಹೊರಾಂಗಣ ನೌಕರರ ಬದುಕಿಗೂ ಕೊಳ್ಳಿ‌ ಇಡಲಿದೆ ಎಂದು ಕಿಡಿಕಾರಿದರು.

ಹತ್ತು ಹಲವು ಕ್ಷೇತ್ರವನ್ನು ಈಗಾಗಲೇ ಖಾಸಗಿಯವರ ಕೈಗಿಟ್ಟಿರುವ ಸರ್ಕಾರ ದೇಶದ ಪ್ರಗತಿಯನ್ನು ಖಾಸಗಿಯವರ ಕೈಗೆ ನೀಡಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭ ಖಾಸಗಿ ಸ್ವತ್ತನ್ನು ಸರ್ಕಾರದ ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಿತ್ತು.

ಆದರೆ, ಈಗಿನ ಸರ್ಕಾರ ಮರಳಿ ಖಾಸಗಿಯವರ ಕೈಗೆ ನೀಡಿ, ದೇಶವನ್ನು ಮತ್ತೆ ಜಾಗತೀಕರಣ, ವಾಣಿಜ್ಯೀಕರಣದ ಹೆಸರಿನಲ್ಲಿ ಮತ್ತೆ ಗುಲಾಮಗಿರಿಗೆ ತಳ್ಳಲು ಯತ್ನಿಸುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಹಿಡಿತಕ್ಕೆ ದೇಶ ಸಿಕ್ಕರೆ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ದಿನೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ವಿಶೇಷ ಸ್ಥಾನಮಾನ ರದ್ದಾಗುವ ಮುನ್ನ ಕೇಂದ್ರದ ಹಣ ಜಮ್ಮು ಕಾಶ್ಮೀರ ನಾಯಕರ ಜೇಬು ಸೇರುತ್ತಿತ್ತು'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.