ಬಿಬಿಎಂಪಿ ಕಸದ ಲಾರಿಗೆ 4ನೇ ಬಲಿ.. ಫುಡ್​ ಡೆಲಿವರಿ ಬಾಯ್​ ಮೇಲೆ ಹರಿದ ಲಾರಿ ಚಕ್ರ

author img

By

Published : May 14, 2022, 11:01 PM IST

fourth-death-in-bbmp

ಬೆಂಗಳೂರಿನಲ್ಲಿ ಕಸದ ಲಾರಿಗಳು ಮಾರಣಾಂತಿಕವಾಗಿ ಪರಿಣಮಿಸಿವೆ. ಎರಡು ತಿಂಗಳ ಅಂತರದಲ್ಲಿ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿವೆ.

ಬೆಂಗಳೂರು: ನಗರದಲ್ಲಿ ಬಿಬಿಎಂಪಿ ಲಾರಿಗಳಿಂದ ಆಗುತ್ತಿರುವ ಅನಾಹುತಗಳಿಗೆ ಕೊನೆಯೇ ಇಲ್ವಾ? ಎರಡು ತಿಂಗಳ ಅಂತರದಲ್ಲಿ ಬಿಬಿಎಂಪಿ ಕಸದ ಲಾರಿಗೆ ನಾಲ್ಕನೇ ಬಲಿಯಾಗಿದೆ. ಇಂದು ಸಂಜೆ ನಾಗವಾರ-ಹೆಗಡೆನಗರ ಮಾರ್ಗದ ಥಣಿಸಂದ್ರ ರೈಲ್ವೇ ಮೇಲ್ಸೇತುವೆ ಬಳಿ‌ ಬಿಬಿಎಂಪಿಯ ಕಸದ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ.

ದೇವಣ್ಣ (25) ಬಲಿಯಾದ ಯುವಕ. ಯಾದಗಿರಿಯ ಸುರಪುರ ಮೂಲದ ದೇವಣ್ಣ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಸಂಜೆ 4 ಗಂಟೆ ಸುಮಾರಿಗೆ ಕರ್ತವ್ಯಕ್ಕೆ ತೆರಳಿದ್ದ ರೇವಣ್ಣನ ಬೈಕ್​ಗೆ ಬಿಬಿಎಂಪಿ ಕಸದ ಲಾರಿ ಗುದ್ದಿದೆ. ಇದರಿಂದ ನೆಲಕ್ಕೆ ಬಿದ್ದ ರೇವಣ್ಣ ತಲೆಯ ಮೇಲೆ ಲಾರಿಯ ಹಿಂಬದಿ ಚಕ್ರ ಹರಿದಿದೆ. ಇದರಿಂದ ರೇವಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕಾಗಮಿಸಿದ ಚಿಕ್ಕಜಾಲ ಸಂಚಾರ ಠಾಣಾ ಪೊಲೀಸರು ಲಾರಿ ಚಾಲಕ ದಿನೇಶ್ ನಾಯ್ಕ್ ಎಂಬಾತನನ್ನು ಬಂಧಿಸಿದ್ದಾರೆ.

ಕಸದ ಲಾರಿ ಕಿಲ್ಲರ್​ ಘಟನೆಗಳು: ಮಾರ್ಚ್ 21 ರಂದು ಹೆಬ್ಬಾಳದ ಬಳಿ ಅಕ್ಷಯ್​(13) ಎಂಬ ವಿದ್ಯಾರ್ಥಿನಿ ರಸ್ತೆ ದಾಟುತ್ತಿದ್ದಾಗ ಕಸದ ಲಾರಿ ಹರಿದು ಮೃತಪಟ್ಟಿದ್ದಳು. ಈ ಬಗ್ಗೆ ಆರ್.ಟಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಮಾರ್ಚ್ 31 ರಂದು ಬಾಗಲೂರು ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ರಾಮಯ್ಯ(70) ಎಂಬ ವೃದ್ದನ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಬಗ್ಗೆ ಚಿಕ್ಕಜಾಲ ಸಂಚಾರಿ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಏಪ್ರಿಲ್ 18 ರಂದು ಪದ್ಮಿನಿ(39) ಎಂಬ ಎಸ್.ಬಿ.ಐ ಉದ್ಯೋಗಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ನಾಯಂಡಹಳ್ಳಿ ಜಂಕ್ಷನ್ ಬಳಿ ಕಸದ ಲಾರಿ ಹರಿದು ಮೃತಪಟ್ಟಿದ್ದರು. ಈ ಬಗ್ಗೆ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಓದಿ: ವಾಹನ ಡಿಕ್ಕಿ ಹೊಡೆದು ಬಾಲಕಿ ಸಾವು: ಜೀವಂತವಾಗಿ ಚಾಲಕನ ಸುಟ್ಟ ಗ್ರಾಮಸ್ಥರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.