ETV Bharat / city

ಬೆಂಗಳೂರು ಗಲಭೆ: ನವೀನ್ ಮನೆಗೆ ಮೊದಲು ನುಗ್ಗಿ ಅಟ್ಯಾಕ್ ಮಾಡಿದ್ದ ಆರೋಪಿ ಅರೆಸ್ಟ್​

author img

By

Published : Aug 21, 2020, 3:54 PM IST

ಡಿಜೆ ಹಳ್ಳಿ - ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಕ್ಕನ ಮಗ ನವೀನ್ ಮನೆಗೆ ಬೆಂಕಿ ಇಟ್ಟ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

DJ Halli violence updates
ನವೀನ್ ಮನೆಗೆ ಮೊದಲು ನುಗ್ಗಿ ಅಟ್ಯಾಕ್ ಮಾಡಿದ್ದ ಆರೋಪಿ ಅರೆಸ್ಟ್​

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಕ್ಕನ ಮಗ ನವೀನ್ ಮನೆಗೆ ಬೆಂಕಿ ಇಟ್ಟ ಪ್ರಮುಖ ಆರೋಪಿಯನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನವೀನ್ ಮನೆಗೆ ಮೊದಲು ನುಗ್ಗಿ ಅಟ್ಯಾಕ್ ಮಾಡಿದ್ದ ಆರೋಪಿ ಅರೆಸ್ಟ್​

ಡಿಜೆ ಹಳ್ಳಿಯ ಯೂಸುಫ್ ಬಂಧಿತ ಆರೋಪಿ. ಈತನನ್ನು ಬಂಧಿಸಿ ವಿಚಾರಣೆಗೆ ಠಾಣೆಗೆ ಕರೆ ತರುವ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಕೋಪಗೊಂಡಿದ್ದಾನೆ.

ಯೂಸುಫ್, ಫೇಸ್​​ಬುಕ್ ಪೋಸ್ಟ್ ವಿಚಾರಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ ಗುಂಪುಗೂಡಿ ಕಾವಲ್ ಭೈರಸಂದ್ರ ಬಳಿಯಿರುವ ನವೀನ್ ಮನೆಗೆ ಹೋಗಿದ್ದನು. ಮನೆ ಧ್ವಂಸಗೊಳಿಸಿದ ಹಾಗೂ ಜಾತಿ ನಿಂದನೆ ಆರೋಪಿಸಿ ನವೀನ್ ಕುಟುಂಬಸ್ಥರು ದೂರು ನೀಡಿದ್ದರು. ಈ ಸಂಬಂಧ ತಲೆಮರೆಸಿಕೊಂಡಿದ್ದ ಯೂಸುಫ್​​ನನ್ನು ಇಂದು ಬಂಧಿಸಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ನವೀನ್ ಮನೆಗೆ ನುಗ್ಗಿ ಅಟ್ಯಾಕ್ ಮಾಡಿದ್ದ ಆರೋಪಿಗಳ ಪೈಕಿ ಅರೆಸ್ಟ್​ ಆದ ಮೊದಲ ವ್ಯಕ್ತಿ ಯೂಸುಫ್ ಆಗಿದ್ದಾನೆ.

ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಗಲಭೆಗೆ ಸಂಬಂಧಿಸದಂತೆ ತಡರಾತ್ರಿ ಮತ್ತೆ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.