ETV Bharat / city

COVID Update : ರಾಜ್ಯದಲ್ಲಿಂದು 255 ಮಂದಿಗೆ ಕೊರೊನಾ, 7 ಸೋಂಕಿತರು ಬಲಿ

author img

By

Published : Nov 16, 2021, 7:10 PM IST

covid
covid

ಕರ್ನಾಟಕದ ಇಂದಿನ ಕೊರೊನಾ ವರದಿ (Karnataka Corona Cases).

ಬೆಂಗಳೂರು : ರಾಜ್ಯದಲ್ಲಿಂದು 66,993 ಮಂದಿಗೆ ಕೋವಿಡ್ (COVID TEST) ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 255 ಮಂದಿಗೆ ಸೋಂಕು (COVID Positive) ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,92,276ಕ್ಕೆ ಏರಿಕೆ ಆಗಿದೆ. ಇತ್ತ 667 ಮಂದಿ ಡಿಸ್ಚಾರ್ಜ್ ಆಗಿದ್ದು, 29,46,601 ಮಂದಿ ಗುಣಮುಖರಾಗಿದ್ದಾರೆ.

ಇಂದು 7 ಸೋಂಕಿತರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 38,153ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 7,493 ರಷ್ಟಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.38 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.2.74ರಷ್ಟಿದೆ.

ವಿಮಾನ ನಿಲ್ದಾಣದಿಂದ 6,196 ಪ್ರಯಾಣಿಕರು ಆಗಮಿಸಿದ್ದಾರೆ. ಅವರೆಲ್ಲ ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. 1,255 ಪ್ರಯಾಣಿಕರು ಯುಕೆ ಯಿಂದ ಆಗಮಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ 163 ಮಂದಿಗೆ ಸೋಂಕು (Bengaluru Corona cases) ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,54,256ಕ್ಕೆ ಏರಿಕೆ ಆಗಿದೆ. ಇಂದು 574 ಜನ ಗುಣಮುಖರಾಗಿದ್ದು, 12,31,780 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,314ಕ್ಕೆ ಏರಿದೆ. 6161 ಸಕ್ರಿಯ ಪ್ರಕರಣ ಇವೆ.

ರೂಪಾಂತರಿ ಅಪ್​ಡೇಟ್ಸ್​ :

ಅಲ್ಫಾ - 155
ಬೀಟಾ - 08
ಡೆಲ್ಟಾ - 1698
ಡೆಲ್ಟಾ ಸಬ್ ಲೈನ್ಏಜ್ - 300
ಕಪ್ಪಾ - 160
ಈಟಾ - 01

ETV Bharat Logo

Copyright © 2024 Ushodaya Enterprises Pvt. Ltd., All Rights Reserved.