ರಾಜ್ಯದ ಮೊದಲ ಎಲೆಕ್ಟ್ರಿಕ್ ಬಸ್ ಓಡಾಟಕ್ಕೆ ಸಿದ್ಧ: ಏನಿದರ ವಿಶೇಷತೆ?

author img

By

Published : Sep 30, 2021, 4:10 PM IST

bangalore

ಬೆಂಗಳೂರಿನ ರಸ್ತೆಗಳಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್​​​ಗಳನ್ನು ಓಡಿಸಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ 50 ಕೋಟಿ ರೂ.ಯನ್ನು 90 ಎಲೆಕ್ಟ್ರಿಕ್ ಬಸ್​​ಗಳಿಗೆ ಉಪಯೋಗಿಸುತ್ತಿದೆ.

ಬೆಂಗಳೂರು: ಇತ್ತ ಪೆಟ್ರೋಲ್, ಡೀಸೆಲ್ ಬೆಲೆ ಗಗನಮುಖಿಯಾಗುತ್ತಿದೆ. ಮತ್ತೊಂದೆಡೆ ಪರಿಸರ ಮಾಲಿನ್ಯವೂ ಅಪಾಯಕಾರಿ ಮಟ್ಟ ತಲುಪುತ್ತಿರುವ ಕಾಲಘಟ್ಟದಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಎಲ್ಲರೂ ಚಿತ್ತ ಹರಿಸುತ್ತಿದ್ದಾರೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಜೊತೆ ಈಟಿವಿ ಭಾರತ ಪ್ರತಿನಿಧಿ ಮಾಹಿತಿ ಸಂಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ಮಹಾನಗರದ ರಸ್ತೆಗಳಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್​​​ಗಳನ್ನು ಓಡಿಸಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ 50 ಕೋಟಿ ರೂ.ಯನ್ನು 90 ಎಲೆಕ್ಟ್ರಿಕ್ ಬಸ್​​ಗಳಿಗೆ ಉಪಯೋಗಿಸುತ್ತಿದೆ. 'ಒಟ್ಟು ಒಪ್ಪಂದ ವೆಚ್ಚ' (ಜಿಸಿಸಿ) ಗುತ್ತಿಗೆಯಡಿ ಜೆಬಿಎಂ ಸಂಸ್ಥೆ ಈ ಬಸ್​​ಗಳನ್ನು ಸಿದ್ಧಪಡಿಸಿದ್ದು, NTPC ವ್ಯಾಪರ್ ವಿದ್ಯುತ್ ನಿಗಮ ಈ ಬಸ್​​ಗಳ ನಿರ್ವಹಣೆ ಮಾಡಲಿದೆ.

ಈ ಬಸ್​​ಗಳು ಬಿಎಂಟಿಸಿ ಒಡೆತನಕ್ಕೆ ಬರುವುದಿಲ್ಲ. ಬದಲಾಗಿ 10 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಎನ್​​​ಟಿಪಿಸಿ ವ್ಯಾಪರ್ ವಿದ್ಯುತ್ ನಿಗಮ ಇದರ ಜವಾಬ್ದಾರಿ ಹೊತ್ತಿದ್ದು, ದಿನಕ್ಕೆ 180 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ಫೀಡರ್ ಆಗಿ ಸೇವೆ ಸಲ್ಲಿಸಲಿದೆ.

ಪ್ರತಿ ಕಿ.ಮೀ ಗೆ 51.67 ರೂ.ಯನ್ನು ಬಿಎಂಟಿಸಿ ಸಂಸ್ಥೆಗೆ ಕೊಡಲಿದೆ. ಖಾಸಗಿ ಸಂಸ್ಥೆಯೇ ತನ್ನ ಬಸ್​​ಗೆ ಚಾಲಕರನ್ನು ನಿಯೋಜಿಸಲಿದೆ. ಜತೆಗೆ ಚಾರ್ಜಿಂಗ್ ವ್ಯವಸ್ಥೆ ನಿರ್ವಹಣೆಯನ್ನೂ ನೋಡಿಕೊಳ್ಳಲಿದೆ. ಕೆಲಸದ ಮಧ್ಯೆ ಒಂದು ಬಾರಿ ಚಾರ್ಜ್ ಮಾಡಲು 45 ನಿಮಿಷಗಳು ಬೇಕಾಗಿದ್ದು, 120 ಕಿ.ಮೀ ಓಡಿಸಬಹುದಾಗಿದೆ.

ಕೆಂಗೇರಿ, ಕೆ.ಆರ್.ಪುರಂ, ಯಶವಂತಪುರ ಸುತ್ತಮುತ್ತ ಮೆಟ್ರೋ ಫೀಡರ್ ಆಗಿ ಎಲೆಕ್ಟ್ರಿಕ್ ಬಸ್​​ಗಳು ಕಾರ್ಯ ನಿರ್ವಹಿಸಲಿದೆ. ಈ ಬಸ್​​ನಲ್ಲಿ 33 ಜನ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಪ್ರತೀ ಸೀಟ್​​ನಲ್ಲಿ ಎಮರ್ಜೆನ್ಸಿ ಬಟನ್ ವ್ಯವಸ್ಥೆ ಮಾಡಲಾಗಿದೆ.

ಒಂದೊಂದು ಬಸ್​​ಗೂ ಬಿಎಂಟಿಸಿ 45 ಲಕ್ಷ ರೂ.ಯನ್ನು ಸಂಸ್ಥೆಗೆ ನೀಡಿದೆ. ಉಳಿದಂತೆ ಕಂಡಕ್ಟರ್​ನ್ನು ಬಿಎಂಟಿಸಿ ವತಿಯಿಂದಲೇ ನೇಮಿಸಲಾಗುತ್ತದೆ. ಟಿಕೆಟ್ ಹಣವನ್ನೂ ಬಿಎಂಟಿಸಿಯೇ ಪಡೆಯಲಿದೆ. ಪ್ರತಿಯಾಗಿ ಕಿ.ಮೀ ಗೆ 51 ರೂ.ಯಂತೆ ಬಿಎಂಟಿಸಿ ಖಾಸಗಿ ಸಂಸ್ಥೆಗೆ ಕೊಡಲಿದೆ.

ಇದನ್ನೂ ಓದಿ: ಬಿಎಂಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್​ ನಾಳೆ ಅನಾವರಣ; ರಸ್ತೆಗಿಳಿಯೋದು ಯಾವಾಗ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.