ETV Bharat / city

ಪರಿಷತ್ ಕ್ಯಾಂಟೀನ್ ಸ್ಥಳದಲ್ಲಿ ಶೌಚಾಲಯ ಮರು ನಿರ್ಮಾಣ ಕುರಿತ ಕಾಂಗ್ರೆಸ್ ಹಕ್ಕುಚ್ಯುತಿ ಮಂಡನೆ ತಿರಸ್ಕಾರ!

author img

By

Published : Sep 21, 2021, 4:32 PM IST

Updated : Sep 21, 2021, 5:11 PM IST

ಸಭಾಪತಿಗಳ ನಿರ್ಧಾರಕ್ಕೆ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರಶೆಟ್ಡಿ ಅಸಮಾಧಾನ ವ್ಯಕ್ತಪಡಿಸಿ, ನಿರ್ಣಯವನ್ನು ಖಂಡಿಸಿದರು. ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ವಿಪ್‌ ನಾರಾಯಣಸ್ವಾಮಿ, ಕ್ಯಾಂಟೀನ್‌ಗೆ ಬೇರೆ ಸ್ಥಳ ಕೊಡಿ, ಸದಸ್ಯರು, ಅಧಿಕಾರಿಗಳಿಗೆ ತೊಂದರೆಯಾಗುತ್ತಿದೆ ಎಂದರು. ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಮಾತನಾಡಿ, ತಕ್ಷಣ ಹಿಂದೆ ಮಾಡಿದ್ದ ನಿರ್ಧಾರದಂತೆ ಕ್ಯಾಂಟೀನ್ ಜಾಗವನ್ನು ಶೌಚಾಲಯ ಮಾಡುವ ನಿರ್ಣಯ ಅನುಷ್ಠಾನಕ್ಕೆ ತರಬೇಕು ಎಂದರು..

Minister kota Srinivas Poojary talking about Council session
ಪರಿಷತ್ ಕ್ಯಾಂಟೀನ್ ಸ್ಥಳದಲ್ಲಿ ಶೌಚಾಲಯ ಮರು ನಿರ್ಮಾಣ ಮಾಡದ ಕುರಿತು ಕಾಂಗ್ರೆಸ್ ಹಕ್ಕುಚ್ಯುತಿ ಮಂಡನೆ ತಿರಸ್ಕಾರ!

ಬೆಂಗಳೂರು : ವಿಧಾನ ಪರಿಷತ್ ಸದನದ ಪಕ್ಕದಲ್ಲಿರುವ ಕ್ಯಾಂಟೀನ್ ಸ್ಥಳವನ್ನು ಶೌಚಾಲಯವನ್ನಾಗಿ ಪುನರ್ ನಿರ್ಮಾಣ ಮಾಡುವ ಕುರಿತ ಸದನದ ನಿರ್ಧಾರವನ್ನು ಜಾರಿಗೆ ತರದೆ ಸದನಕ್ಕೆ ಅಗೌರವ ತೋರಲಾಗಿದೆ ಎಂದು ಕಾಂಗ್ರೆಸ್ ಮಂಡಿಸಿದ ಹಕ್ಕುಚ್ಯುತಿಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿದರು.

ಪರಿಷತ್ ಕ್ಯಾಂಟೀನ್ ಸ್ಥಳದಲ್ಲಿ ಶೌಚಾಲಯ ಮರು ನಿರ್ಮಾಣ ಕುರಿತ ಕಾಂಗ್ರೆಸ್ ಹಕ್ಕುಚ್ಯುತಿ ಮಂಡನೆ ತಿರಸ್ಕಾರ!

ಶೂನ್ಯವೇಳೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರಶೆಟ್ಟಿ ಹಕ್ಕುಚ್ಯುತಿ ಮಂಡಿಸಿದರು. ಪರಿಷತ್ ಸಭಾಂಗಣದ ಪಕ್ಕದಲ್ಲಿ ಹಲವು ವರ್ಷದಿಂದ ಇದ್ದ ಶೌಚಾಲಯವನ್ನು ಉಪಹಾರ ಗೃಹವಾಗಿ ಮಾರ್ಪಡಿಸಿದ್ದರಿಂದ ಹಲವರಿಗೆ ಸಮಸ್ಯೆಯಾಗಿದೆ. ಉಪಹಾರ ಗೃಹ ಸ್ಥಳಾಂತರಿಸಿ ಶೌಚಾಲಯ ನಿರ್ಮಾಣಕ್ಕೆ ಹಿಂದೆ ಭರವಸೆ ನೀಡಲಾಗಿತ್ತು.

ಆದರೆ, ಅದನ್ನು ಜಾರಿಗೆ ತರದೆ ಸದನಕ್ಕೆ ಅಗೌರವ ತರಲಾಗಿದೆ ಎಂದು ಆರೋಪಿಸಿ ಪರಿಷತ್ ಸಚಿವಾಲಾಯ ಕಾರ್ಯದರ್ಶಿ ಮತ್ತು ಸಭಾನಾಯಕರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರು. ಕಾಂಗ್ರೆಸ್ ಮಂಡಿಸಿದ ಹಕ್ಕುಚ್ಯುತಿ ನಿಲುವಳಿ ಕುರಿತು ವಿಧಾನ ಪರಿಷತ್ ಕಾರ್ಯಕಲಾಪ ಮತ್ತು ನಿಯಮಾವಳಿ ನಿಯಮ174ರ ಅಡಿ ಹಕ್ಕುಚ್ಯುತಿ ಪ್ರಸ್ತಾವನೆ ನಿರಾಕರಿಸಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.

ಸಭಾಪತಿಗಳ ನಿರ್ಧಾರಕ್ಕೆ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರಶೆಟ್ಡಿ ಅಸಮಾಧಾನ ವ್ಯಕ್ತಪಡಿಸಿ, ನಿರ್ಣಯವನ್ನು ಖಂಡಿಸಿದರು. ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ವಿಪ್‌ ನಾರಾಯಣಸ್ವಾಮಿ, ಕ್ಯಾಂಟೀನ್‌ಗೆ ಬೇರೆ ಸ್ಥಳ ಕೊಡಿ, ಸದಸ್ಯರು, ಅಧಿಕಾರಿಗಳಿಗೆ ತೊಂದರೆಯಾಗುತ್ತಿದೆ ಎಂದರು. ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಮಾತನಾಡಿ, ತಕ್ಷಣ ಹಿಂದೆ ಮಾಡಿದ್ದ ನಿರ್ಧಾರದಂತೆ ಕ್ಯಾಂಟೀನ್ ಜಾಗವನ್ನು ಶೌಚಾಲಯ ಮಾಡುವ ನಿರ್ಣಯ ಅನುಷ್ಠಾನಕ್ಕೆ ತರಬೇಕು ಎಂದರು.

ಕಾಂಗ್ರೆಸ್ ಸದಸ್ಯರ ಬೇಡಿಕೆ ಕುರಿತು ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಕ್ಯಾಂಟೀನ್ ಬದಲಿಸಿ ಶೌಚಾಲಯ ಮರು ನಿರ್ಮಾಣ ಕುರಿತು ಕ್ರಮದ ಭರವಸೆ ನೀಡಲಾಗಿತ್ತು. ಆದರೆ, ಮುಂದುವರಿದ ಚರ್ಚೆ ಮತ್ತೆ ನಡೆಯಿತು. ಇಡೀ ಸದನ ಸಭಾಪತಿಗಳ ವ್ಯಾಪ್ತಿಗೆ ಬರಲಿದೆ. ಹಾಗಾಗಿ, ಈ ಬಗ್ಗೆ ಮತ್ತೆ ಸಭಾಪತಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ. ಆದರೆ, ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಕ್ಕೆ ನೋವಾಗುತ್ತಿದೆ. ಸಣ್ಣ ಸಮಸ್ಯೆಯನ್ನು ದೊಡ್ಡದಾಗಿ ಮಾಡಿದ್ದಾರೆ, ಸಮಸ್ಯೆ ಬೇಗ ಪರಿಹಾರ ಮಾಡಲಾಗುತ್ತದೆ ಎಂದರು.

ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ನನ್ನ ಕೊಠಡಿಯಲ್ಲಿ ಆಡಳಿತ, ಪ್ರತಿಪಕ್ಷ ಮುಖಂಡರ ಜೊತೆ ಸಭೆ ನಡೆಸುತ್ತೇನೆ, ಅಲ್ಲಿ ಚರ್ಚಿಸಿ ತೀರ್ಮಾನಿಸೋಣ ಎಂದು ಸೂಚಿಸಿ ಚರ್ಚೆಗೆ ತೆರೆ ಎಳೆದರು.

Last Updated : Sep 21, 2021, 5:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.