ETV Bharat / city

ರಾಜ್ಯದಲ್ಲಿಂದು 12 ಸಾವಿರ ಕೋವಿಡ್​ ಕೇಸ್ ಪತ್ತೆ: ಬೆಂಗಳೂರಲ್ಲೇ 9 ಸಾವಿರ ಪ್ರಕರಣ ದೃಢ!

author img

By

Published : Jan 9, 2022, 5:26 PM IST

Updated : Jan 9, 2022, 9:21 PM IST

Karnataka COVID update: ಒಂದೇ ದಿನ ರಾಜ್ಯದಲ್ಲಿ 12 ಸಾವಿರ ಕೊರೊನಾ ಕೇಸ್​ಗಳು ಪತ್ತೆಯಾಗಿವೆ.

Karnataka Covid
Karnataka Covid

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಮಾತ್ರ ಮುಂದುವರೆದಿದೆ.‌ ಆರು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಬರೋಬ್ಬರಿ 1,89, 499 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 12,000 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 30,51,958 ಏರಿಕೆ ಆಗಿದೆ.

ಇನ್ನು 901 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ 29,63,957 ಡಿಸ್ಚಾರ್ಜ್ ಆಗಿದ್ದಾರೆ. ಇಂದು‌ ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,370ಕ್ಕೆ ಏರಿಕೆ ಆಗಿದೆ. ಇತ್ತ ಸಕ್ರಿಯ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು ಸದ್ಯ 49,602 ರಷ್ಟಿವೆ. ಇವತ್ತಿನ ಪಾಸಿಟಿವ್ ಪ್ರಮಾಣ ಶೇ.6.33 ರಷ್ಟಿದ್ದರೆ ಸಾವಿನ ಪ್ರಮಾಣ 0.03 ರಷ್ಟಿದೆ. ವಿಮಾನ ನಿಲ್ದಾಣದಿಂದ ಆಗಮಿಸಿರುವ 4,213 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. ಹೈರಿಸ್ಕ್ ದೇಶದಿಂದ 1041 ಪ್ರಯಾಣಿಕರು ಆಗಮಿಸಿದ್ದಾರೆ.

ಬೆಂಗಳೂರು ರೆಡ್ ಝೋನ್:

ರೆಡ್ ಝೋನ್​ ಆಗಿರುವ ರಾಜಧಾನಿ ಬೆಂಗಳೂರಲ್ಲಿ ಇಂದು 9020 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,99,319 ಕ್ಕೆ ಏರಿದೆ. 605 ಜನರು ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 12,42,326 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,422ಕ್ಕೆ ಏರಿದೆ. ಸದ್ಯ 40,570 ಸಕ್ರಿಯ ಪ್ರಕರಣಗಳಿವೆ.

ಕೋವಿಡ್ ವರದಿ,Karnataka Covid Cases rise
ಕೋವಿಡ್ ವರದಿ

ಈವರೆಗಿನ ರೂಪಾಂತರಿ ಅಪ್​ಡೇಟ್ಸ್:

ಅಲ್ಪಾ - 156

ಬೀಟಾ - 08

ಡೆಲ್ಟಾ - 2937

ಡೆಲ್ಟಾ ಸಬ್ ಲೈನೇಜ್ - 1350

ಕಪ್ಪಾ - 160

ಈಟಾ - 01

ಒಮಿಕ್ರಾನ್ - 333

(ಇದನ್ನೂ ಓದಿ: ನಟನೆಯಿಂದ ಲೋಕಸಭೆವರೆಗೆ.. ಇಂಥಹ ಬ್ಯೂಟಿಫುಲ್​ ಸಂಸದೆ ಬಗ್ಗೆ ನಿಮಗೆಷ್ಟು ಗೊತ್ತು!)

Last Updated : Jan 9, 2022, 9:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.