ETV Bharat / city

ಪಿಎಸ್‌ಐ ಅಕ್ರಮದ ಕೇಂದ್ರ ಕಲಬುರಗಿ ಅಲ್ಲ, ಬೆಂಗಳೂರು?: 22 ಅಭ್ಯರ್ಥಿಗಳ ಮೇಲೆ ಎಫ್ಐಆರ್!

author img

By

Published : May 2, 2022, 10:09 AM IST

Updated : May 2, 2022, 12:25 PM IST

ಬೆಂಗಳೂರಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ 172 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇವರಲ್ಲಿ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ.

ಪಿಎಸ್​ಐ ನೇಮಕಾತಿ ಪ್ರಕರಣ
ಪಿಎಸ್​ಐ ನೇಮಕಾತಿ ಪ್ರಕರಣ

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ಕಬಂಧಬಾಹು ಪೊಲೀಸ್ ಇಲಾಖೆಯನ್ನು ಬಿಟ್ಟೂ ಬಿಡದೇ ಕಾಡಲಾರಂಭಿಸಿದೆ. ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸಿ ಆಯ್ಕೆಯಾಗಿದ್ದ 172 ಅಭ್ಯರ್ಥಿಗಳಲ್ಲಿ 22 ಅಭ್ಯರ್ಥಿಗಳ ಒಎಂಆರ್ ಪ್ರತಿ ಅನುಮಾನಾಸ್ಪದವಾಗಿದ್ದು, ಅಕ್ರಮದ ಕೇಂದ್ರ ಕಲಬುರಗಿ ಅಲ್ಲ ಬೆಂಗಳೂರು ಎಂಬ ಗುಮಾನಿ ಆರಂಭವಾಗಿದೆ.

ಬೆಂಗಳೂರಿನ ಒಟ್ಟು ಏಳು ಕೇಂದ್ರಗಳಲ್ಲಿ ನಡೆದಿದ್ದ ಪಿಎಸ್ಐ ನೇಮಕಾತಿ ಪರೀಕ್ಷೆಯ ಪೈಕಿ ಕೇಂಬ್ರಿಡ್ಜ್ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲೇ ಹೆಚ್ಚು ಅಕ್ರಮ ಪತ್ತೆಯಾಗಿದ್ದು, 22 ಅಭ್ಯರ್ಥಿಗಳ ವಿರುದ್ಧ ಸಿಐಡಿ ಡಿವೈಎಸ್ಪಿ ನರಸಿಂಹಮೂರ್ತಿ ನೀಡಿರುವ ದೂರಿನನ್ವಯ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ದೂರಿಗೆ ಸಂಬಂಧಿಸಿದಂತೆ 12 ಜನರ ಬಂಧನವಾಗಿದ್ದು, ಉಳಿದ 10 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸೂಚಿಸಿದೆ.

Constable mahanthesh Gowda
ಕಾನ್​ಸ್ಟೆಬಲ್ ಮಮತೇಶ್ ಗೌಡ

ವಿಪರ್ಯಾಸವೆಂದರೆ, ಬಂಧಿತ ಹನ್ನೆರಡು ಜನರಲ್ಲಿ ಮೂವರು ಪೊಲೀಸ್ ಇಲಾಖೆಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದವರಿದ್ದಾರೆ. ಈ ಹಿಂದೆ ಇಲಾಖೆಗೆ ವಂಚಿಸಿ ರಕ್ತಚಂದನ ಅಕ್ರಮ ಸಾಗಣೆ ಆರೋಪದಡಿ ಹೊಸಕೋಟೆ ಪೊಲೀಸರಿಂದ ಬಂಧನವಾಗಿದ್ದ ಕಾನ್​ಸ್ಟೆಬಲ್ ಮಮತೇಶ್ ಗೌಡ ಸೇರಿ ಮೂವರನ್ನು ಬಂಧಿಸಲಾಗಿದೆ. ಮತ್ತೊಂದೆಡೆ, ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಇಂದು ಸಿಐಡಿಗೆ ಅಧಿಕೃತವಾಗಿ ವರ್ಗಾವಣೆಯಾಗಲಿದ್ದು, ಬಂಧಿತರನ್ನು ಸಿಐಡಿ ವಶಕ್ಕೆ ಪಡೆಯಲಿದೆ. ಬಳಿಕ ಬಂಧಿತರ ವಿಚಾರಣೆ ಮಾಡಲಿರುವ ಸಿಐಡಿ ಅಕ್ರಮಕ್ಕೆ ಸಹಕರಿಸಿದವರ ಬಂಧನಕ್ಕೆ ಬಲೆ ಬೀಸಿದೆ.

22 ಜನರ ಮೇಲೆ ಎಫ್ಐಆರ್: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ತನಿಖೆಯಲ್ಲಿ ಅನುಮಾನಾಸ್ಪದ 22 ಅಭ್ಯರ್ಥಿಗಳ ಮೇಲೆ ಎಫ್ಐಆರ್ ದಾಖಲಾಗಿದ್ದು, 12 ಅಭ್ಯರ್ಥಿಗಳ ಬಂಧನವಾಗಿದೆ. ಬೆಂಗಳೂರಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ 172 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅವರಲ್ಲಿ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ.

ಇದನ್ನೂ ಓದಿ: ಪಿಎಸ್ಐ ದೈಹಿಕ ಪರೀಕ್ಷೆಯಲ್ಲೂ ಗೋಲ್​ಮಾಲ್: ಪ್ರಿಯಾಂಕ್ ಖರ್ಗೆ

Last Updated : May 2, 2022, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.