ETV Bharat / city

ಪತಿಯಿಂದ ವರದಕ್ಷಿಣೆ ಕಿರುಕುಳ ಆರೋಪ.. 2ನೇ ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನ..

author img

By

Published : Jan 25, 2022, 12:08 PM IST

Updated : Jan 25, 2022, 12:37 PM IST

ಪ್ರೀತಿಸಿ ಮದುವೆಯಾದರೂ ಸುಹೇಲ್​ ಪಾಷಾ ಇದೀಗ ವರದಕ್ಷಿಣೆಗಾಗಿ ಹೆಂಡತಿಯನ್ನು ಪೀಡಿಸಲು ಶುರು ಮಾಡಿದ್ದಾನೆ. ಇದನ್ನು ಹೆಂಡತಿ ಉಸ್ನಾ ಅವರು ತಂದೆಯ ಮನೆಯವರಿಗೆ ತಿಳಿಸಿದ್ದಾರೆ. ಈ ಬಗ್ಗೆ ಮಾತುಕತೆ ನಡೆಸಿದರೂ ಸುಮ್ಮನಾಗದ ಸುಹೇಲ್​ ಹೆಂಡತಿಯನ್ನು ತವರು ಮನೆಗೆ ಅಟ್ಟಿದ್ದ..

suicide
ಆತ್ಮಹತ್ಯೆ ಯತ್ನ

ಬೆಂಗಳೂರು : ವರದಕ್ಷಿಣೆಗಾಗಿ ತನ್ನ ಪತಿ ದಿನವೂ ನೀಡುತ್ತಿದ್ದ ಕಿರುಕುಳದಿಂದ ನೊಂದ ಮಹಿಳೆಯೊಬ್ಬಳು ಮನೆಯ 2ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಉಸ್ನಾ ಬೇಗಂ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ. ಪತಿ ಸುಹೇಲ್​ಪಾಷಾ ಸೇರಿದಂತೆ ನಾಲ್ವರ ವಿರುದ್ಧ ಉಸ್ನಾ ಬೇಗಂ ಅವರು ಹಲ್ಲೆ, ವರದಕ್ಷಿಣೆ ಕಿರುಕುಳ ಆರೋಪದಡಿ ಬಾಣಸವಾಡಿ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಉಸ್ನಾ ಬೇಗಂ ಮಾತು

ಘಟನೆ ಏನು? : ಬಾಣಸವಾಡಿಯ ಲಿಂಗರಾಜಪುರ‌ದ ನಿವಾಸಿಯಾಗಿರುವ ಉಸ್ನಾಂ ಬೇಗಂ ಸುಹೇಲ್ ಪಾಷಾ ಎಂಬುವನನ್ನು 3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಾರೆ. ಇವರ ಪ್ರೀತಿಗೆ ಉಸ್ನಾ ಬೇಗಂ ಅವರ ಮನೆಯವರಿಂದ ವಿರೋಧ ಇತ್ತು. ಬಳಿಕ ಸುಹೇಲ್​ ಪಾಷಾ, ಉಸ್ನಾ ಬೇಗಂ ಅವರ ಮನೆಯವರನ್ನು ಬೆದರಿಸಿ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದಾನೆ.

ಪ್ರೀತಿಸಿ ಮದುವೆಯಾದರೂ ಸುಹೇಲ್​ ಪಾಷಾ ಇದೀಗ ವರದಕ್ಷಿಣೆಗಾಗಿ ಹೆಂಡತಿಯನ್ನು ಪೀಡಿಸಲು ಶುರು ಮಾಡಿದ್ದಾನೆ. ಇದನ್ನು ಹೆಂಡತಿ ಉಸ್ನಾ ಅವರು ತಂದೆಯ ಮನೆಯವರಿಗೆ ತಿಳಿಸಿದ್ದಾರೆ. ಈ ಬಗ್ಗೆ ಮಾತುಕತೆ ನಡೆಸಿದರೂ ಸುಮ್ಮನಾಗದ ಸುಹೇಲ್​ ಹೆಂಡತಿಯನ್ನು ತವರು ಮನೆಗೆ ಅಟ್ಟಿದ್ದ.

ಜ.20ರಂದು ರಾತ್ರಿ ವೇಳೆ ಹೆಂಡತಿಯ ಮನೆಗೆ ಬಂದು ಗಲಾಟೆ ನಡೆಸಿದ್ದಾನೆ. ಇದರಿಂದ ತೀವ್ರ ನೊಂದ ಉಸ್ನಾ ಅವರು ಮನೆಯ 2ನೇ ಮಹಡಿಯಿಂದ ಹಾರಿದ್ದಾರೆೆ. ಅದೃಷ್ಟವಶಾತ್ ಬದುಕುಳಿದಿದ್ದು, ಕಾಲು ಮುರಿದಿದೆ.

ಇದನ್ನೂ ಓದಿ: ಸುಳ್ಯ : ಮಗನ ಎದೆಗೆ ಚೂರಿ ಇರಿದ ತಂದೆ!

Last Updated :Jan 25, 2022, 12:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.