ರಕ್ತಸಿಕ್ತ ಕೈಯಲ್ಲಿ ಲಾಂಗ್ ಹಿಡಿದು ಬಂದ ಖಡಕ್ ಧ್ವನಿಯ ವಸಿಷ್ಠ!

author img

By

Published : May 23, 2022, 3:04 PM IST

love-li-kannada-movie-poster-released

ನೈಜ ಘಟನೆಯನ್ನಾಧರಿಸಿ ಮಾಡಿರುವ love ಲಿ ಸಿನೆಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ನಲ್ಲಿ ಖಡಕ್ ಲುಕ್ ನಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್​ವುಡ್ ನಲ್ಲಿ ಸಿಕ್ಕ ಅವಕಾಶಗಳಲ್ಲೇ ಮಿಂಚುತ್ತಾ, ತನ್ನ ಕಂಚಿನ ಕಂಠದ ಧ್ವನಿಯಿಂದಲೇ ಬೆಳ್ಳಿತೆರೆ ಮೇಲೆ ಹೆಸರುವಾಸಿಯಾಗಿರುವ ನಟ ವಸಿಷ್ಠ ಸಿಂಹ. ವಸಿಷ್ಠ ಸಿಂಹ ಕೈಯಲ್ಲಿ ಸಾಕಷ್ಟು ಸಿನೆಮಾಗಳಿದ್ದು, ಸದ್ಯ ಇವರ ಬಹುನಿರೀಕ್ಷಿತ Love..ಲಿ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ರಕ್ತಸಿಕ್ತ ಕೈಯಲ್ಲಿ ಲಾಂಗ್ ಹಿಡಿದು, ಮತ್ತೊಂದು ಕೈಯಲ್ಲಿ ಧಮ್ ಎಳೆಯುತ್ತಾ, ಖಡಕ್ ಲುಕ್ ನಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಂಡಿರುವ ಪೋಸ್ಟರ್ ಗೆ ಚಿತ್ರಾಭಿಮಾನಿಗಳು ಫಿದಾ ಆಗಿದ್ದಾರೆ.

love-li-kannada-movie-poster-released
love ಲಿ ಸಿನೆಮಾದ ಪೋಸ್ಟರ್

ಮಫ್ತಿ ಸಿನಿಮಾ ನಿರ್ದೇಶಕ ನರ್ತನ್‌ ಜೊತೆಗೆ ಕೆಲಸ ಮಾಡಿ ಅನುಭವ ಇರುವ ಚೇತನ್‌ ಕೇಶವ್‌ ನೈಜ ಘಟನೆಗಳನ್ನು ಆಧರಿಸಿ ಮಾಡಿರುವ love..ಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರವೀಂದ್ರ ಕುಮಾರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಅಶ್ವಿನ್ ಕೆನಡಿ ಛಾಯಾಗ್ರಹಣ, ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಈ ಚಿತ್ರದಲ್ಲಿರಲಿದೆ.

love-li-kannada-movie-poster-released
ಖಡಕ್ ಲುಕ್ ನಲ್ಲಿ ವಸಿಷ್ಠ ಸಿಂಹ

ಓದಿ : ತೆಲುಗು ಚಿತ್ರರಂಗದಲ್ಲೂ ಮಿಂಚುತ್ತಿರುವ ಕನ್ನಡದ 'ಕಿಸ್‌'ತಾರೆ : ರಶ್ಮಿಕಾ ಹಾದಿಯಲ್ಲಿ ಶ್ರೀಲೀಲಾ 'ಭರಾಟೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.