ETV Bharat / city

ದೊಡ್ಡಬಳ್ಳಾಪುರ : ಪತ್ನಿ ಹೊಡೆದಳು ಎಂದು ಪತಿ ನೇಣಿಗೆ ಶರಣು?

author img

By

Published : Sep 22, 2021, 3:19 PM IST

ಮೃತ ರಂಗರಾಜುಗೆ ಇಬ್ಬರು ಮಕ್ಕಳಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಯಾವಾಗಲೂ ಜಗಳ ನಡೆಯುತ್ತಿದೆ. ಈ ಜಗಳದಲ್ಲಿ ಹೆಂಡತಿ ಹೊಡೆದಳು ಎಂದು ನೇಣಿಗೆ ಶರಣಾಗಿರುವ ಸಂಶಯವನ್ನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ..

Doddaballapur
ರಂಗರಾಜು

ದೊಡ್ಡಬಳ್ಳಾಪುರ : ಜಗಳದಲ್ಲಿ ಹೆಂಡತಿ ಹೊಡೆದಳು ಎಂದು ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ. ರಂಗರಾಜು ಎಂಬಾತ (36) ಮೃತ ವ್ಯಕ್ತಿ.

ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಚನ್ನವೀರನಹಳ್ಳಿ ಗ್ರಾಮದ ಹೊರಗಿನ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಮೃತ ರಂಗರಾಜುಗೆ ಇಬ್ಬರು ಮಕ್ಕಳಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಯಾವಾಗಲೂ ಜಗಳ ನಡೆಯುತ್ತಿದೆ. ಈ ಜಗಳದಲ್ಲಿ ಹೆಂಡತಿ ಹೊಡೆದಳು ಎಂದು ನೇಣಿಗೆ ಶರಣಾಗಿರುವ ಸಂಶಯವನ್ನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಡಬ: ನಾಪತ್ತೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಬೆಂಗಳೂರಿನಲ್ಲಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.