ETV Bharat / city

ಎಲ್ಲೆ ಮೀರಿದ ದೀಪಾವಳಿ ಸಂಭ್ರಮ: ಸಿಲಿಕಾನ್​ ಸಿಟಿಯಲ್ಲಿ ಹೆಚ್ಚಿದ ವಾಯುಮಾಲಿನ್ಯ

author img

By

Published : Nov 14, 2019, 5:35 PM IST

ದೀಪಾವಳಿ ಹಬ್ಬದಂದು ಪಟಾಕಿ ಹೊಡೆಯವುದು ಸೇರಿದಂತೆ ನಾನಾ ಕಾರಣಗಳಿಂದ ಬೆಂಗಳೂರು ಸಿಟಿಯ ಮಾಲಿನ್ಯದ ಪ್ರಮಾಣ ಏರಿಕೆಯಾಗಿದೆ ಎಂದು ಕೆಎಸ್​ಪಿಸಿಬಿ ಕಾರ್ಯದರ್ಶಿ ಬಸವರಾಜ್ ಪಾಟೀಲ್ ತಿಳಿಸಿದ್ದಾರೆ.

ಕೆಎಸ್​ಪಿಸಿಬಿ ಕಾರ್ಯದರ್ಶಿ ಬಸವರಾಜ್ ಪಾಟೀಲ್


ಬೆಂಗಳೂರು: ಮೂರು ದಿನದ ದೀಪಾವಳಿ ಹಬ್ಬದ ಸಂಭ್ರಮ ಸಡಗರದಿಂದ ಬೆಂಗಳೂರು ಸಿಟಿ ಮತ್ತೆ ಮಾಲಿನ್ಯಕ್ಕೆ ತುತ್ತಾಗಿದೆ. ಪಟಾಕಿ ಸೇರಿದಂತೆ ನಾನಾ ಕಾರಣಗಳಿಂದ ಸಿಟಿಯಲ್ಲಿ ಮಾಲಿನ್ಯದ ಪ್ರಮಾಣ ಏರಿಕೆಯಾಗಿದೆ ಎಂದು ಕೆಎಸ್​ಪಿಸಿಬಿ ಕಾರ್ಯದರ್ಶಿ ಬಸವರಾಜ್ ಪಾಟೀಲ್ ತಿಳಿಸಿದ್ದಾರೆ.

ದೀಪಾವಳಿಗೆ ಪಟಾಕಿ ಬಳಕೆ: ಸಿಲಿಕಾನ್​ ಸಿಟಿಯಲ್ಲಿ ಹೆಚ್ಚಾದ ವಾಯುಮಾಲಿನ್ಯ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಮಾನ್ಯ ದಿನಗಳಿಗೆ ಹೊಲಿಸಿದ್ರೆ, ಸಿಟಿಯಲ್ಲಿ ಹಬ್ಬದಂದು ಮಾಲಿನ್ಯದ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅದರಲ್ಲೂ ನಿಮ್ಹಾನ್ಸ್​, ಬಸವೇಶ್ವರ ನಗರ ಹಾಗೂ ಸಿಟಿ ಸೆಂಟ್ರಲ್ ರೈಲ್ವೆ ನಿಲ್ದಾಣಗಳಲ್ಲಿ ಗರಿಷ್ಠ ಏರಿಕೆಯಾಗಿದೆ. ಕೆಎಸ್​ಪಿಸಿಬಿ ಸೇರಿದಂತೆ ಹಲವು ಇಲಾಖೆಗಳ ಅಭಿಯಾನ ಈ ಬಾರಿಯೂ ಫೇಲ್ ಆಗಿದ್ದು, ಇದರ ಇಂಪ್ಯಾಕ್ಟ್ ಮುಂದಿನ ದಿನಗಳಲ್ಲಿ ಸಿಟಿಯಲ್ಲಿ ತೀವ್ರವಾಗಿ ಇರಲಿದೆ. ಹೀಗಾಗಿ ಜನರಲ್ಲಿ ಆದಷ್ಟು ಜಾಗೃತಿ ಮೂಡಿಸಿ ಕೆಲಸ ಮಾಡಬೇಕಾಗಿದೆ. ಮುಂದಿನ ವರ್ಷ ಇನ್ನಷ್ಟು ಜಾಗೃತಿ ಮೂಡಿಸುವ ಕಾರ್ಯಗಳನ್ನ ಮಾಡುತ್ತೇವೆ ಎಂದರು.

ದೀಪಾವಳಿ ಸಮಯದಲ್ಲಿ ಸಿಡಿದ ಪಟಾಕಿಗಳಿಂದ ಹಲವು ಕಡೆ ಸಂಪೂರ್ಣ ಹೊಗೆ ತುಂಬಿಹೋಗಿದೆ. ಹಬ್ಬದ ದಿನವಾದ 27, 28, 29 ರಂದು ಸಿಟಿ ಸೆಂಟ್ರಲ್ ರೈಲ್ವೆ ನಿಲ್ದಾಣ 115, ಬಸವೇಶ್ವರ ನಗರ 92, ಹೆಬ್ಬಾಳ 69, ಜಯನಗರ 5ನೇ ಹಂತ 97, ಮೈಸೂರು ರೋಡ್ 75, ನಿಮ್ಹಾನ್ಸ್ 67, ಸಿಲ್ಕ್ ಬೋರ್ಡ್ ಜಂಕ್ಷನ್​​ನಲ್ಲಿ 98ರಷ್ಟು ಮಾಲಿನ್ಯ ಏರಿಕೆಯಾಗಿದೆ.

Intro:ಹಬ್ಬದ ಪಟಾಕಿ ಹಿನ್ನಲೆ ಸಿಟಿಯಲ್ಲಿ ಹೆಚ್ಚಾದ ವಾಯುಮಾಲಿನ್ಯ- ಸ್ಥಳೀಯ ಇಲಾಖೆಗಳ ಜಾಗ್ರತ ಅಭಿಯಾನ ಫೇಲ್!


ಬೆಂಗಳೂರು- ಮೂರೇ ಮೂರು ದಿನದ ದೀಪಾವಳಿ ಹಬ್ಬದ ಸಂಭ್ರಮ ಸಡಗರಕ್ಕೆ, ಬೆಂಗಳೂರು ಸಿಟಿ ಮತ್ತೆ ಮಾಲಿನ್ಯಕ್ಕೆ ತುತ್ತಾಗಿದೆ. ಪಟಾಕಿ ಸೇರಿದಂತೆ ನಾನಾ ಕಾರಣಗಳಿಂದ ಸಿಟಿಯಲ್ಲಿ ಮಾಲಿನ್ಯದ ಪ್ರಮಾಣ ಏರಿಕೆಯಾಗಿದೆ. ದೀಪಾವಳಿ ಸಮಯದಲ್ಲಿ ಸಿಡಿದ ಪಟಾಕಿಗಳಿಂದ ಹಲವು ಏರಿಯಾಗಳು ಸಂಪೂರ್ಣ ಹೊಗೆಯಿಂದ ತುಂಬಿಹೋಗಿವೆ. ಸಿಲಿಕಾನ್ ಸಿಟಿಯಲ್ಲಿ ದೀಪಾವಳಿ ಹಬ್ಬದಂದು ವಾಯುಮಾಲಿನ್ಯದ ಪ್ರಮಾಣ ಆಕಾಶಕ್ಕೆ ಏರಿಕೆಯಾಗಿದೆ. ಹಬ್ಬದ ದಿನವಾದ 27 ರಂದು ಸಿಟಿ ಸೆಂಟ್ರಲ್ ರೇಲ್ವೆ ನಿಲ್ದಾಣ 115, ಬಸವೇಶ್ವರ ನಗರ 92, ಹೆಬ್ಬಾಳ 69, ಜಯನಗರ 5ನೇ ಹಂತ 97, ಮೈಸೂರು ರೋಡ್ 75 , ನಿಮ್ಹಾನ್ಸ್ 67, ಸಿಲ್ಕ್ ಬೋರ್ಡ್ ಜಂಕ್ಷನ್ 98 ರಷ್ಟು ಗುಣಮಟ್ಟ ಸೂಚ್ಯಂಕ ಏರಿಕೆಯಾಗಿದೆ. ಸಾಮಾನ್ಯ ದಿನಗಳಿಗೆ ಹೊಲಿಸಿದ್ರೆ ಸಿಟಿಯಲ್ಲಿ ಹಬ್ಬದಂದು ಮಾಲಿನ್ಯದ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅದರಲ್ಲೂ ನಿಮ್ಹಾನ್ಸ್ , ಬಸವೇಶ್ವರ ನಗರ ಹಾಗೂ ಸಿಟಿ ಸೆಂಟ್ರಲ್ ರೇಲ್ವೆ ನಿಲ್ದಾಣಗಳಲ್ಲಿ ಗರಿಷ್ಠ ಏರಿಕೆ ಕಂಡಿದ್ದು. ಕೆಎಸ್ ಪಿಸಿಬಿ ಸೇರಿದಂತೆ ಹಲವು ಇಲಾಖೆಗಳ ಅಭಿಯಾನ ಈ ಭಾರಿಯೂ ಸಿಟಿಯಲ್ಲಿ ಫೇಲ್ ಆಗಿದ್ದು.. ಇದರ ಇಂಪ್ಯಾಕ್ಟ್ ಮುಂದಿನ ದಿನಗಳಲ್ಲಿ ಸಿಟಿಯಲ್ಲಿ ತೀವ್ರವಾಗಿ ಇರಲಿದೆ. ಇಷ್ಟಾದ್ರೂ ಮಾಲಿನ್ಯ ನಿಯಂತ್ರಣ ಮಂಡಳಿ ಮಾತ್ರ ಕಳೆದ ಬಾರಿ ದೀಪಾವಳಿಗೆ ಹೋಲಿಸಿದ್ರೆ ಈ ಆ ಭಾರಿ ಮಾಲಿನ್ಯದ ಪ್ರಮಾಣ ಇಳಿಕೆ ಕಂಡಿದೆ ಅಂತ ಹೇಳ್ತಿದೆ. ಮಳೆಯಾಗಿದ್ದರಿಂದ ಪಟಾಕಿ ಮಾಲಿನ್ಯ ಕಡಿಮೆಯಾಗಿದೆ ಎಂದು ಕೆ,ಎಸ್,ಪಿ,ಸಿ,ಬಿ ಕಾರ್ಯದರ್ಶಿ ಬಸವರಾಜ್ ಪಾಟೀಲ್ ತಿಳಿಸಿದರು.


ನಗರ ಸಾಮಾನ್ಯ ದಿನದಲ್ಲಿ ಹಬ್ಬದ ದಿನಗಳಲ್ಲಿ (27,28,29ರಂದು ವಾಯುಮಾಲಿನ್ಯ)


ಸಿಟಿ ಸೆಂಟ್ರಲ್ ರೇಲ್ವೆ ನಿಲ್ಧಾಣ 110 AQI - 111 AQI


ಎಸ್.ಜಿ.ಹಳ್ಳಿ ಬಸವೇಶ್ವರ ನಗರ 51 AQI -85 AQI


ಹೆಬ್ಬಾಳ 46 AQI- 71 AQI


ಜಯನಗರ 5ನೇ ಹಂತ 75 AQI - 90 AQI


ನಿಮ್ಹಾನ್ಸ್ 35 AQI -69 AQI


ಸೆಂಟ್ರಲ್ ಸಿಲ್ಕ್ ಬೋರ್ಡ್ 90 AQI - 67 AQI


ಮೈಸೂರು ರೋಡ್ 73 AQI - 76 AQI




ಪಟಾಕಿ ಹಾಗೂ ಹಬ್ಬದ ದಿನಗಳಲ್ಲಿ ಊಂಟಾದ ಧೂಳಿನಿಂದ ಮಾಲಿನ್ಯದ ಪ್ರಮಾಣ ಏರಿಕೆಯಾಗಿದೆ. ಕಳೆದ ದೀಪಾವಳಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಹಬ್ಬದ ಸಮಯದಲ್ಲಿ ಊಂಟಾದ ಮಳೆಯಿಂದ ಪಟಾಕಿ ಹೊಡೆಯುವುದಕ್ಕೆ ಬ್ರೇಕ್ ಬಿದ್ದು ಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ. ಇನ್ನು ಕೆ.ಎಸ್.ಪಿ.ಸಿ.ಬಿ ಹಬ್ಬದ ಸಮಯದಲ್ಲಿ ಕೇವಲ ಕರ್ಮಸಿಯಲ್ ಏರಿಯಾಗಳಲ್ಲಿ ಮಾತ್ರ ಮಾಲಿನ್ಯದ ಪ್ರಮಾಣ ಚೆಕ್ ಮಾಡಿದ್ದು ಜನವಸತಿ ಪ್ರದೇಶಗಳಲ್ಲಿ ಕಡಿಮೆ ಮಟ್ಟದಲ್ಲಿ ವಾಯುಮಾಲಿನ್ಯ ಪ್ರಮಾಣ ಟೆಸ್ಟ್ ಮಾಡಿರೊದರಿಂದ ಈ ಅಂಕಿಅಂಶ ಸಿಕ್ಕಿದೆ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಾರಿ ಕಡಿಮೆ ಮಾಲಿನ್ಯವಾಗಿದೆ ಎಂತಾ ಹೇಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ದೀಪಾವಳಿ ಹಬ್ಬದಲ್ಲಿ ಸಿಟಿಯಲ್ಲಿ ಉಂಟಾಗಿರುವ ಮಾಲಿನ್ಯ ಸಹಜ ಸ್ಥಿತಿಗೆ ಬರೊದಕ್ಕೆ ಹಲವು ದಿನಗಳು ಬೇಕಾಗಿದ್ದು, ಶ್ವಾಸಕೋಶ ಸೇರಿದಂತೆ ನಾನಾ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಇದು ಮತಷ್ಟು ಆತಂಕ ಉಂಟು ಮಾಡಿದೆ. ಮೂರು ದಿನದ ದೀಪಾವಳಿ ಹಬ್ಬಕ್ಕೆ ಸಿಟಿ ಮಾಲಿನ್ಯವಾಗಿದ್ದು, ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಹಲವು ಇಲಾಖೆಗಳು ಜಾಗೃತಿ ಅಭಿಯಾನಗಳ ಸರ್ಕಸ್ ಫೇಲ್ ಆಗಿದೆ.. ಸಿಟಿಯಲ್ಲಿ ಪಟಾಕಿಗಳಿಗೆ ಪರ್ಯಾಯವಾಗಿ ಹಸಿರು ಪಟಾಕಿಗಳನ್ನು ಪರಿಚಯಿಸದೇ ಇರೊದು ಮತ್ತೆ ಮಾಲಿನ್ಯ ಪ್ರಮಾಣ ಏರಿಕೆಯಾಗಲು ಕಾರಣವಾಗಿದೆ.




ಸೌಮ್ಯಶ್ರೀ
Kn_bng_04_KSPCB_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.