ETV Bharat / city

ಸಂತೋಷ್ ವಿರುದ್ಧ ಎಫ್​ಐಆರ್​: ಸಿಎಂಗೆ ಶುರುವಾಗುತ್ತಾ ಪೀಕಲಾಟ ..?

author img

By

Published : Nov 28, 2020, 9:05 AM IST

Updated : Nov 28, 2020, 9:43 AM IST

sd
ಸಂತೋಷ್ ವಿರುದ್ಧ ಎಫ್ಐಆರ್

08:56 November 28

ಸಂತೋಷ್ ವಿರುದ್ಧ ಎಫ್ಐಆರ್

ಬೆಂಗಳೂರು: ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.  

ನಿನ್ನೆ ರಾತ್ರಿ ಸಂತೋಷ್​ ನಿದ್ರೆ ಮಾತ್ರೆ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದರು. ಈ ಹಿನ್ನೆಲೆ ಚಿಕಿತ್ಸೆಗೆಗಾಗಿ ನಗರದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಗಲೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಏನೂ, ಯಾರು ಎನ್ನುವುದರ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ  ಪೊಲೀಸರು ಸಂತೋಷ್ ಹಾಗೂ ಮತ್ತವರ ಪತ್ನಿ ಜಾಹ್ನವಿ ಹೇಳಿಕೆ ಪಡೆಯಲಿದ್ದಾರೆ.  

ಸಿಎಂಗೆ ಶುರುವಾಗುತ್ತಾ ಪೀಕಲಾಟ..?

ನಿನ್ನೆ ರಾತ್ರಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಸಂತೋಷ್, ಭಾರತೀಯ ದಂಡ ಸಂಹಿತೆ 309ರ ಪ್ರಕಾರ ಆತ್ಮಹತ್ಯೆ ಯತ್ನ ಅಪರಾಧವಾಗಿದ್ದು, ಗರಿಷ್ಠ ಒಂದು ವರ್ಷದವರೆಗೂ ಶಿಕ್ಷೆ ವಿಧಿಸಬಹುದಾಗಿದೆ.. ಐಪಿಸಿ 309 ಪ್ರಕಾರ ದೂರು ದಾಖಲಿಸಿದರೆ ಆತ್ಮಹತ್ಯೆಗೆ ಕಾರಣ ಏನು ಎಂದು ಸ್ಪಷ್ಟಪಡಿಸಬೇಕಾಗುತ್ತೆ. ರಾಜಕೀಯ ಕಿರುಕುಳ, ಯಾರಾದರೂ ಪ್ರಚೋದನೆ ಇತ್ತ ಎಂಬುದನ್ನು ತಿಳಿಸಬೇಕಾಗುತ್ತೆ. ಅಲ್ಲದೇ ಮಾನಸಿಕ ಖಿನ್ನತೆ ಮನೋ ಕಾಯಿಲೆಯ ನೆಪ ನೀಡಿದರೆ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಕುತ್ತು ಬರುವ ಸಂಭವವಿದೆ.  Mental health care act 2017 ರ ಪ್ರಕಾರ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದರೆ ಸರ್ಕಾರವೇ ಚಿಕಿತ್ಸೆ ನೀಡುತ್ತೆ. ಆದರೆ, ಖಿನ್ನತೆ ವಾಸಿಯಾಗುವವರೆಗೂ ಸಿಎಂ ರಾಜಕೀಯ ಕಾರ್ಯದರ್ಶಿಯಂತಹ ಗಂಭೀರ ಜವಾಬ್ದಾರಿ ನಿರ್ವಹಣೆ ಕಷ್ಟ. ಮನೋ ದೌರ್ಬಲ್ಯ ಇರುವವರು ಸರ್ಕಾರದ ಆಡಳಿತ ಯಂತ್ರದಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದೀರಾ ಎಂದು ವಿರೋಧ ಪಕ್ಷಗಳು ವಿರೋಧಿಸಬಹುದು. ಹೀಗಾಗಿ ಸಂತೋಷ್ ಆತ್ಮಹತ್ಯೆ ಯತ್ನ ಸಿಎಂಗೆ ಹೊಸ ಪೀಕಲಾಟ ತಂದಿಡಬಹುದು ಎನ್ನಲಾಗುತ್ತಿದೆ. ಸದ್ಯ ಆತ್ಮಹತ್ಯೆಗೆ ಸಂತೋಷ್​ ಏನು ಕಾರಣ ನೀಡ್ತಾರೆ ಎನ್ನುವುದರ ಮೇಲೆ ಎಲ್ಲರ ಗಮನವಿದೆ.  

Last Updated : Nov 28, 2020, 9:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.