ಕೋವಿಡ್ ಟೆಸ್ಟ್ ರಿಸಲ್ಟ್ ನೋಡಲು ಇಲ್ಲಿದೆ ನೋಡಿ ಸುಲಭ ಮಾರ್ಗ

author img

By

Published : Jan 14, 2022, 2:02 PM IST

covid

ಮೊದಲ ಹಾಗೂ 2ನೇ ಅಲೆ ಸೇರಿದಂತೆ ನೀವೂ ಈತನಕ ಎಷ್ಟು ಸಲ ಕೋವಿಡ್ ಟೆಸ್ಟ್ ಮಾಡಿಸಿದ್ದಿರೋ ಅದೆಲ್ಲದರ ರಿಸಲ್ಟ್ ಕೂಡ ನೋಡಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ.. https:/report.icmr.org.in/index.php ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಸಾಕು ಪೇಜ್ ಓಪನ್ ಆಗುತ್ತೆ. ಕೋವಿಡ್ ಟೆಸ್ಟ್ ವೇಳೆ ನೀವು ನೀಡಿರುವ ಮೊಬೈಲ್ ನಂಬರ್‌ನ ಟೈಪ್ ಮಾಡಿದರೆ ಆ ಸಂಖ್ಯೆಗೆ ಒಟಿಪಿ ನಂಬರ್ ಬರಲಿದೆ..

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕು ಕಡಿಮೆಯಾಯ್ತು ಎನ್ನುವಾಗಲೇ ಒಮಿಕ್ರಾನ್ ರೂಪದಲ್ಲಿ 3ನೇ ಅಲೆ ಆರ್ಭಟ ಜೋರಾಗಿದೆ. ಸೋಂಕು ಹರಡುವಿಕೆ ನಿಯಂತ್ರಿಸಲು ನಿತ್ಯ 2 ಲಕ್ಷದಷ್ಟು ಕೋವಿಡ್ ಟೆಸ್ಟ್ ನಡೆಸಲಾಗ್ತಿದೆ.

ಅಷ್ಟೇ ಅಲ್ಲ, ಇನ್ಮುಂದೆ ಕೋವಿಡ್ ಟೆಸ್ಟ್ ಮಾಡಿಸಿ ರಿಸಲ್ಟ್ ಮೆಸೇಜ್​ಗಾಗಿ ಕಾಯುವ ಅವಶ್ಯಕತೆ ಇಲ್ಲ. ಐಸಿಎಂಆರ್ ಪೋರ್ಟಲ್​ಗೆ ಹೋದ್ರೆ ಸುಲಭವಾಗಿ ನಿಮ್ಮ ಕೋವಿಡ್ ಟೆಸ್ಟ್ ರಿಪೋರ್ಟ್ ಪಡೆಯಬಹುದು.‌

ಈ ಹಿಂದೆ ಕೋವಿಡ್ ಟೆಸ್ಟ್ ಮಾಡಿಸಿದಾಗ ಕೆಲವರಿಗೆ ಮೊಬೈಲ್ ಸಂಖ್ಯೆಗೆ ಸಂದೇಶ ಬಂದರೆ ಇನ್ನು ಕೆಲವರಿಗೆ ತಾಂತ್ರಿಕ ಕಾರಣದಿಂದ ಸಂದೇಶ ರವಾನೆ ಆಗಿರುತ್ತಿರಲಿಲ್ಲ. ಆದರೆ, ಇನ್ಮುಂದೆ ಹಾಗಾಗುವುದಿಲ್ಲ. ಕೋವಿಡ್ ಟೆಸ್ಟ್ ಮಾಡಿಸಿದ್ರೆ ನೀವು ಐಸಿಎಂಆರ್ ಪೋರ್ಟಲ್​ಗೆ ಹೋಗಿ ಟೆಸ್ಟ್ ರಿಪೋರ್ಟ್ ಪಡೆಯಬಹುದು.‌

ಮೊದಲ ಹಾಗೂ 2ನೇ ಅಲೆ ಸೇರಿದಂತೆ ನೀವೂ ಈತನಕ ಎಷ್ಟು ಸಲ ಕೋವಿಡ್ ಟೆಸ್ಟ್ ಮಾಡಿಸಿದ್ದಿರೋ ಅದೆಲ್ಲದರ ರಿಸಲ್ಟ್ ಕೂಡ ನೋಡಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ.. https:/report.icmr.org.in/index.php ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಸಾಕು ಪೇಜ್ ಓಪನ್ ಆಗುತ್ತೆ. ಕೋವಿಡ್ ಟೆಸ್ಟ್ ವೇಳೆ ನೀವು ನೀಡಿರುವ ಮೊಬೈಲ್ ನಂಬರ್‌ನ ಟೈಪ್ ಮಾಡಿದರೆ ಆ ಸಂಖ್ಯೆಗೆ ಒಟಿಪಿ ನಂಬರ್ ಬರಲಿದೆ.

ಆ ನಂಬರ್ ನಮೂದಿಸಿದ್ರೆ ನಿಮಗೆ ಪಿಡಿಎಫ್ ಮಾದರಿಯಲ್ಲಿ ಕೋವಿಡ್ ರಿಪೋರ್ಟ್ ಸಿಗಲಿದೆ. ಹಾಗೆಯೇ, ಅದನ್ನ ಡೌನ್​ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ‌. ರಾಜ್ಯದ ಎಲ್ಲ ಲ್ಯಾಬ್‌ಗಳಿಗೂ 24 ಗಂಟೆಯೊಳಗೆ ಕೋವಿಡ್ ರಿಪೋರ್ಟ್ ನೀಡಲು ಸೂಚಿಸಿರುವುದರಿಂದ ನಿಮ್ಮ ಪಾಸಿಟಿವ್/ನೆಗಟಿವ್ ವರದಿಯನ್ನ ಐಸಿಎಂಆರ್ ಪೋರ್ಟಲ್​ನಲ್ಲಿ ಅಪ್ಲೋ​ಡ್ ಮಾಡಲಾಗಿರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.