ETV Bharat / city

ಕೊರೊನಾ ಭೀತಿ: ಮಾಸ್ಕ್ ಧರಿಸಿ ಕಲಾಪಕ್ಕೆ ಆಗಮಿಸಿದ ಜೆಡಿಎಸ್ ಸದಸ್ಯ

author img

By

Published : Mar 17, 2020, 5:10 PM IST

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಇಡೀ ದಿನ ವಿಧಾನ ಪರಿಷತ್​ ಕಲಾಪದಲ್ಲಿ ಮಾಸ್ಕ್ ಹಾಕಿಕೊಂಡೇ ಜೆಡಿಎಸ್ ಸದಸ್ಯ ಕೆ.ವಿ.ನಾರಾಯಣಸ್ವಾಮಿ ಭಾಗಿಯಾಗಿ ಮಾಸ್ಕ್​ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

jds-party-member-attested-session-wearing-mask
ಕೆ. ವಿ. ನಾರಾಯಣಸ್ವಾಮಿ

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ಭಯದಲ್ಲಿ ಮುಂಜಾಗೃತಾ ಕ್ರಮವಾಗಿ ಮಾಸ್ಕ್​​ ಧರಿಸಿ ಜೆಡಿಎಸ್​ ಸದಸ್ಯ ಕೆ.ವಿ.ನಾರಾಯಣಸ್ವಾಮಿ ವಿಧಾನ ಪರಿಷತ್ ಕಲಾಪದಲ್ಲಿ ಪಾಲ್ಗೊಂಡರು.

ಬಜೆಟ್ ಅಧಿವೇಶನದ ಆರಂಭದಲ್ಲಿ ಕೊರೊನಾ ಕುರಿತು ಸರ್ಕಾರದ ಗಮನ ಸೆಳೆಯಲು ಜೆಡಿಎಸ್ ಸದಸ್ಯ ಶರವಣ ಸಾಂಕೇತಿಕವಾಗಿ ಅರ್ಧ ದಿನ ಮಾಸ್ಕ್ ಧರಿಸಿ ಕಲಾಪಕ್ಕೆ ಆಗಮಿಸಿದ್ದರು. ಇದೀಗ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಇಡೀ ದಿನ ಕಲಾಪದಲ್ಲಿ ಮಾಸ್ಕ್ ಹಾಕಿಕೊಂಡೇ ಜೆಡಿಎಸ್ ಸದಸ್ಯ ಕೆ.ವಿ.ನಾರಾಯಣಸ್ವಾಮಿ ಕಲಾಪದಲ್ಲಿ ಭಾಗಿಯಾಗಿದ್ದಾರೆ.

ಮಾಸ್ಕ್ ಧರಿಸಿ ಕಲಾಪಕ್ಕೆ ಆಗಮಿಸಿದ ಜೆಡಿಎಸ್ ಸದಸ್ಯ

ಸೋಂಕಿನ ಲಕ್ಷಣ ಇಲ್ಲದೇ ಇರುವವರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ, ಆರೋಗ್ಯ ಇಲಾಖೆ ಹೇಳಿದರೂ ಮುಂಜಾಗ್ರತಾ ಕ್ರಮವಾಗಿ ನಿನ್ನೆಯಿಂದ ನಾರಾಯಣಸ್ವಾಮಿ ಮಾಸ್ಕ್ ಧರಿಸಿಯೇ ಕಲಾಪಕ್ಕೆ ಬರುತ್ತಿದ್ದಾರೆ. ಇಡೀ ಸದನದಲ್ಲಿ ಒಬ್ಬರೇ ಮಾಸ್ಕ್ ಧರಿಸಿ ಕುಳಿತುಕೊಂಡು ಮಾಸ್ಕ್ ಕುರಿತು ಜಾಗೃತಿ ಮೂಡಿಸಿದರು.

ಸದನದಲ್ಲಿ ಅಧಿಕಾರಿಯೊಬ್ಬರು ಮಾಸ್ಕ್ ಧರಿಸಿ ಆಗಮಿಸಿದ್ದರು. ಅಲ್ಲಲ್ಲಿ ಕೆಲ ಸಿಬ್ಬಂದಿ ಹಾಗೂ ಕೆಲ ಮಾರ್ಷಲ್​ಗಳು ಕೂಡ ಮಾಸ್ಕ್‌ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.