ETV Bharat / city

ಕೆರೆಯನ್ನು ಉಳಿಸಿಕೊಳ್ಳಲು ಯಶಸ್ವಿಯಾದ ತಹಶೀಲ್ದಾರ್: ಎಲ್ಲಾ ಕೆರೆಗಳನ್ನು ಒತ್ತುವರಿ ಮುಕ್ತ ಮಾಡುವ ಭರವಸೆ

author img

By

Published : Oct 24, 2021, 1:46 AM IST

ಕೆಲ ಒತ್ತುವರಿದಾರರು ಕೆರೆಯಲ್ಲಿ ಮನೆ ನಿರ್ಮಿಸಿ, ಬಾಡಿಗೆಗೆ ನೀಡಿದ್ದರು. ಇದೀಗ ಅಂಥವರ ಪಟ್ಟಿ ಮಾಡಿ, ಅವರ ವಿರುದ್ದ ಕ್ರಮ ಜರುಗಿಸಿ ಜಾಗ ತೆರವು ಮಾಡಿ ಕೆರೆ ಜಾಗ ಉಳಿಸಲಾಗುವುದು ಎಂದು ದಿನೇಶ್​​​​ ತಿಳಿಸಿದ್ದಾರೆ.

lake-encroachment-clearance-in-bengaluru
ಕೆರೆ ಒತ್ತುವರಿ ತೆರವು: ಅತ್ತಿಬೆಲೆ ಪಟಾಲಮ್ಮ ಕೆರೆಯನ್ನು ಉಳಿಸಿಕೊಳ್ಳಲು ಯಶಸ್ವಿಯಾದ ತಹಶೀಲ್ದಾರ್

ಬೆಂಗಳೂರು: ಶತಮಾನಗಳಿಂದ ಜನ ಜಾನುವಾರುಗಳಿಗೆ ಜೀವಸೆಲೆಯಾಗಿದ್ದ ಅತ್ತಿಬೆಲೆ ಹೃದಯಭಾಗದ ಪಟಾಲಮ್ಮ ಕೆರೆಯನ್ನು ಉಳಿಸಿಕೊಳ್ಳುವಲ್ಲಿ ಆನೇಕಲ್ ತಹಶೀಲ್ದಾರ್ ಪಿ.ದಿನೇಶ್ ಯಶಸ್ವಿಯಾಗಿದ್ದಾರೆ.

ಆನೇಕಲ್ ತಾಲೂಕಿನ 144 ಕೆರೆಗಳ ಪೈಕಿ ಅತ್ತಿಬೆಲೆ ಪಟ್ಟಣದ ಸರ್ವೇ ನಂಬರ್ 8ರಲ್ಲಿರುವ ಪಟಾಲಮ್ಮ ಕೆರೆಯು ಮೊದಲಿಗೆ 3.24 ಎಕರೆ ವಿಸ್ತೀರ್ಣವಿತ್ತು. ಆದರೆ ಈಗ ಒತ್ತುವರಿಯಾಗಿ ಕೇವಲ 2 ಎಕರೆ ಕೆರೆ ಜಾಗ ಉಳಿದಿದೆ. ಕೆರೆ, ಸರ್ಕಾರಿ ಜಾಗಗಳನ್ನು ರಕ್ಷಣೆ ಮಾಡಬೇಕಾದ ಅಧಿಕಾರಿಗಳೇ ಮೌನವಹಿಸಿದ್ದರಿಂದ ಕೆರೆ ಒತ್ತುವರಿಯಾಗಿದೆ.

ಕೆಲ ಒತ್ತುವರಿದಾರರು ಕೆರೆಯಲ್ಲಿ ಮನೆ ನಿರ್ಮಿಸಿ ಬಾಡಿಗೆಗೆ ನೀಡಿದ್ದರು. ಇದೀಗ ಅಂಥವರ ಪಟ್ಟಿ ಮಾಡಿ, ಅವರ ವಿರುದ್ದ ಕ್ರಮ ಜರುಗಿಸಿ ಜಾಗ ತೆರವು ಮಾಡಿ ಕೆರೆ ಜಾಗ ಉಳಿಸಲಾಗುವುದು ಎಂದು ದಿನೇಶ್​​​​ ತಿಳಿಸಿದ್ದಾರೆ.

ಕೆರೆಯಲ್ಲಿಯೇ ನಿರ್ಮಾಣ ಮಾಡಿದ್ದ ಕಲ್ಯಾಣ ಮಂಟಪವನ್ನು ವಶಕ್ಕೆ ಪಡೆದು ನಾಡಕಚೇರಿಗೆ ಬಳಸಿಕೊಳ್ಳಲು ಆದೇಶ ನೀಡಲಾಗಿದೆ. ಜೊತೆಗೆ ಕೆರೆಯಲ್ಲಿ ನಿರ್ಮಾಣವಾಗಿದ್ದ ಕಟ್ಟಡವನ್ನು ನೆಲಸಮ ಮಾಡಿ ಮುಂದಿನ ದಿನಗಳಲ್ಲಿ ಕೆರೆಯ ಅಭಿವೃದ್ಧಿ ಕೆಲಸಕ್ಕೆ ಮುಂದಾಗುವ ಭರವಸೆಯನ್ನು ಆನೇಕಲ್ ದಂಡಾಧಿಕಾರಿ ನೀಡಿದ್ದಾರೆ.

ಇದನ್ನೂ ಓದಿ: 'ಬುರುಡೆ ಬೊಮ್ಮಾಯಿ' ಸರಣಿ ಟ್ವೀಟ್ ಮೂಲಕ ಸಿಎಂಗೆ ಸಿದ್ದರಾಮಯ್ಯ ಸವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.