ETV Bharat / city

ಬೆಳಗಾವಿ ಅಧಿವೇಶನಕ್ಕೆ ಹೆಚ್‌ಡಿಕೆ ಗೈರು ; ದಳಪತಿಗೆ ಬೆಳಗಾವಿ ಅಧಿವೇಶನ ಬಗ್ಗೆ ನಿರಾಸಕ್ತಿನಾ?

author img

By

Published : Dec 19, 2021, 4:11 PM IST

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕಿವಿಯಾಗಲು ಬೆಳಗಾವಿ ಅಧಿವೇಶನವನ್ನು ನಡೆಸಲಾಗುತ್ತದೆ. ಆ ಭಾಗದ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪರಿಹಾರ ಕೊಡುವುದು ಬೆಳಗಾವಿ ಅಧಿವೇಶನದ ಮುಖ್ಯ ಆದ್ಯತೆಯಾಗಿದೆ. ಆದರೆ ಅಧಿವೇಶನ ಆರಂಭವಾಗಿ ವಾರದ ಕಳೆದರೂ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಈ ಕಡೆ ಮುಖ ಮಾಡಿಲ್ಲ..

Ex-CM HD Kumaraswamy not attending to Belagavi winter session
ಬೆಳಗಾವಿ ಅಧಿವೇಶನಕ್ಕೆ ಹೆಚ್‌ಡಿಕೆ ಗೈರು; ದಳಪತಿಗೆ ಬೆಳಗಾವಿ ಅಧಿವೇಶನ ಬಗ್ಗೆ ನಿರಾಸಕ್ತಿನಾ?

ಬೆಳಗಾವಿ : ಉತ್ತರಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ಸಂದೇಶ ಸಾರುವ ಉದ್ದೇಶದಿಂದ ನಿರ್ಮಾಣಗೊಂಡ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರಕರ್ನಾಟಕ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ ನಡೆದಿಲ್ಲ.

ಮಹತ್ತರ ಧೇಯ್ಯೋದ್ದೇಶದಿಂದ ಮುನ್ನುಡಿಯೊಂದಿಗೆ ನಿರ್ಮಿಸಿದ ಸುವರ್ಣಸೌಧದಲ್ಲಿನ ಅಧಿವೇಶನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಗೈರಾಗಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಉತ್ತರಕರ್ನಾಟಕದ ಸಮಸ್ಯೆಗಳಿಗೆ ಕಿವಿಯಾಗಲು ಬೆಳಗಾವಿ ಅಧಿವೇಶನವನ್ನು ನಡೆಸಲಾಗುತ್ತದೆ. ಆ ಭಾಗದ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪರಿಹಾರ ಕೊಡುವುದು ಬೆಳಗಾವಿ ಅಧಿವೇಶನದ ಮುಖ್ಯ ಆದ್ಯತೆಯಾಗಿದೆ. ಅಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸಿ ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತಿದೆ.

ಈ ಅಧಿವೇಶನದಲ್ಲಿ ಬಹುವಾಗಿ ಉತ್ತರಕರ್ನಾಟಕ ಭಾಗದ ಸಮಸ್ಯೆಗಳು, ಅಭಿವೃದ್ಧಿಯೇ ಚರ್ಚೆಯಾಗುತ್ತದೆ. ಉತ್ತರಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬೆಳಗಾವಿ ಸುವರ್ಣಸೌಧಕ್ಕೆ ಮುನ್ನಡಿ ಬರೆದಿದ್ದರು. ಆದರೆ, ಅದ್ಯಾಕೋ ದಳಪತಿ ಬೆಳಗಾವಿ ಅಧಿವೇಶನಕ್ಕೆ ಗೈರಾಗುವ ಮೂಲಕ ನಿರಾಸಕ್ತಿ ತೋರಿತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ಬೆಳಗಾವಿ ಅಧಿವೇಶನಕ್ಕೆ ಹೆಚ್‌ಡಿಕೆ ನಿರಾಸಕ್ತಿ!
ಬೆಳಗಾವಿ ಅಧಿವೇಶನದ ಮೊದಲ ವಾರದ ಕಲಾಪಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಗೈರಾಗಿದ್ದಾರೆ. ಜೆಡಿಎಸ್ ಪಕ್ಷದ ಪ್ರಮುಖ ನಾಯಕರೇ ಬೆಳಗಾವಿ ಅಧಿವೇಶನಕ್ಕೆ ಗೈರಾಗಿರುವುದು ತಪ್ಪು ಸಂದೇಶದ ಜೊತೆಗೆ ಉತ್ತರ ಕರ್ನಾಟಕ ಭಾಗದ ಜನರಿಗೂ ಎಲ್ಲೋ ಒಂದು ಕಡೆ ಬೇಸರಕ್ಕೂ ಕಾರಣವಾಗಿದೆ.

ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲು ಕಾರಣಕರ್ತರಾದ ಮಾಜಿ ಸಿಎಂ ಕುಮಾರಸ್ವಾಮಿ ಇದೀಗ ಬೆಳಗಾವಿ ಅಧಿವೇಶನದತ್ತ ಮುಖ ಮಾಡದೇ ಇರುವುದು ಹಲವು ಪ್ರಶ್ನೆ ಮೂಡಿಸಿದೆ. ಬೆಂಗಳೂರಿನಲ್ಲಿ ನಡೆಯುವ ಅಧಿವೇಶನಕ್ಕೇ ವಿರಳವಾಗಿ ಬರುವ ಕುಮಾರಸ್ವಾಮಿ ಬೆಳಗಾವಿ ಅಧಿವೇಶನಕ್ಕೂ ಹಾಜರಾಗುತ್ತಿಲ್ಲ.

2018ರಲ್ಲಿ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ದರು. ಬಳಿಕ ಬೆಳಗಾವಿ ಅಧಿವೇಶನ ನಡೆದಿರಲಿಲ್ಲ. ಅತಿವೃಷ್ಟಿ ಹಾಗೂ ಕೋವಿಡ್ ಹಿನ್ನೆಲೆ ಎರಡು ವರ್ಷ ಬೆಳಗಾವಿ ಅಧಿವೇಶನ ನಡೆದಿರಲಿಲ್ಲ. ಎರಡು ವರ್ಷದ ಬಳಿಕ ಇದೀಗ ಬೆಳಗಾವಿ ಅಧಿವೇಶನ ನಡೆಯುತ್ತಿದೆ. ಹಾಗಿದ್ದರೂ ಮಾಜಿ ಸಿಎಂ, ಜೆಡಿಎಸ್ ದುರೀಣ ಕುಮಾರಸ್ವಾಮಿ ಅಧಿವೇಶನಕ್ಕೆ ಗೈರಾಗುತ್ತಿರುವುದು ಹಲವರ ಬೇಸರಕ್ಕೆ ಕಾರಣವಾಗಿದೆ. ಎಲ್ಲೋ ಒಂದು ಕಡೆ ಕುಮಾರಸ್ವಾಮಿ ಬೆಳಗಾವಿ ಅಧಿವೇಶನ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿಸಿದೆ.

ಮುಂದಿನ ವಾರ ಬೆಳಗಾವಿ ಅಧಿವೇಶನಕ್ಕೆ ಕುಮಾರಸ್ವಾಮಿ ಹಾಜರಾಗುವುದಾಗಿ ತಿಳಿಸಿದ್ದಾರೆ. ಈ ಮುಂಚೆಯೇ ಕುಮಾರಸ್ವಾಮಿ ಮೇಲೆ ಉತ್ತರ ಕರ್ನಾಟಕ ವಿರೋಧಿ ಎಂಬ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಮಾಜಿ ಸಿಎಂ ಆಗಿರುವ ಕುಮಾರಸ್ವಾಮಿ ಅಧಿವೇಶನಕ್ಕೆ ಗೈರಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಕುಮಾರಸ್ವಾಮಿ ಬೆಳಗಾವಿ ಅಧಿವೇಶನಕ್ಕೆ ಗೈರಾಗುತ್ತಿರುವುದು ಅವರಿಗೆ ಉತ್ತರ ಕರ್ನಾಟಕ ಭಾಗದ ಮೇಲೆ ಒಲವು ಇಲ್ಲವೇ ಎಂಬ ಅನುಮಾನವನ್ನೂ ಮೂಡಿಸುತ್ತಿದೆ.

ಇದನ್ನೂ ಓದಿ: ಎರಡು ಬಾರಿ ಸ್ಪೀಕರ್ ಆಗಿದ್ದವರ ಅಸಭ್ಯ ಹೇಳಿಕೆ ವಿಕೃತಿಯ ಪರಮಾವಧಿ : ಹೆಚ್​ಡಿಕೆ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.