ETV Bharat / city

ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್​ ವಿವಾದ: ಇಂದಿನಿಂದ ಮೂರು ದಿನ ಶಾಲಾ-ಕಾಲೇಜುಗಳಿಗೆ ರಜೆ

author img

By

Published : Feb 9, 2022, 4:48 AM IST

ಹಿಜಾಬ್​-ಕೇಸರಿ ವಿವಾದ ಈಗಾಗಲೇ ರಾಜ್ಯದಲ್ಲಿ ರಾಜಕೀಯ ರೂಪ ಪಡೆದುಕೊಂಡಿದ್ದು, ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಇದೇ ಕಾರಣಕ್ಕಾಗಿ ಮೂರು ದಿನಗಳ ಕಾಲ ಶಾಲಾ-ಕಾಲೇಜ್​ಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Karnataka hijab row
Karnataka hijab row

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ v/s ಕೇಸರಿ ಶಾಲು ವಿವಾದ ಭುಗಿಲೆದ್ದಿದೆ. ದಿನದಿಂದ ದಿನಕ್ಕೆ ಈ ಪ್ರಕರಣ ಹೆಚ್ಚು ವ್ಯಾಪಕತೆ ಪಡೆದುಕೊಳ್ಳುತ್ತಿರುವ ಕಾರಣ ಇಂದಿನಿಂದ ಮೂರು ದಿನಗಳ ಕಾಲ ಶಾಲಾ-ಕಾಲೇಜ್​​ಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ, ರಾಜ್ಯದ ಶಾಲಾ-ಕಾಲೇಜ್​ಗಳಲ್ಲಿ ಸಮವಸ್ತ್ರ ವಿವಾದ ಹಿನ್ನೆಲೆಯಲ್ಲಿ ಮೂರು ದಿನ ರಜೆ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.

ಮೂರು ದಿನ ಮಾತ್ರ ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ. ಆ ಬಳಿಕ ಎಂದಿನಂತೆ ಶಾಲಾ ಕಾಲೇಜು ಆರಂಭ ಮಾಡ್ತೇವೆ.‌ ಈಗಾಗಲೇ ಸುತ್ತೋಲೆ ಹೊರಡಿಸಿದ್ದೇವೆ. ಸಮವಸ್ತ್ರ ಕಡ್ಡಾಯಗೊಳಿಸಲಾಗಿತ್ತು. ವಿದ್ಯಾರ್ಥಿಗಳ ಹೊರತಾಗಿ ಬೇರೆ ಬೇರೆ ಶಕ್ತಿಗಳು ಇದರ ಹಿಂದಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ಇದನ್ನೂ ಓದಿರಿ: ಮೊಮ್ಮಗನ ಚಿಕಿತ್ಸೆಗಾಗಿ ಸಾಲ ಪಡೆದಿದ್ದು ₹ 40 ಸಾವಿರ... ಲಕ್ಷಾಂತರ ರೂ. ನೀಡಿದ್ರೂ, ಭಿಕ್ಷೆ ಬೇಡಿ ಸಾಲ ಕಟ್ಟುತ್ತಿರುವ ವೃದ್ಧೆ!

ನಿನ್ನೆ ಕೂಡ ಶಿವಮೊಗ್ಗದಲ್ಲಿ ಹಿಜಾಬ್ ವಿವಾದವಾಗಿ ಪ್ರತಿಭಟನೆ ಜೋರಾಗಿದ್ದು, ಇದರ ಬೆನ್ನಲ್ಲೇ ಫೆ. 9ರಿಂದ ಮೂರು ದಿನಗಳ ಕಾಲ ಪ್ರೌಢಶಾಲೆ ಹಾಗೂ ಕಾಲೇಜ್​ಗಳಿಗೆ ರಜೆ ಘೊಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಹೈಕೋರ್ಟ್​​ನಲ್ಲಿಂದು ಮಹತ್ವದ ವಿಚಾರಣೆ ನಡೆಯಲಿದೆ. ಪ್ರಾಥಮಿಕ ತರಗತಿ 1 ರಿಂದ 7ನೇ ತರಗತಿ, ಯುಕೆಜಿ, ಎಲ್​ಕೆಜಿ ತರಗತಿಗಳು ಎಂದಿನಂತೆ ನಡೆಯಲಿದ್ದು, ರಜೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಇಂದು ಮಹತ್ವದ ಸಚಿವ ಸಂಪುಟ ಸಭೆ

ಬಜೆಟ್​ ವಿಚಾರವಾಗಿ ಇಂದು ಮುಖ್ಯಮಂತ್ರಿ ಮಹತ್ವದ ಸಚಿವ ಸಂಪುಟ ಸಭೆ ನಡೆಸಲಿದ್ದು, ಈ ವೇಳೆ ವಿವಿಧ ಜಿಲ್ಲೆಗಳಲ್ಲಿನ ಪರಿಸ್ಥಿತಿ ಕುರಿತು ಚರ್ಚೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.