ETV Bharat / city

ಅಭಿಮಾನಿಗಳಿಗೆ 'ಅಪ್ಪು ಸಮಾಧಿ' ದರ್ಶನಕ್ಕೆ ಅವಕಾಶ : ದೀಪ ಹಚ್ಚಿ ನೆಚ್ಚಿನ ನಟನಿಗೆ ನಮನ

author img

By

Published : Nov 3, 2021, 11:55 AM IST

ಇಂದು ( ಬುಧವಾರ) ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಅಭಿಮಾನಿಗಳಿಗೆ ಪುನೀತ್ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ..

Fans are allowed to watch the tomb of Puneet Raj Kumar
ಅಭಿಮಾನಿಗಳಿಗೆ 'ಅಪ್ಪು ಸಮಾಧಿ' ದರ್ಶನಕ್ಕೆ ಅವಕಾಶ

ಬೆಂಗಳೂರು : ದಿ. ಪುನೀತ್ ರಾಜ್​​ಕುಮಾರ್ ಸಮಾಧಿ ದರ್ಶನಕ್ಕೆ ನೂರಾರು ಅಭಿಮಾನಿಗಳ ದಂಡು ರಾಜಧಾನಿಯ ಲಗ್ಗೆರೆ ರಿಂಗ್ ರಸ್ತೆಯ ಕಂಠೀರವ ಸ್ಟುಡಿಯೋ ಕಡೆ ಹರಿದು ಬರುತ್ತಿದೆ.

ಅಭಿಮಾನಿಗಳಿಗೆ 'ಅಪ್ಪು ಸಮಾಧಿ' ದರ್ಶನಕ್ಕೆ ಅವಕಾಶ..

ಸಮಾಧಿಗೆ ಭೇಟಿ ನೀಡಿದ ಅಭಿಮಾನಿಗಳು 'ಅಪ್ಪು'ಗೆ ಜೈಕಾರ ಹಾಕುತ್ತಿದ್ದಾರೆ. ಪುನೀತ್ ಸಮಾಧಿ ಬಳಿ ದೀಪ ಬೆಳಗಿಸಿ ನಮನ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಸುತ್ತಮುತ್ತ ಸ್ಥಳೀಯ ಪೊಲೀಸ್ ಹಾಗೂ ಆರ್​​ಪಿಎಫ್ ಬಿಗಿ ಭದ್ರತೆ ನೀಡಲಾಗಿದೆ.

ನಿನ್ನೆ ಸಂಜೆಯಿಂದ ಅವಕಾಶ : ಅಪ್ಪು ಸಮಾಧಿ ದರ್ಶನಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ದರ್ಶನ ಭಾಗ್ಯ ಸಿಕ್ಕಿದೆ. ನಿನ್ನೆ (ಮಂಗಳವಾರ) ಕುಟುಂಬಸ್ಥರಿಂದ ಹಾಲು-ತುಪ್ಪ ಕಾರ್ಯದ ನಂತರ ಸಂಜೆ 6 ಗಂಟೆಯ ಬಳಿಕ ಅಭಿಮಾನಿಗಳು ಪುನೀತ್​ ರಾಜ್​ಕುಮಾರ್​ ಸಮಾಧಿಗೆ ನಮನ ಸಲ್ಲಿಸಿದರು.

ದೂರದೂರಿನಿಂದ ಬಂದ ಅಭಿಮಾನಿಗಳು : ದೂರದೂರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ನಿನ್ನೆಯೇ (ಮಂಗಳವಾರ) ಅಪ್ಪು ಸಮಾಧಿಯ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಸ್ಥಳೀಯ ಪೊಲೀಸ್ ಹಾಗೂ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಬಿಗಿ ಭದ್ರತೆಯಲ್ಲಿ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕಂಠೀರವ ಸ್ಟುಡಿಯೋ ಸುತ್ತ-ಮುತ್ತ ಸ್ಥಳೀಯ ಪೊಲೀಸ್ ಹಾಗು ಆರ್​​ಪಿಎಫ್ ಬಿಗಿ ಭದ್ರತೆ
ಕಂಠೀರವ ಸ್ಟುಡಿಯೋ ಸುತ್ತಮುತ್ತ ಸ್ಥಳೀಯ ಪೊಲೀಸ್ ಹಾಗೂ ಆರ್​​ಪಿಎಫ್ ಬಿಗಿ ಭದ್ರತೆ

ಬೆಳಗ್ಗೆ 8 ರಿಂದ ಸಂಜೆ 8ರವರೆಗೆ ಅವಕಾಶ : ಇಂದು ( ಬುಧವಾರ) ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಅಭಿಮಾನಿಗಳಿಗೆ ಪುನೀತ್ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೀಪಾವಳಿ ಹಬ್ಬ ಪ್ರಾರಂಭವಾಗಿದ್ದರಿಂದ ದರ್ಶನ ಮಾಡುವ ಸಾರ್ವಜನಿಕರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ.

ಇದನ್ನೂ ಓದಿ: 'ಈ ನೋವಿನ ಜತೆ ಬದುಕುವ ಶಕ್ತಿ ಕೊಡು ಅಂತಾ ಮಾತ್ರ ಪರಮಾತ್ಮನಲ್ಲಿ ಕೇಳಿಕೊಳ್ಳಬಲ್ಲೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.