ಆರೋಗ್ಯವಂತರು ಕೂಡ ಕೊರೊನಾಗೆ ಬಲಿ..ಕಾರಣ ಗೊತ್ತೇ ?

author img

By

Published : May 10, 2021, 6:59 PM IST

ಕೊರೊನಾ

ಮೊದಲ ಅಲೆಯಲ್ಲಿ ಇತರ ಆರೋಗ್ಯ ಸಮಸ್ಯೆ ಇದ್ದವರಲ್ಲಿ ಸಾವು ಹೆಚ್ಚಾಗಿತ್ತು. ಆದರೆ, ಈ ಬಾರಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ ಇದ್ದರೂ ಸಾವು ಸಂಭವಿಸ್ತಿದೆ.‌ ಕಳೆದ 5 ದಿನದಲ್ಲಿ 2,140 ಸೋಂಕಿತರು ಕೊರೊನಾಗೆ ಬಲಿ ಆಗಿದ್ದಾರೆ. ಇದರಲ್ಲಿ 790 ಸೋಂಕಿತರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಆದರೂ ಮೃತಪಟ್ಟಿದ್ದಾರೆ.

ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ಸೋಂಕು ಹರಡುವಿಕೆ ರೀತಿ ನೋಡಿ ತಜ್ಞರೇ ಆತಂಕಕ್ಕೆ ಒಳಗಾಗಿದ್ದಾರೆ. ಈ ಡೆಡ್ಲಿ ಕೊರೊನಾಗೆ ಹೆಚ್ಚು ಬಲಿಯಾಗ್ತಿರೋದು ಯಾರು? ಮೊದಲ ಅಲೆ ಹಾಗೂ ಎರಡನೇ ಅಲೆಯ ಸಾವಿನಲ್ಲಿ ಪತ್ತೆಯಾಗ್ತಿರುವ ಅಂಶ ಏನು? ಸ್ವಲ್ಪ ಯಾಮಾರಿದರೂ ಕೊರೊನಾ‌ ಸೋಂಕು ಜೀವವನ್ನೇ ಹೊತ್ತೊಯ್ಯುತ್ತೆ.

ಹೌದು, ಮೊದಲ ಅಲೆಯಲ್ಲಿ ಇತರ ಆರೋಗ್ಯ ಸಮಸ್ಯೆ ಇದ್ದವರಲ್ಲಿ ಸಾವು ಹೆಚ್ಚಾಗಿತ್ತು. ಆದರೆ, ಈ ಬಾರಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ ಇದ್ದರೂ ಸಾವು ಸಂಭವಿಸ್ತಿದೆ.‌ ಕಳೆದ 5 ದಿನದಲ್ಲಿ 2,140 ಸೋಂಕಿತರು ಕೊರೊನಾಗೆ ಬಲಿ ಆಗಿದ್ದಾರೆ. ಇದರಲ್ಲಿ 790 ಸೋಂಕಿತರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಆದರೂ ಮೃತಪಟ್ಟಿದ್ದಾರೆ. 1,350 ಸೋಂಕಿತರು ಆರೋಗ್ಯ ಸಮಸ್ಯೆ ಇದ್ದು ಮೃತಪಟ್ಟಿದ್ದಾರೆ. ಕಳೆದ 5 ದಿನದಲ್ಲಿ ಮೃತಪಟ್ಟವರ ಪೈಕಿ ಶೇ.32 ರಷ್ಟು ಸೋಂಕಿತರಿಗೆ ಯಾವುದೇ ಆರೋಗ್ಯದ ಸಮಸ್ಯೆ ಇರಲಿಲ್ಲ.

ಈಟಿವಿ ಭಾರತದೊಂದಿಗೆ ಮಣಿಪಾಲ್ ಆಸ್ಪತ್ರೆ ವೈದ್ಯ ಸಚಿನ್

ಇದಕ್ಕೆ ಪ್ರಮುಖ ಕಾರಣವಾಗಿರುವುದು ಕೊರೊನಾ‌ ಸೋಂಕಿನ ಬಗ್ಗೆ ಇರುವ ನಿರ್ಲಕ್ಷ್ಯ, ಕೊನೆ ಕ್ಷಣದಲ್ಲಿ ಆಸ್ಪತ್ರೆ ಬಾಗಿಲು ತಟ್ಟುತ್ತಿರುವುದೇ
ಸೋಂಕಿತರ ಸಾವಿಗೆ ಕಾರಣವಾಗಿದೆ.‌ ಹೀಗಾಗಿ ಆರೋಗ್ಯವಂತರು, ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಇರುವವರು ಸಹ ಕೊರೊನಾ ಲಕ್ಷಣ ಕಂಡುಬಂದರೆ ಕೂಡಲೇ ತಪಾಸಣೆಗೆ ಒಳಪಡಿ. ರೋಗ ಉಲ್ಬಣವಾಗುವ ಮೊದಲೇ ಆರೋಗ್ಯ ಕಾಪಾಡಿಕೊಳ್ಳಿ ಎನ್ನುತ್ತಿದ್ದಾರೆ ತಜ್ಞರು.

ಕೊರೊನಾ ಸಾವಿನ ಸವಾರಿ

ದಿನಾಂಕ ಲಕ್ಷಣ ಇದ್ದವರುಲಕ್ಷಣ ಇಲ್ಲದವರು
ಮೇ 4 281 111
ಮೇ 5 210 136
ಮೇ 6 161 167
ಮೇ 7 384 208
ಮೇ 8 314 168

ಈ ಬಗ್ಗೆ ಮಣಿಪಾಲ್ ಆಸ್ಪತ್ರೆಯ ವೈದ್ಯರಾಗಿರುವ ಡಾ ಸಚಿನ್ ಮಾತನಾಡಿದ್ದು, 22ರಿಂದ 44 ವರ್ಷ ಮೇಲ್ಪಟ್ಟ ವಯೋಮಾನದ ಆರೋಗ್ಯವಂತ ವ್ಯಕ್ತಿಗಳಿಗೆ ಬಿಪಿ, ಶುಗರ್, ಹೃದಯ ವ್ಯಾದಿ ಸೇರಿದಂತೆ ಯಾವುದೇ ರೀತಿ ಅನಾರೋಗ್ಯ ಸಮಸ್ಯೆ ಇಲ್ಲದೇ ಇದ್ದರೂ, ಅವರಲ್ಲಿ ಕೋವಿಡ್ ಸೋಂಕಿನ ತೀವ್ರತೆ ಹೆಚ್ಚಾಗಿ ಕಂಡು ಬರ್ತಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಕೋವಿಡ್ ರೂಪಾಂತರ.

ಹಾಗೇ ಶ್ವಾಸಕೋಶದಲ್ಲಿ ಹಾನಿಯಾಗುತ್ತಿದ್ದು, ಆರೋಗ್ಯವಂತರಲ್ಲಿ ಹೆಚ್ಚಿನ ಸೋಂಕು ಹರಡುತ್ತಿದೆ, ಸಾವು ಕೂಡ ಹೆಚ್ಚು ಸಂಭವಿಸುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕೊರೊನಾ ಮತ್ತೊಂದು ಸ್ವರೂಪ ಪಡೆದುಕೊಳ್ಳುವುದರ ಮೊದಲು ಎಲ್ಲರೂ ಕೊರೊನಾ ಲಸಿಕೆ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.