ETV Bharat / city

ಈದ್ಗಾ ಮೈದಾನದ ಗೋಡೆ ಕೆಡವುದಾಗಿ ಹೇಳಿದ್ದ ಹಿಂದೂ ಕಾರ್ಯಕರ್ತನ ವಿರುದ್ಧ ಎಫ್ಐಆರ್

author img

By

Published : Aug 10, 2022, 6:48 AM IST

ಚಾಮರಾಜಪೇಟೆ ಈದ್ಗಾ ಮೈದಾನ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಹಿಂದೂ ಕಾರ್ಯಕರ್ತ ಭಾಸ್ಕರನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಭಾಸ್ಕರನ್ ಹೇಳಿಕೆಯಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗಲಿದೆ ಎಂದು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Idgah Maidan
ಈದ್ಗಾ ಮೈದಾನ

ಬೆಂಗಳೂರು: ವಿನಾಯಕ ಚತುರ್ಥಿ ಸಮೀಪಿಸುತ್ತಿರುವ ಬೆನ್ನಲ್ಲೇ ನಗರದ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದದ ಕೇಂದ್ರ ಬಿಂದುವಾಗಿದೆ. ಬಾಬ್ರಿ ಮಸೀದಿ ರೀತಿ ಈದ್ಗಾ ಮೈದಾನದಲ್ಲಿನ ಗೋಡೆ ಕೆಡವುದಾಗಿ ಹೇಳಿಕೆ ನೀಡಿದ್ದ ಹಿಂದೂ‌ ಕಾರ್ಯಕರ್ತ ಭಾಸ್ಕರನ್ ಮೇಲೆ ಚಾಮರಾಜಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕಳೆದ ಒಂದು ವರ್ಷದಿಂದ ಚಾಮರಾಜಪೇಟೆಯ ಈದ್ಗಾ ಮೈದಾನದ ವಾರಸುದಾರಿಕೆ ವಿಚಾರ ಚರ್ಚೆಯಲ್ಲಿದೆ. ಹಿಂದೂಪರ ಸಂಘಟನೆ, ಬಿಬಿಎಂಪಿ ಹಾಗು ವಕ್ಫ್ ಬೋರ್ಡ್ ನಡುವೆ ಸಂಘರ್ಷ ನಡೆಯುತ್ತಿದ್ದು, ಸದ್ಯಕ್ಕೆ ಈದ್ಗಾ ಮೈದಾನ ಕಂದಾಯ ಇಲಾಖೆ ಸ್ವತ್ತಾಗಿದೆ. ಇದೇ ವಿಚಾರವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಭಾಸ್ಕರನ್, 'ಈದ್ಗಾ ಮೈದಾನವನ್ನ ಎಲ್ಲರೂ ಆಟದ ಮೈದಾನವಾಗಿ ಬಳಸಿಕೊಳ್ಳಬೇಕು.

ಹೀಗಾಗಿ, ಡಿಸೆಂಬರ್ 6 ರೊಳಗೆ ಮೈದಾನದ ಗೋಡೆ ಕೆಡವಬೇಕು. ನಾವು ಸರ್ಕಾರಕ್ಕೆ ಗಡುವು ನೀಡುತ್ತಿದ್ದೇವೆ.ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಲು ತಯಾರಿ ನಡೆಸಿದ್ದೇವೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರದ ಹಿಂದೂಪರ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದೇವೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಭಾಸ್ಕರನ್ ಹೇಳಿಕೆಯಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗಲಿದೆ. ಅನ್ಯ ಧರ್ಮೀಯರು ಪೂಜಿಸುವ ಜಾಗದ ಬಗ್ಗೆ ಅವಮಾನಿಸಿ ಮಾತನಾಡಿದ್ದಾರೆ. ಇದು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹೇಳಿಕೆ. ಅಲ್ಲದೇ, ಡಿಸೆಂಬರ್ 6 ಡೇಟ್ ಬರೆದಿಟ್ಟುಕೊಳ್ಳಿ ಈದ್ಗಾ ಮೈದಾನ ಗೋಡೆ ನೆಲಸಮ ಆಗುವುದು ಖಚಿತ ಎಂದಿರುವ ಭಾಸ್ಕರನ್ ಹೇಳಿಕೆ ಆಧರಿಸಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ; ಈದ್ಗಾ ಮೈದಾನ ವಕ್ಫ್ ಬೋರ್ಡ್​ದೂ ಅಲ್ಲ, ಹಿಂದೂಗಳದ್ದು ಅಲ್ಲ: ಪ್ರಮೋದ್​ ಮುತಾಲಿಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.