ETV Bharat / city

ರಾಜ್ಯದ ಜನತೆಯ ಭಾವನೆ ಹೇಗಿದೆ ಅನ್ನೋದಕ್ಕೆ ಇಂದಿನ ಫಲಿತಾಂಶವೇ ಸಾಕ್ಷಿ: ಡಿಕೆಶಿ

author img

By

Published : Dec 30, 2021, 3:01 PM IST

Local body election result-2021: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಸಾರಥಿ ಡಿ ಕೆ ಶಿವಕುಮಾರ್​, ಇದು ಕಾಂಗ್ರೆಸ್​​​ನ ಗೆಲುವು, ಜೊತೆಗೆ ಜನರ ಗೆಲುವು. ರಾಜ್ಯದ ಜನತೆಯ ಭಾವನೆ ಹೇಗಿದೆ ಅನ್ನೋದಕ್ಕೆ ಈ ಫಲಿತಾಂಶವೇ ಸಾಕ್ಷಿ ಎಂದಿದ್ದಾರೆ.

dk shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಬೆಂಗಳೂರು: ರಾಜ್ಯದ ಜನತೆಯ ಭಾವನೆ ಹೇಗಿದೆ ಅನ್ನೋದಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಕಾಂಗ್ರೆದ್​ನ ಗೆಲುವು, ಜೊತೆಗೆ ಜನರ ಗೆಲುವು. ಕೇವಲ ಹಳ್ಳಿ ಜನತೆ ಮಾತ್ರವಲ್ಲ, ಪಟ್ಟಣದ ಜನರ ಒಲವು ಕೂಡ ಕಾಂಗ್ರೆಸ್ ಕಡೆ ಇದೆ ಎಂದು ಹೇಳಿದರು.

'ನಾನು ಹೊಸ ಶೂ ತೆಗೆದುಕೊಂಡಿದ್ದೇನೆ'

ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಯ ವಿಷಯದಲ್ಲಿ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಮಕ್ಮಲ್ ಟೋಪಿ ಅಂದಿದ್ದಾರೆ, ಅನ್ನಲಿ. ನಾನು ಡೈಲಿ ಪಾದಯಾತ್ರೆಗೆ ಪ್ರ್ಯಾಕ್ಟೀಸ್ ಮಾಡುತ್ತಿದ್ದೇನೆ, ಹೊಸ ಶೂ ತೆಗೆದುಕೊಂಡಿದ್ದೇನೆ ಎಂದು ಹೆಚ್​ಡಿಕೆ ಹೇಳಿಕೆಗೆ ವ್ಯಂಗ್ಯವಾಡಿದರು.

ಐಟಿ, ಇಡಿ, ಬೇನಾಮಿ ಆಸ್ತಿ ವಿಚಾರದಲ್ಲಿ ಏನೇನು ಆಗ್ತಿದೆ. ದೆಹಲಿ ಮಟ್ಟದಲ್ಲಿ ಏನೇನು ನಡೀತಿದೆ ಅನ್ನೋದರ ಬಗ್ಗೆ ಎಲ್ಲ ಗೊತ್ತಿದೆ. ಯಾರ್ಯಾರು ದೆಹಲಿಗೆ ಹೋಗಿ ಏನು ಮಾಡ್ತಿದ್ದಾರೆ ಎನ್ನುವುದು ಎಲ್ಲ ಗೊತ್ತಿದೆ. ಮಳೆ ಆದರೇನು, ಚಳಿ ಆದರೇನು? ಅವಾಗ ಒಬ್ಬರನ್ನು ಫೇಸ್ ಮಾಡಬೇಕಿತ್ತು. ಈಗ ಇಬ್ಬಿಬ್ಬರನ್ನು ಫೇಸ್ ಮಾಡಬೇಕಿದೆ, ಮಾಡೋಣ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ: ಸಿದ್ದರಾಮಯ್ಯ

ಅಧಿಕಾರ ಇದ್ದಾಗ, ಹೆಚ್ಚಿನ ಶಾಸಕರು ಇದ್ದಾಗ ಸಹಜವಾಗಿ ಅವರಿಗೆ ಹೆಚ್ಚಿನ ಅವಕಾಶ ಇರುತ್ತದೆ. ಆದರೆ ಅದನ್ನು ಮೀರಿ ಜನ ನಮ್ಮ ಕಡೆ ಒಲವು ತೋರಿದ್ದಾರೆ. ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅವರ ವಿಶ್ವಾಸ ಉಳಿಸುವಂತಹ ಆಡಳಿತವನ್ನು ಮುಂದಿನ ದಿನಗಳಲ್ಲಿ ಕೊಡುತ್ತೇವೆ. ಸಿಎಂ, ಸಚಿವರು, ಶಾಸಕರು ಅವರ ಕ್ಷೇತ್ರದಲ್ಲೆಲ್ಲ ಏನೇನಾಗಿದೆ ಎಂಬುದು ಗೊತ್ತಿದೆಯಲ್ಲ ಎಂದು ಡಿಕೆಶಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.