ETV Bharat / city

4 ತಿಂಗಳಿಂದ ಕೇಂದ್ರ 5,600 ಕೋಟಿ ರೂ ರಾಜ್ಯದ ಹಣ ನೀಡಿಲ್ಲ: ದಿನೇಶ್​ ಗುಂಡೂರಾವ್​

author img

By

Published : Dec 7, 2019, 4:47 PM IST

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯಕ್ಕೆ ಜಿಎಸ್​ಟಿ ಪಾಲಿನ ಮೊತ್ತವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಲಿಖಿತ ರೂಪದಲ್ಲಿ ತಿಳಿಸಿದೆ. ಇದನ್ನು ಸರ್ಕಾರ ಪ್ರಶ್ನಿಸಬೇಕು. ಈಗಾಗಲೇ ಪಂಜಾಬ್ ಸರ್ಕಾರ ಜಿಎಸ್​ಟಿ ಪಾಲಿನ ಹಣ ಸಂದಾಯ ಮಾಡುವಂತೆ ಆಗ್ರಹಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ ಆಗ್ರಹಿಸಿದರು

dinesh-gundurao
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿದ್ದ ಜಿಎಸ್​ಟಿ ಸಂಗ್ರಹದ ಪಾಲನ್ನು ನೀಡಿಲ್ಲ. ನಾಲ್ಕು ತಿಂಗಳ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯಕ್ಕೆ ಜಿಎಸ್​ಟಿ ಪಾಲಿನ ಮೊತ್ತವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಲಿಖಿತ ರೂಪದಲ್ಲಿ ತಿಳಿಸಿದೆ. ಇದನ್ನು ಸರ್ಕಾರ ಪ್ರಶ್ನಿಸಬೇಕು. ಈಗಾಗಲೇ ಪಂಜಾಬ್ ಸರ್ಕಾರ ಜಿಎಸ್​ಟಿ ಪಾಲಿನ ಹಣ ಸಂದಾಯ ಮಾಡುವಂತೆ ಆಗ್ರಹಿಸಿದೆ. ರಾಜ್ಯ ಸರ್ಕಾರ ಕೂಡ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಕೇಂದ್ರದ ಮೇಲೆ ಒತ್ತಡ ಹೇರಬೇಕು. ರಾಜ್ಯದಿಂದ ಸಂಗ್ರಹವಾಗಿರುವ ಜಿಎಸ್​ಟಿ ಮತ್ತು ಅಲ್ಲಿಂದ ಬರಬೇಕಾದ ಪಾಲನ್ನು ಪಡೆಯಲು ಹಿಂಜರಿಯಬಾರದು. ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವೇ ಇದೆ ಎಂದು ಸುಮ್ಮನೆ ಕೂರುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.

ದಿನೇಶ್ ಗುಂಡೂರಾವ್​ ಸುದ್ದಿಗೋಷ್ಠಿ

ಜಿಎಸ್​ಟಿಯನ್ನು ನಾವು ಯುಪಿಎ ಸರ್ಕಾರ ಇದ್ದಾಗ ತರಲು ಮುಂದಾಗಿದ್ದೆವು. ಆ ಸಂದರ್ಭದಲ್ಲಿ ಬಿಜೆಪಿ ನಾಯಕರು ಪ್ರತಿರೋಧಿಸಿದ್ದರು. ನಂತರ ಅವರು ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ತಂದರು. ಇವತ್ತು ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ಆರ್ಥಿಕ ಆದಾಯ ಬರ್ತಿಲ್ಲ. ಕಳೆದ ನಾಲ್ಕು ತಿಂಗಳಿಂದ ರಾಜ್ಯದ 5,600 ಕೋಟಿ ಹಣ ಇನ್ನೂ ಕೊಟ್ಟಿಲ್ಲ. ಹೀಗೆ ಮಾಡಿದ್ರೆ ರಾಜ್ಯದ ಅಭಿವೃದ್ಧಿ ಹೇಗೆ ಆಗಬೇಕು ಎಂದು ಪ್ರಶ್ನಿಸಿದರು.

ಹಣ ಕೊಡಲು ಆಗುತ್ತಿಲ್ಲ ಎಂದು ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆಯುತ್ತಿದೆ. ಪಂಜಾಬ್​ ಸರ್ಕಾರ ಈ ಪ್ರಕರಣವನ್ನು ಕೋರ್ಟ್ ಮೂಲಕ ಕೇಳುತ್ತೇವೆ ಎಂದಿದ್ದಾರೆ. ಅದೇ ರೀತಿಯಲ್ಲಿ ನಮ್ಮ ಸಿಎಂ ಕೇಳಬೇಕು. ಆದ್ರೆ ಇದರ ಬಗ್ಗೆ ಯಡಿಯೂರಪ್ಪ ಎಲ್ಲೂ ಮಾತನಾಡಿಲ್ಲ. ಹೀಗಾದ್ರೆ ರಾಜ್ಯದ ಅಭಿವೃದ್ಧಿಗೆ ಹೊಡೆತ ಬೀಳಲಿದೆ. ಕೇಂದ್ರದಿಂದ ಹಣ ಬರಲಿಲ್ಲ ಎಂದರೆ, ಏನು ತಯಾರಿ ಮಾಡಿಕೊಳ್ಳುತ್ತಿದ್ದೀರಿ ಎಂಬ ಅಂಕಿ ಅಂಶವನ್ನು ರಾಜ್ಯದ ಜನರ ಮುಂದೆ ಇಡಬೇಕು ಎಂದು ಆಗ್ರಹಿಸಿದರು.

Intro:video


Body:news sending by wrap


Conclusion:video
ETV Bharat Logo

Copyright © 2024 Ushodaya Enterprises Pvt. Ltd., All Rights Reserved.