ಕಸಾಪಕ್ಕೆ ನಾಡೋಜ ಡಾ.ಮಹೇಶ ಜೋಷಿ ಅಧ್ಯಕ್ಷ: ಅಧಿಕೃತ ಘೋಷಣೆಯೊಂದೇ ಬಾಕಿ

author img

By

Published : Nov 22, 2021, 9:57 AM IST

Dr Mahesh Joshi

ಕನ್ನಡ ಸಾಹಿತ್ಯ ಪರಿಷತ್ತಿನ 26ನೇ ಅಧ್ಯಕ್ಷರಾಗಿ ನಾಡೋಜ ಡಾ. ಮಹೇಶ ಜೋಷಿ ಆಯ್ಕೆಯಾಗಿದ್ದಾರೆ.

ಬೆಂಗಳೂರು: ಶತಮಾನ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ 26 ನೇ ಅಧ್ಯಕ್ಷರಾಗಿ ನಾಡೋಜ ಡಾ.ಮಹೇಶ ಜೋಷಿ ಆಯ್ಕೆ ಬಹುತೇಕ ಖಚಿತವಾಗಿದೆ.

ರಾಜ್ಯದ ಒಟ್ಟು 420 ಮತಕೇಂದ್ರಗಳಲ್ಲಿ ಭಾನುವಾರ ನಡೆದ ಮತದಾನದಲ್ಲಿ 1.59 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ತಡ ರಾತ್ರಿ ವೇಳೆಗೆ 5 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಫಲಿತಾಂಶ ಪ್ರಕಟವಾಗಿದೆ. ಇನ್ನೂ ಮತ ಎಣಿಕೆ ನಡೆಯುತ್ತಿದ್ದು, ಕೆಲ ಜಿಲ್ಲೆಗಳ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರ ಅಧಿಕೃತ ಘೋಷಣೆ ಬಾಕಿ ಇದೆ.

ಅಧಿಕೃತ ಘೋಷಣೆ ಬಾಕಿ:

ಮೂಲಗಳ ಪ್ರಕಾರ, ಡಾ.ಮಹೇಶ ಜೋಷಿ ಅವರಿಗೆ ಸುಮಾರು 60 ಸಾವಿರ ಮತಗಳು ಲಭಿಸಿದ್ದು, ಎರಡನೇ ಸ್ಥಾನದಲ್ಲಿರುವ ಡಾ. ಶೇಖರಗೌಡ ಮಾಲಿಪಾಟೀಲ ಅವರಿಗೆ ಸುಮಾರು 20 ಸಾವಿರ ಮತಗಳು ಲಭಿಸಿದೆ.

ಅಂಚೆ ಮೂಲಕ ರವಾನೆಯಾಗುವ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ಹೊರ ರಾಜ್ಯದ ಒಟ್ಟು ಮತಗಳ ಸಂಖ್ಯೆ 4,479 ಇದ್ದು, ವಿಳಾಸದಲ್ಲಿ ಮತದಾರ ಇಲ್ಲದ ಕಾರಣಕ್ಕೆ ಈಗಾಗಲೇ 1,343 ಮತಗಳು ವಾಪಸ್​ ಆಗಿವೆ. ಈ ಮತಗಳ ಎಣಿಕೆ ಬುಧವಾರ ಮಧ್ಯಾಹ್ನ ನಡೆಯಲಿದೆ‌.

ಆದರೆ ಸದ್ಯ ಪ್ರಥಮ ಹಾಗೂ ದ್ವಿತೀಯ ಅಭ್ಯರ್ಥಿಗಳ ನಡುವಿನ ಅಂತರ ಅಗಾಧವಾಗಿರುವ ಕಾರಣ ಈ ಮತಗಳ ಎಣಿಕೆ ಔಪಚಾರಿಕತೆಗಷ್ಟೆ ಮೀಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Dr Mahesh Joshi
ಡಾ. ಮಹೇಶ ಜೋಷಿ

ಫಲಿತಾಂಶ ಹೊರಬೀಳದ ಜಿಲ್ಲೆಗಳು: ಕೋಲಾರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಫಲಿತಾಂಶ ಇನ್ನೂ ಅಧಿಕೃತವಾಗಿ ಲಭ್ಯವಾಗಿಲ್ಲ.

ನವೆಂಬರ್ 24 ರ ಬೆಳಗ್ಗೆ ಅಧಿಕೃತ ಫಲಿತಾಂಶ: ಬರುವ ನವೆಂಬರ್ 24 ರ ಬೆಳಗ್ಗೆ 11 ಗಂಟೆಗೆ ಚುನಾವಣಾಧಿಕಾರಿ ಎಂ ಗಂಗಾಧರ ಸ್ವಾಮಿ ಅಧಿಕೃತವಾಗಿ ಫಲಿತಾಂಶ ಘೋಷಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ

ಇದನ್ನೂ ಓದಿ: 'ಎಂಎಸ್​ಪಿ' ಕಾನೂನು ಜಾರಿಗೆ ಒತ್ತಾಯಿಸಿ ಲಖನೌದಲ್ಲಿ ಇಂದು 'ಮಹಾ ಪಂಚಾಯತ್​​​​': 6 ಬೇಡಿಕೆ ಮುಂದಿಟ್ಟ ರೈತರು

ಜೋಷಿಗೆ ಬೆಂಬಲ: ಜೋಷಿ ಅವರಿಗೆ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಬೆಂಬಲ ಸೂಚಿಸಿದ್ದರು. ಚುನಾವಣೆಗೆ ಮುನ್ನ ಮಂತ್ರಾಲಯ ಶ್ರೀಗಳು ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬೆಂಬಲ ವ್ಯಕ್ತಪಡಿಸಿದ್ದರು.

ಚಂದನ ವಾಹಿನಿಯ ನೇತೃತ್ವ ವಹಿಸಿದ್ದ ಜೋಷಿ: ಮಹೇಶ್ ಜೋಷಿ ದೂರದರ್ಶನದ ಚಂದನ ವಾಹಿನಿಯ ಅಧಿಕಾರಿಯಾಗಿ 'ಮಧುರ ಮಧುರವೀ ಮಂಜುಳ ಗಾನ' ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ್ದರು.

ಇದನ್ನೂ ಓದಿ: Bengaluru Rain: ಯಲಹಂಕದಲ್ಲಿ ವರುಣಾರ್ಭಟಕ್ಕೆ ಹಲವೆಡೆ ಅವಾಂತರ

ಗೆದ್ದು ಬೀಗಿದ ಪ್ರಕಾಶ್ ಮೂರ್ತಿ:

ಕಳೆದ ಹಾಗೂ ಅದಕ್ಕೂ ಹಿಂದಿನ ಬಾರಿ ಪರಾಜಿತಗೊಂಡ ಅಭ್ಯರ್ಥಿ ಎಂ.ಪ್ರಕಾಶ ಮೂರ್ತಿ ಈ ಬಾರಿ ಗೆದ್ದು ಬೀಗಿದ್ದಾರೆ. ಎಂ. ತಿಮ್ಮಯ್ಯ ಹಾಗೂ ಎಂ. ಪ್ರಕಾಶ ಮೂರ್ತಿ ನಡುವಿನ ನೇರ ಹಣಾಹಣಿಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ಚಲಾವಣೆಯಾದ 10,538 ಮತಗಳಲ್ಲಿ ಬಹುತೇಕ ಮತಗಳನ್ನು ಪ್ರಕಾಶ ಮೂರ್ತಿ ಪಡೆದು ಗೆಲವು ಸಾಧಿಸಿದ್ದಾರೆ. ಈ ಹಿಂದೆ ಎರಡು ಬಾರಿ ಸ್ಪರ್ಧಿಸಿದ್ದ ಎಂ. ತಿಮ್ಮಯ್ಯ, ಮೂರನೇ ಬಾರಿ ಸೋಲುವಂತಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.