ETV Bharat / city

ನೀರು ಸರಬರಾಜಿನಲ್ಲಿ ಎದ್ದು ಕಾಣುತ್ತಿವೆ ಸಮಸ್ಯೆಗಳು

ಬಳ್ಳಾರಿಯ 28 ವಲಯಗಳಿಗೆ ಈಗಾಗಲೇ 24x7 ನೀರು ಪೂರೈಕೆ ಯೋಜನೆಯ ಪೈಪ್​​​​​ಲೈನ್ ಹಾಕುವ ಕಾರ್ಯವು ಮುಕ್ತಾಯಗೊಂಡಿದೆ. ಡಿಸೆಂಬರ್ ಅಂತ್ಯಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತೆ. ಮುಂದಿನ ವರ್ಷದಲ್ಲಿ ಉಳಿದ 15 ವಲಯಗಳಿಗೆ ಪೈಪ್​​​​ಲೈನ್ ಅಳವಡಿಸುವ ಕಾರ್ಯ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ..

Issues in water supply
ನೀರು ಸರಬರಾಜಿನಲ್ಲಿ ಎದ್ದು ಕಾಣುತ್ತಿವೆ ಸಮಸ್ಯೆಗಳು
author img

By

Published : Sep 25, 2020, 8:10 PM IST

ಬೆಂಗಳೂರು: ಕರ್ನಾಟಕದ ನಗರಗಳಲ್ಲಿ ನೀರಿಲ್ಲದೆ ಪರದಾಟ ಉಂಟಾಗಿ, ಕೆಲವೊಮ್ಮೆ ಟ್ಯಾಂಕರ್‌ಗಳ ಮೊರೆ ಹೋಗುವುದು ಅನಿವಾರ್ಯ. ಇನ್ನು ಕೆಲವೆಡೆ ಅನಗತ್ಯ ನೀರು ಪೋಲಾಗುವುದರಿಂದ ನೀರಿನ ಅಭಾವ ಉಂಟಾಗುತ್ತಿದೆ. ನಗರಗಳಲ್ಲಿ ನೀರು ಸರಬರಾಜು ಹೇಗಿದೆ ಎಂಬುದರ ಒಂದು ವರದಿ ಇಲ್ಲಿದೆ.

ನಗರಗಳಲ್ಲಿ ಅನಗತ್ಯ ನೀರು ಪೋಲಾಗುತ್ತಿರುವುದಕ್ಕೆ ಕಡಿವಾಣ ಬಿದ್ದಿಲ್ಲ. ಇದರಿಂದ ನಗರಗಳಲ್ಲಿ ನೀರು ಸರಬರಾಜಿನಲ್ಲಿ ಸಮಸ್ಯೆಗಳು ಎದ್ದು ಕಾಣುತ್ತವೆ. ಮೈಸೂರು ನಗರದಲ್ಲಿ ನಾಲ್ಕು ಕಡೆಗಳಿಂದ ಕುಡಿಯುವ ನೀರು ಬರುತ್ತದೆ. ಪ್ರಮುಖವಾಗಿ ವಾಣಿವಿಲಾಸ್ ಹಾಗೂ ದೇವನೂರು ಜೊತೆಗೆ ಕಬಿನಿ, ಮೇಳಾಪುರ ಕಡೆಯಿಂದ ನೀರು ಸರಬರಾಜುಗುತ್ತದೆ. ನಗರದಲ್ಲಿ 1 ಲಕ್ಷದ 70 ಸಾವಿರ ನೀರಿನ ಸಂಪರ್ಕಗಳಿವೆ. ನೀರು ಸರಬರಾಜಿನಲ್ಲಿ ಸ್ವಲ್ಪ ಸಮಸ್ಯೆಗಳಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೆಲವೆಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪ್ರಸ್ತುತ 2.50 ಲಕ್ಷಕ್ಕೂ ಹೆಚ್ಚು ನೀರಿನ ಸಂಪರ್ಕಗಳಿವೆ. ಪ್ರತಿ ತಿಂಗಳು ಸರಾಸರಿ ಹುಬ್ಬಳ್ಳಿ ವಿಭಾಗದಲ್ಲಿ 2.30 ಕೋಟಿ ಹಾಗೂ ಧಾರವಾಡದಲ್ಲಿ 1.20 ಕೋಟಿ ರೂ.ಗಳಷ್ಟು ಬಿಲ್ ಸಂಗ್ರಹವಾಗುತ್ತಿದೆ. ಅವಳಿ‌ ನಗರದಲ್ಲಿ ನೀರು ಪೂರೈಕೆಯಲ್ಲಿ‌ ಪಾರದರ್ಶಕತೆ ಪಡೆಯುವ ವಿಶ್ವಾಸವನ್ನು ಮಹಾನಗರ ಪಾಲಿಕೆ ಹೊಂದಿದೆ.

ಅವಳಿ ನಗರದಲ್ಲಿನ ಸದ್ಯದ 67 ವಾರ್ಡ್​​​​ಗಳಿಗೆ ನಿರಂತರ ನೀರು ಯೋಜನೆ ಜಾರಿಗೊಳಿಸಲಾಗುತ್ತಿದೆ. ಈಗಾಗಲೇ 26 ವಾರ್ಡ್​​​​ಗಳಲ್ಲಿ ಪೂರ್ಣಗೊಂಡಿದೆ. ಉಳಿದ 41 ವಾರ್ಡ್​​​​ಗಳಲ್ಲಿ 24x7 ನೀರು ಯೋಜನೆಯನ್ನು ಎಲ್​​​ಅಂಡ್​​​​ಟಿ ಕಂಪನಿ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಇದಕ್ಕಾಗಿ ವಿಶ್ವಬ್ಯಾಂಕ್ ನೆರವಿನೊಂದಿಗೆ ರಾಜ್ಯ ಸರಕಾರ 763 ಕೋಟಿ ರೂ. ವಿನಿಯೋಗಿಸಲಿದೆ. ಯೋಜನೆಯನ್ನು 2025ಕ್ಕೆ ಪೂರ್ಣಗೊಳಿಸಲು ಸರ್ಕಾರ ತಾಕೀತು ಮಾಡಿದೆ.

ಮಹಾನಗರಗಳಲ್ಲಿ ಹೇಗಿದೆ ನೀರು ಸರಬರಾಜು?

ಶಿವಮೊಗ್ಗ ನಗರದಲ್ಲಿ‌ 47 ಸಾವಿರ ನೀರಿನ ಸಂಪರ್ಕಗಳಿವೆ. ಗಾಜನೂರಿನ ತುಂಗಾ ಅಣೆಕಟ್ಟೆಯಿಂದ ಪ್ರತಿ ದಿನ 84 ಎಂಎಲ್‌​ಡಿಯಷ್ಟು ನೀರು ಸರಬರಾಜಾಗುತ್ತಿದೆ. ಮಂಡ್ಲಿಯ ಕೃಷ್ಣರಾಜೇಂದ್ರ ಸಾಗರ ನೀರು‌ ಶುದ್ಧಿಕರಣ ಘಟಕದಲ್ಲಿ ನೀರನ್ನು ಶುದ್ಧೀಕರಿಸಲಾಗುತ್ತಿದೆ. ಶುದ್ಧೀಕರಣ, ಪ್ರಸರಣ‌ ಪ್ರಕ್ರಿಯೆಯಲ್ಲಿ ಶೇ.30ರಷ್ಟು ನೀರು ನಷ್ಟ ಉಂಟಾಗುತ್ತದೆ. ಇದರಿಂದ ನಗರಕ್ಕೆ ಪ್ರತಿ ದಿನ 65 MLD ಯಷ್ಟು ನೀರು‌ ಜನರಿಗೆ ತಲುಪುತ್ತದೆ. ಇದರಲ್ಲಿ 10 MLD ನೀರು ದೊಡ್ಡ ಸಂಸ್ಥೆಗಳಿಗೆ ಬೇಕಾಗುತ್ತದೆ.

ಬಳ್ಳಾರಿಯ 28 ವಲಯಗಳಿಗೆ ಈಗಾಗಲೇ 24x7 ನೀರು ಪೂರೈಕೆ ಯೋಜನೆಯ ಪೈಪ್​​​​​ಲೈನ್ ಹಾಕುವ ಕಾರ್ಯವು ಮುಕ್ತಾಯಗೊಂಡಿದೆ. ಡಿಸೆಂಬರ್ ಅಂತ್ಯಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತೆ. ಮುಂದಿನ ವರ್ಷದಲ್ಲಿ ಉಳಿದ 15 ವಲಯಗಳಿಗೆ ಪೈಪ್​​​​ಲೈನ್ ಅಳವಡಿಸುವ ಕಾರ್ಯ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಅಲ್ಲೀಪುರ-ಮೋಕಾ ಕುಡಿಯುವ ನೀರಿನ ಕೆರೆಯಿಂದ ಬಳ್ಳಾರಿ ನಗರಕ್ಕೆ ಅಂದಾಜು 75 ಎಂಎಲ್​​​​​​​​ಡಿ ನೀರು ಪೂರೈಕೆಯಾಗುತ್ತಿದೆ. ಅದರಲ್ಲಿ ಸಾಕಷ್ಟು ನೀರು ಅನಗತ್ಯ ಪೋಲಾಗುತ್ತಿದೆ. ಹಳೆ ಪೈಪ್​​​​​ಲೈನ್ ಇರುವುದರಿಂದ ಎಲ್ಲೆಂದರಲ್ಲಿ ಪೈಪ್ ಒಡೆದು ಅನಗತ್ಯ ನೀರು ಪೋಲಾಗುತ್ತಿದೆ. ಡ್ಯಾಮೇಜ್ ಆದ ಸ್ಥಳದಲ್ಲಿ ಹೊಸ ಪೈಪ್​​​ಲೈನ್ ಮಾಡುವ ಕಾರ್ಯ ನಿರಂತರ ನಡೆದಿದೆ. ಜನರಿಗೆ ನೀರಿನ ಮಹತ್ವ ಅರಿವಾದಾಗ ಮಾತ್ರ ಅದರ ಸಮಸ್ಯೆಯಿಂದ ಪಾರಾಗೋದು ಸಾಧ್ಯ. ನಮ್ಮ ಜೀವ ಜಲ ಉಳಿಸುವುದು ನಮ್ಮ ಕರ್ತವ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.