ETV Bharat / city

ಸ್ಟಾಕ್ ಮಾರ್ಕೆಟ್ ಪ್ರಾಫಿಟ್ ಹೆಸರಲ್ಲಿ ವಂಚನೆ: ಬಳ್ಳಾರಿ ಮೂಲದ ಮೂವರ ಬಂಧನ

author img

By

Published : May 7, 2022, 6:19 PM IST

ಸ್ಟಾಕ್ ಮಾರ್ಕೆಟ್ ಪ್ರಾಫಿಟ್ ಮಾಡಲು ಸಲಹೆ ನೀಡುತ್ತೇವೆ ಎಂದು ಹೇಳಿ ವಂಚನೆ ಮಾಡುತ್ತಿದ್ದ ಬಳ್ಳಾರಿ ಮೂಲದ ಮೂವರನ್ನು ಈಶಾನ್ಯ ವಿಭಾಗದ ಸಿಐಎನ್ (ಸೈಬರ್) ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Fraud in the name of stock market profit 3 arrested
ಸ್ಟಾಕ್ ಮಾರ್ಕೆಟ್ ಪ್ರಾಫಿಟ್ ಹೆಸರಿನಲ್ಲಿ ವಂಚನೆ: ಬಳ್ಳಾರಿ ಮೂಲದ ಮೂವರು ಬಂಧನ

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಟಿಪ್ಸ್​ ನೀಡುವುದಾಗಿ ಹೇಳಿ ವಂಚಿಸುತ್ತಿದ್ದ ಮೂವರನ್ನು ಈಶಾನ್ಯ ವಿಭಾಗದ ಸಿಐಎನ್ (ಸೈಬರ್) ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರೆಹಮತ್ ಉಲ್ಲಾ(29), ಮಲ್ಲಯ್ಯಸ್ವಾಮಿ(29) ಮತ್ತು ದುರ್ಗಪ(28) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 3 ಮೊಬೈಲ್ ಮತ್ತು ಆರು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಪರಿಚಿತ ವ್ಯಕ್ತಿಗಳು ದೂರುದರಾರಿಗೆ ಫೆಬ್ರವರಿ 14ರಂದು ಕರೆ ಮಾಡಿ ಹಣವನ್ನು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹಾಗೂ ಮೇಕ್ ಇನ್ ಪ್ರಾಫಿಟ್ ಎಂಬ ಕಂಪನಿಯಿಂದ ಟಿಪ್ಸ್ ಪಡೆದರ ಲಾಭವಾಗುತ್ತದೆ ಎಂದು ನಂಬಿಸಿದ್ದರು. ಅದರಂತ ದೂರುದಾರರು ಬ್ಯಾಂಕ್ ಖಾತೆಯಿಂದ ಆರೋಪಿಯ ಖಾತೆಗೆ 2.15 ಲಕ್ಷ ರೂ ಗಳನ್ನು ಹಂತ ಹಂತವಾಗಿ ಎರಡು ಮೊಬೈಲ್‌ ನಂಬರ್‌ಗಳಿಂದ ಪಾವತಿ ಮಾಡಿದ್ದರು. ಈ ರೀತಿ ಹಣ ಪಡೆದು ನಂತರ ಸಲಹೆ ನೀಡದೇ ವಂಚಿಸಿದ್ದಾರೆ. ಕೆಲವರಿಂದ ಅವರ ಷೇರು ಮಾರುಕಟ್ಟೆ ನಿರ್ವಹಣೆ ಮಾಡುವುದಾಗಿ ಹೇಳಿಯೂ ವಂಚನೆ ನಡೆಸಿದ್ದಾರೆ.

ಸ್ಟಾಕ್ ಮಾರ್ಕೆಟ್ ಪ್ರಾಫಿಟ್ ಹೆಸರಿನಲ್ಲಿ ವಂಚನೆ: ಬಳ್ಳಾರಿ ಮೂಲದ ಮೂವರು ಬಂಧನ

ಮೊಬೈಲ್​ ಲೊಕೇಶನ್​ ಆಧಾರದಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಳ್ಳಾರಿಯಲ್ಲಿದ್ದು ಕೊಂಡೇ ವಂಚನೆ ನಡೆಸಿದ್ದ ಮೂವರನ್ನು ಮೊಬೈಲ್ ಲೊಕೇಶನ್​ ಆಧಾರದಲ್ಲಿ ಬಂಧಿಸಿದ್ದಾರೆ​.

ಇದನ್ನೂ ಓದಿ:180 ರೂ. ಮೌಲ್ಯದ ಚಪ್ಪಲಿ ಕಳ್ಳತನ.. ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.