ETV Bharat / city

ಹೆಚ್​​ಡಿಕೆ ಗಾಳಿಪಟದ ರಾಜಕಾರಣಿ : ಮಾಜಿ ಸಿಎಂ ಕಗ್ಗದ ಸಾಲುಗಳ ಮೂಲಕ ಟ್ವೀಟಿಸಿದ ಬಿಜೆಪಿ

author img

By

Published : Apr 4, 2022, 12:37 PM IST

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿಯ ಟ್ವಿಟರ್ ದಾಳಿ ಮುಂದುವರಿದಿದೆ. ಇಂದು ಕುಮಾರಸ್ವಾಮಿ ಅವರನ್ನು ಗಾಳಿಪಟದ ರಾಜಕಾರಣಿ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ..

bjp slams against former cm HD kumaraswamy
ಕುಮಾರಸ್ವಾಮಿ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು : ಕರ್ನಾಟಕದ ರಾಜಕಾರಣದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರಂತಹ ಗಾಳಿಪಟದ ವ್ಯಕ್ತಿತ್ವ ಹೊಂದಿರುವ ರಾಜಕಾರಣಿ ಮತ್ತೊಬ್ಬರಿಲ್ಲ ಎಂದು ಟೀಕಿಸಿರುವ ಬಿಜೆಪಿ ಮಂಕುತಿಮ್ಮನ ಕಗ್ಗದ ಸಾಲುಗಳ ಮೂಲಕ ಟಾಂಗ್ ನೀಡಿದೆ. ಬಿಜೆಪಿ ಮತ್ತು ಕುಮಾರಸ್ವಾಮಿ ನಡುವಿನ ಟ್ವೀಟ್ ವಾರ್ ಮುಂದುವರೆದಿದೆ. ಗಾಳಿಪಟ ಹೆಚ್‌ಡಿಕೆ ಹ್ಯಾಷ್ ಟ್ಯಾಗ್‌ನೊಂದಿಗೆ ಬಿಜೆಪಿ ರಾಜ್ಯ ಘಟಕದ ಟ್ವಿಟರ್ ಖಾತೆ ಮೂಲಕ ಸರಣಿ ಟ್ವೀಟ್ ಮಾಡಿ ಹೆಚ್​ಡಿಕೆ ಕಾಲೆಳೆದಿದೆ.

  • ಕುಮಾರಸ್ವಾಮಿಯವರೇ,

    ನೀವೆಷ್ಟೇ ದಾರ್ಶನಿಕನ ಸೋಗು ಹಾಕಿದರೂ ಅದರ ಹಿಂದಿರುವುದು ಪ್ರತ್ಯೇಕ ಲೆಕ್ಕಾಚಾರವೇ.

    ನಿಮ್ಮಂತವರ ಯೂಟರ್ನ್ ನೀತಿಗಾಗಿಯೇ ಕಗ್ಗದಲ್ಲಿ ಸಾಲೊಂದು ರಚಿತವಾಗಿದೆ...#ಗಾಳಿಪಟಎಚ್‌ಡಿಕೆ

    — BJP Karnataka (@BJP4Karnataka) April 4, 2022 " class="align-text-top noRightClick twitterSection" data=" ">

ಕುಮಾರಸ್ವಾಮಿಯವರೇ, ನೀವೆಷ್ಟೇ ದಾರ್ಶನಿಕನ ಸೋಗು ಹಾಕಿದರೂ ಅದರ ಹಿಂದಿರುವುದು ಪ್ರತ್ಯೇಕ ಲೆಕ್ಕಾಚಾರವೇ. ನಿಮ್ಮಂತವರ ಯೂಟರ್ನ್ ನೀತಿಗಾಗಿಯೇ ಕಗ್ಗದಲ್ಲಿ ಸಾಲೊಂದು ರಚಿತವಾಗಿದೆ ಎನ್ನುತ್ತಾ ಕಗ್ಗದ ಸಾಲುಗಳ ಪ್ರಕಟಿಸಿದೆ.

ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ?

ಮೀನು ನೀರೊಳು ನುಸುಳೆ ಪಥನಿಯಮವಿಹುದೆ?

ಏನೊ ಜೀವನವನೆಳೆವುದೇನೊ ನೂಕುವುದದನು।

ನೀನೊಂದು ಗಾಳಿಪಟ – ಮಂಕುತಿಮ್ಮ।। ಹೆಚ್‌ಡಿಕೆ‌ ಎಂದರೆ ಗಾಳಿಪಟ, ಸ್ವಂತಿಕೆ ಇಲ್ಲದ ರಾಜಕಾರಣಿ ಎಂದು ಬಿಜೆಪಿ ಟೀಕಿಸಿದೆ.

  • ಕರ್ನಾಟಕದ ರಾಜಕಾರಣದಲ್ಲಿ ಎಚ್‌ಡಿಕೆ ಅವರಂತಹ ಗಾಳಿಪಟದ ವ್ಯಕ್ತಿತ್ವ ಹೊಂದಿರುವ ರಾಜಕಾರಣಿ ಮತ್ತೊಬ್ಬರಿಲ್ಲ.

    ಆವ ಕಡೆ ಹಾರುವುದೋ!
    ಆವ ಕಡೆ ತಿರುಗುವುದೋ?
    ಆವಾಗಳಾವ ಕಡೆಗೆರಗುವುದೋ ಹಕ್ಕಿ!
    ಎಂಬಂತಿದೆ ಎಚ್‌ಡಿಕೆ ರಾಜಕೀಯ ಧೋರಣೆ.

    ಸ್ವಂತಿಕೆ ಇಲ್ಲದವರು ವಾಜಪೇಯಿ ಅವರಂಥವರನ್ನೂ ಟೀಕಿಸುವುದು ಚೋದ್ಯವಲ್ಲದೆ ಮತ್ತೇನು?#ಗಾಳಿಪಟಎಚ್‌ಡಿಕೆ

    — BJP Karnataka (@BJP4Karnataka) April 4, 2022 " class="align-text-top noRightClick twitterSection" data=" ">

ಕರ್ನಾಟಕದ ರಾಜಕಾರಣದಲ್ಲಿ ಹೆಚ್‌ಡಿಕೆ ಅವರಂತಹ ಗಾಳಿಪಟದ ವ್ಯಕ್ತಿತ್ವ ಹೊಂದಿರುವ ರಾಜಕಾರಣಿ ಮತ್ತೊಬ್ಬರಿಲ್ಲ.

ಆವ ಕಡೆ ಹಾರುವುದೋ!

ಆವ ಕಡೆ ತಿರುಗುವುದೋ?

ಆವಾಗಳಾವ ಕಡೆಗೆರಗುವುದೋ ಹಕ್ಕಿ!

ಎಂಬಂತಿದೆ ಹೆಚ್‌ಡಿಕೆ ರಾಜಕೀಯ ಧೋರಣೆ. ಸ್ವಂತಿಕೆ ಇಲ್ಲದವರು ವಾಜಪೇಯಿ ಅವರಂಥವರನ್ನೂ ಟೀಕಿಸುವುದು ಚೋದ್ಯವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದೆ.

ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು।

ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು॥

ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು | ಮಾಜಿ #LuckyDipCMHDK ಅವರಿಗೆ ಇದೇ ಬದುಕು ತಾನೇ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಇದನ್ನೂ ಓದಿ: ಇಂತಹ ಸದಾರಮೆ ನಾಟಕ ಹೊಸದಲ್ಲ.. HDK ರಾಜಕೀಯ ಜೀವನವೇ ಒಂದು ಡ್ರಾಮಾ, ಅವ್ರ ಕುಟುಂಬವೇ ನಾಟಕ ಕಂಪನಿ : ಬಿಜೆಪಿ ಟ್ವೀಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.