ETV Bharat / city

ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸ್ಥಳದಲ್ಲೇ ಪಂಚಮಸಾಲಿ ಶ್ರೀಗಳಿಂದ ಇಷ್ಟಲಿಂಗ ಪೂಜೆ

author img

By

Published : Mar 12, 2021, 3:49 PM IST

ಪ್ರತೀ ವರ್ಷ ಕೂಡಲಸಂಗಮ ಗುರುಪೀಠದಲ್ಲಿ ಶಿವರಾತ್ರಿ ಆಚರಿಸುತ್ತಿದ್ದೆವು. ಆದರೆ ಹೋರಾಟದ ಭಾಗವಾಗಿ ಈ ಧರಣಿ ಸ್ಥಳವನ್ನೇ ಕೂಡಲಸಂಗಮ ಪೀಠವಾಗಿಸಿಕೊಂಡಿದ್ದೇವೆ. ಇದು ಕೇವಲ ಆರಂಭ, ಶಿವ ಪೂಜೆ ಮೂಲಕ ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ ಎಂದು ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇಷ್ಟಲಿಂಗ ಪೂಜೆ
ಇಷ್ಟಲಿಂಗ ಪೂಜೆ

ಬೆಂಗಳೂರು: ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಫ್ರೀಡಂ ಪಾರ್ಕ್​ನಲ್ಲಿ ಈಗಲೂ ಧರಣಿ ನಡೆಯುತ್ತಿದ್ದು, ನಿನ್ನೆ ಶಿವರಾತ್ರಿಯಾದ ಹಿನ್ನೆಲೆ ಧರಣಿ ಸ್ಥಳದಲ್ಲೇ ಪಂಚಮಸಾಲಿ ಶ್ರೀಗಳಿಂದ ಇಷ್ಟಲಿಂಗ ಪೂಜೆ ನೆಡೆಯಿತು.

ಈ ವೇಳೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ ಬಡ ಮಕ್ಕಳಿಗಾಗಿ ಹೋರಾಟ ನಡೆಯುತ್ತಿದೆ. ಫ್ರೀಡಂ ಪಾರ್ಕ್ ಸಾಕ್ಷಾತ್ ಶಿವನ ಆಸ್ಥಾನವಾಗಿದೆ. ಸೋಮವಾರದ ಅಧಿವೇಶನದಲ್ಲಿ ಸಿಎಂ ಯಡಿಯೂರಪ್ಪನವರು ಮೀಸಲಾತಿ ಬಗ್ಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಸಿಎಂ ಯಡಿಯೂರಪ್ಪನವರಿಗೆ ದೇವರು ಒಳ್ಳೆಯದು ಮಾಡಲಿ, ಮುಂದೆ ಸ್ಪಂದಿಸದಿದ್ದರೆ ಅಮರಣಾಂತ ಉಪವಾಸ ಮಾಡುತ್ತೇವೆ. ಮೊದಲು ಫ್ರೀಡಂ ಪಾರ್ಕ್ ಜೈಲು ಆಗಿತ್ತು, ಇಂದು ಜಗದೀಶನ ಸ್ಥಾನವಾಗಿದೆ. ನಮ್ಮ ಹೋರಾಟ ನಿರಂತರವಾಗಿರುತ್ತದೆ. ಯಾವುದೇ ಕಾರಣಕ್ಕೂ ಹೋರಾಟ ಹಿಂತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೋರಾಟ ಸ್ಥಳದಲ್ಲೇ ಪಂಚಮಸಾಲಿ ಶ್ರೀಗಳಿಂದ ಇಷ್ಟಲಿಂಗ ಪೂಜೆ

ಪ್ರತೀ ವರ್ಷ ಕೂಡಲಸಂಗಮ ಗುರುಪೀಠದಲ್ಲಿ ಶಿವರಾತ್ರಿ ಆಚರಿಸುತ್ತಿದ್ದೆವು. ಆದರೆ ಹೋರಾಟದ ಭಾಗವಾಗಿ ಈ ಧರಣಿ ಸ್ಥಳವನ್ನೇ ಕೂಡಲಸಂಗಮ ಪೀಠವಾಗಿಸಿಕೊಂಡಿದ್ದೇವೆ. ಇದು ಕೇವಲ ಆರಂಭ, ಶಿವ ಪೂಜೆ ಮೂಲಕ ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ.. ತಮಿಳುನಾಡು ಕದನ: ತಾವು ಕಣಕ್ಕಿಳಿಯುವ ಕ್ಷೇತ್ರ ಬಹಿರಂಗ ಪಡಿಸಿದ ಕಮಲ್ ಹಾಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.