ETV Bharat / city

ವಿಧಾನ ಪರಿಷತ್ ಚುನಾವಣೆ: ಕೋವಿಡ್​​ ಗೈಡ್‌ಲೈನ್ಸ್ ಹೊರಡಿಸಿದ ಆರೋಗ್ಯ ಇಲಾಖೆ

author img

By

Published : Nov 19, 2021, 7:56 PM IST

ಕೋವಿಡ್​ ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ ಸಹ ರಾಜ್ಯದಲ್ಲಿ ಕೋವಿಡ್​ ಸಂಪೂರ್ಣವಾಗಿ ನಾಶವಾಗಿಲ್ಲ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನ ಪರಿಷತ್​ ಚುನಾವಣೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೊರೊನಾ ಗೈಡ್​ ಲೈನ್ಸ್‌​ ಬಿಡುಗಡೆ ಮಾಡಿದೆ.

department-of-health-issued-covid-guide-lines-for-mlc-election
ವಿಧಾನ ಪರಿಷತ್ ಚುನಾವಣೆ

ಬೆಂಗಳೂರು: ಇದೇ ಡಿಸೆಂಬರ್ 10ಕ್ಕೆ ರಾಜ್ಯದಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಆರೋಗ್ಯ ಇಲಾಖೆ ಕೋವಿಡ್​​ ಗೈಡ್‌ಲೈನ್ಸ್ ಹೊರಡಿಸಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸಬೇಕು. ನಾಮಪತ್ರ ಸಲ್ಲಿಕೆಗೆ ಕೇವಲ ನಾಲ್ಕು ಜನರಿಗೆ ಮಾತ್ರ ಅವಕಾಶ. ನಾಮಪತ್ರ ಸಲ್ಲಿಕೆಗೆ ಕೇವಲ ಮೂರು ವಾಹನಗಳನ್ನು ಮಾತ್ರ ಬಳಸಬೇಕು. ಚುನಾವಣಾಧಿಕಾರಿಗಳು ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೆ ನಿಗದಿತ ಸಮಯ ನೀಡಬೇಕು. ಚುನಾವಣಾ ಪ್ರಚಾರದ ವೇಳೆ 500 ಮಂದಿ ಮಾತ್ರ ಹಾಜರಿರಲು ಅವಕಾಶ ನೀಡಲಾಗಿದೆ.

ಇನ್ನುಳಿದಂತೆ, ಚುನಾವಣಾ ಸಭೆಗಳಲ್ಲಿ ಭಾಗಿಯಾಗುವವರೆಲ್ಲ ಎರಡು ಡೋಸ್ ವ್ಯಾಕ್ಸಿನ್ ತೆಗೆದುಕೊಂಡಿರಬೇಕು. ದೊಡ್ಡ ಹಾಲ್​ಗಳಲ್ಲಿ ಚುನಾವಣಾ ಸಭೆ ನಡೆಸಬೇಕು. ಸಭೆಗೂ ಮುನ್ನಾದಿನ ಸಭಾಂಗಣವನ್ನ ಸ್ಯಾನಿಟೈಸ್ ಮಾಡಬೇಕು. ಚುನಾವಣಾ ಸಿಬ್ಬಂದಿಯೂ ಸಹ ಎರಡೂ ಡೋಸ್ ವ್ಯಾಕ್ಸಿನ್ ತೆಗೆದುಕೊಂಡಿರಬೇಕು. ಸಿಬ್ಬಂದಿಗೆ ಎಸಿಮ್ಟಮ್ಯಾಟಿಕ್ ಆಗಿರಬೇಕು ಹಾಗೂ ಕೋವಿಡ್ ಸಿಮ್ಟಮ್​ಗಳಿಂದ ಮುಕ್ತರಾಗಿರಬೇಕು. 50 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಶುಗರ್ ಹಾಗೂ ಬಿಪಿ ಸಮಸ್ಯೆ ಇದ್ದಲ್ಲಿ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು ಎಂದು ಸೂಚಿಸಿ ಆದೇಶ ಹೊರಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.