ETV Bharat / city

ಆನ್​ಲೈನ್​ ಸಾಲ ತೀರಿಸದ್ದಕ್ಕೆ ಅಶ್ಲೀಲ ಫೋಟೋ ಕಳುಹಿಸಿ ಅವಮಾನ: ಮನನೊಂದು ಆತ್ಮಹತ್ಯೆ

author img

By

Published : Jul 27, 2022, 9:06 PM IST

ಆನ್‌ಲೈನ್​ ಆ್ಯಪ್​ನಲ್ಲಿ ಸಾಲ ತೆಗೆದು ಕೊಂಡಿದ್ದವನು ಸಾಲ ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ ಅಶ್ಲೀಲ ಫೋಟೋಗಳನ್ನು ಪರಿಚಿತರಿಗೆ ಕಳುಹಿಸಿ ಅವಮಾನ ಮಾಡಿದ್ದಾರೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

suicide
ಮನನೊಂದು ಆತ್ಮಹತ್ಯೆ

ಬೆಂಗಳೂರು : ಆನ್‌ಲೈನ್‌ ಆ್ಯಪ್ ಮೂಲಕ ಸಾಲ ಪಡೆದ ವ್ಯಕ್ತಿಯೊಬ್ಬ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾಗದೇವನಹಳ್ಳಿಯ ನಂದಕುಮಾರ್ ಮೃತ ದುರ್ದೈವಿ.

ಖಾಸಗಿ ಕೋ ಆಪರೇಟಿವ್ ಬ್ಯಾಂಕ್​ನ ಉದ್ಯೋಗಿಯಾಗಿದ್ದ ನಂದಕುಮಾರ್ ಹಣದ ಅವಶ್ಯಕತೆ ಇದ್ದಿದ್ದರಿಂದ ಆನ್‌ಲೈನ್ ಆ್ಯಪ್ ಮೂಲಕ ಸಾಲ ಪಡೆದಿದ್ದ. ಸಾಲ ಹಿಂದಿರುಗಿಸುವುದು ಸ್ವಲ್ಪ ತಡವಾಗಿದ್ದರಿಂದ‌ ಆ್ಯಪ್​ಗೆ ಸಂಬಂಧಿಸಿದ ವಿವಿಧ ನಂಬರುಗಳಿಂದ ಕರೆ ಮಾಡುತ್ತಿದ್ದವರು ಕಿರುಕುಳ ನೀಡುತ್ತಿದ್ದರು. ಮಾತ್ರವಲ್ಲ ನಂದಕುಮಾರ್ ಪೋಟೋವನ್ನು ಅಶ್ಲೀಲವಾಗಿ ಮಾರ್ಪಡಿಸಿ ಆತನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕಳುಹಿಸಲಾಗಿತ್ತು.

ಆನ್​ಲೈನ್​ ಸಾಲ ತೀರಿಸದ್ದಕ್ಕೆ ಅಶ್ಲೀಲ ಫೋಟೋ ಕಳುಹಿಸಿ ಅವಮಾನ

ಇದರಿಂದ ಮನನೊಂದಿದ್ದ ನಂದಕುಮಾರ್ ಆನ್‍ಲೈನ್ ಆ್ಯಪ್​ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಡೆತ್ ನೋಟ್ ಬರೆದಿಟ್ಟು ಜುಲೈ 24ರಂದು ಸಿಟಿ ರೈಲ್ವೇ ಠಾಣಾ ವ್ಯಾಪ್ತಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಬೆಂಗಳೂರು ಸಿಟಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ ಎಂದು ರೈಲ್ವೆ ಎಸ್​ಪಿ ಸಿರಿಗೌರಿ ತಿಳಿಸಿದ್ದಾರೆ.

ಇದನ್ನೂ ಓದಿ : 14ರ ಪೋರನಿಗೆ ಪೋರ್ನ್​ ತೋರಿಸಿ ತನ್ನತ್ತ ಸೆಳೆದ 30ರ ನಾರಿ: ಕಿಡ್ನಾಪ್​ ಮಾಡಿ, ಹೈದರಾಬಾದ್​ನಲ್ಲಿ ಸಹಜೀವನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.