ETV Bharat / city

ನಿರ್ಮಾಪಕರ ಸಂಘದ ಚುನಾವಣೆ ಗದ್ದಲ : ಇತ್ಯರ್ಥಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪ್ರಮೀಳಾ ಜೋಷಾಯಿ

author img

By

Published : Aug 8, 2022, 7:42 PM IST

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ವಿಚಾರ ಪೊಲೀಸ್​ ರಾಣೆ ಮೆಟ್ಟಿಲೇರಿದೆ. ಹಾಲಿ ಅಧ್ಯಕ್ಷರ ತಂಡ ಚುನಾವಣೆ ಮಾಡಲು ಅಡ್ಡಿ ಪಡಿಸುತ್ತಿದ್ದಾರೆ ಎಂದು ನಟಿ ಪ್ರಮೀಳಾ ಜೋಷಾಯಿ ಅವರು ಮಾಗಡಿ ರೋಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

kannada-producers-association-election
ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ

ಕನ್ನಡ ಚಿತ್ರರಂಗದ ಬಹು ಮುಖ್ಯ ಅಂಗ ಎಂದು ಕರೆಯುಸಿಕೊಂಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಬೆನ್ನಲ್ಲೇ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಗದ್ದಲಕ್ಕೆ ಕಾರಣವಾಗಿದೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ವಿಚಾರ ಪೊಲೀಸ್ ಠಾಣೆ ತಲುಪಿದೆ. ಚುನಾವಣೆ ಪ್ರಕ್ರಿಯೆಗೆ ಅಡ್ಡಿ ಪಡಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿ ಪ್ರಮೀಳಾ ಜೋಷಾಯಿ ಮಾಗಡಿ ರೋಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೋರ್ಟ್ ಆದೇಶದಂತೆ 14.08.2022 ಒಳಗೆ ನಿರ್ಮಾಪಕರ ಸಂಘದ ಚುನಾವಣೆ ಆಗಬೇಕಿತ್ತು. ನಾಮಪತ್ರ ವಾಪಸ್ ಪಡೆಯಲು 6 ನೇ ತಾರೀಖು ಕೊನೆಯ ದಿನವಾಗಿತ್ತು. ನಾಮಪತ್ರ ವಾಪಸ್ ಪಡೆದು ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಅನೌನ್ಸ ಮಾಡಲು ಬಿಡ್ತಿಲ್ಲ ಎಂದು ರಮೇಶ್ ಯಾದವ್, ಪ್ರವೀಣ್ ಕುಮಾರ್, ಆರ್ ಎಸ್ ಗೌಡ ಅವರಿಂದ ಚುನಾವಣೆ ಪ್ರಕ್ರಿಯೆಗೆ ಅಡ್ಡಿ ಆಗುತ್ತಿದೆ ಎಂದು ಆರೋಪಿಸಿ ಪ್ರಮೀಳಾ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕನ್ನಡ ನಿರ್ಮಾಪಕರ ಸಂಘದ ಚುನಾವಣೆ ಗದ್ದಲ

ನಾಮಿನೇಷನ್ ಬಾಕ್ಸ್ ಓಪನ್ ಮಾಡಲು ಬಿಡುತ್ತಿಲ್ಲ, ನಿರ್ಮಾಪಕರ ಸಂಘದ ಪದಾಧಿಕಾರಿಗಳಿಂದ ತೊಂದರೆ ಆಗುತ್ತಿದೆ ಮತ್ತು ಚುನಾವಣಾ ಅಧಿಕಾರಿಯ ಅಖಾಡದಲ್ಲಿ ಅಂತಿಮ ತೀರ್ಮಾನ ಆಗಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ನಿರ್ದೇಶಕ ಶಶಾಂಕ್ ನಿರ್ದೇಶನದ ಸಿನೆಮಾದಲ್ಲಿ ನಾನು ಅಭಿನಯಿಸಬೇಕಿತ್ತು ಎಂದ ಕರುನಾಡ ಚಕ್ರವರ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.