ETV Bharat / city

ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಕಳಕಳಿ ಇದ್ರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ: ಬಿಎಸ್​ವೈ

author img

By

Published : Jul 14, 2019, 2:01 PM IST

ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಕಳಕಳಿ ಇದ್ದು, ಪ್ರಾಮಾಣಿಕತೆ ಇದ್ದರೆ ಈಗಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ. ಇಲ್ಲದಿದ್ದರೆ ಸೋಮವಾರ ಕಾನ್ಫಿಡೆನ್ಸ್ ಮೋಷನ್ ವೇಳೆ ನೀವು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್​ ಯಡಿಯೂರಪ್ಪ

ಬೆಂಗಳೂರು: ಕುಮಾರಸ್ವಾಮಿಯವರೇ, ನಿಮಗೆ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಕಳಕಳಿ, ಪ್ರಾಮಾಣಿಕತೆ ಇದ್ದರೆ ದಯಮಾಡಿ ಈಗಲೇ ರಾಜೀನಾಮೆ ನೀಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ರಮಡಾ ರೆಸಾರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್​ವೈ, ವಿಶ್ವಾಸಮತ ತೆಗೆದುಕೊಳ್ಳದೆ ಕಾರ್ಯಕಲಾಪ ನಡೆಸುವುದಿಲ್ಲ ಎಂದು ಹೆಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ. ವಿಶ್ವ ಪ್ರಯತ್ನ ಮಾಡಿದರೂ ಸಹ ಎಂಟಿಬಿ ನಾಗರಾಜ್ ಹಾಗೂ ಸುಧಾಕರ್ ನಿಮ್ಮ ಜೊತೆ ಇರಲ್ಲ ಅಂತ ಹೋಗಿದ್ದಾರೆ. ಅವರನ್ನೂ ಸೇರಿಸಿ ಈಗಾಗಲೇ 15 ಜನ ಶಾಸಕರು ಸುಪ್ರೀಂಕೋರ್ಟ್​ಗೆ ಹೋಗಿದ್ದಾರೆ. ಹೀಗಾಗಿ ನೀವು ವಿಶ್ವಾಸ ಮತ ಯಾಚಿಸದೇ ನಾಳಿನ ಸದನದಲ್ಲಿ ಬೇರೆ ಕಲಾಪಕ್ಕೆ ಅವಕಾಶ ಇಲ್ಲ ಎಂದರು.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್​ ಯಡಿಯೂರಪ್ಪ

ಮಂಗಳವಾರ ತೀರ್ಪು ಪ್ರಕಟವಾಗಲಿದೆ. ಸೋಮವಾರ ಕಾನ್ಫಿಡೆನ್ಸ್ ಮೋಷನ್ ವೇಳೆ ನೀವು ರಾಜೀನಾಮೆ ನೀಡಬೇಕಾಗುತ್ತೆ ಎಂದು ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.