ETV Bharat / city

ಯಾವುದೇ ಪಕ್ಷದ ಜತೆ ಹೊಂದಾಣಿಕೆ ಇಲ್ಲ.. ಮುಂದಿನ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ.. ಹೆಚ್‌ಡಿಕೆ

author img

By

Published : Jan 24, 2021, 9:32 PM IST

ಕಳೆದ ಬಾರಿ ಬಿಎಸ್​ಪಿಯೊಂದಿಗೆ ಹೊಂದಾಣಿಕೆ‌ ಮಾಡಿದ್ದರಿಂದ ಕೆಪಿ ರಾಜುಗೆ ಬಿ ಫಾರ್ಂ ಕೈತಪ್ಪಿತ್ತು. ಮುಂದೆ ಹೀಗಾಗುವುದಿಲ್ಲ. ಮುಂದಿನ ಯಾವ ಚುನಾವಣೆಗೂ ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ..

declaration-of-jds-candidates-in-anekal-bengaluru-south
ಆನೇಕಲ್-ಬೆಂ.ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ...

ಆನೇಕಲ್ : ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ಎರಡು ವಿಧಾನಸಭಾ ಕ್ಷೇತ್ರಗಳ‌ ಜೆಡಿಎಸ್ ಅಭ್ಯರ್ಥಿಗಳನ್ನು ಎರಡು ವರ್ಷಗಳಿಗೂ ಮುಂಚೆಯೇ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್ ಡಿ ಕುಮಾರ ಸ್ವಾಮಿ ಘೋಷಿಸಿದ್ದಾರೆ.

ಓದಿ: ರಾಜ್ಯದಲ್ಲಿಂದು 573 ಮಂದಿಗೆ ಕೋವಿಡ್ ದೃಢ: 4 ಸೋಂಕಿತರು ಬಲಿ

ಇಂದು ಜೆಪಿ ನಗರದ ತಮ್ಮ ಸ್ವಗೃಹದಲ್ಲಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳಾದ ಆನೇಕಲ್-ಕೆಪಿ ರಾಜು, ಬೆಂ.ದಕ್ಷಿಣ-ಪ್ರಭಾಕರರೆಡ್ಡಿ ಸಮೇತ ಕಾರ್ಯಕರ್ತರ ನಡುವೆ ಅಭ್ಯರ್ಥಿಗಳನ್ನು ಘೋಷಿಸಿದರು.

ಕಳೆದ ಬಾರಿ ಬಿಎಸ್​ಪಿಯೊಂದಿಗೆ ಹೊಂದಾಣಿಕೆ‌ ಮಾಡಿದ್ದರಿಂದ ಕೆಪಿ ರಾಜುಗೆ ಬಿ ಫಾರ್ಂ ಕೈತಪ್ಪಿತ್ತು. ಮುಂದೆ ಹೀಗಾಗುವುದಿಲ್ಲ. ಮುಂದಿನ ಯಾವ ಚುನಾವಣೆಗೂ ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಅಭಿವೃದ್ಧಿ ಮರೆತಿದೆ : ವಿಧಾನಸೌದದಲ್ಲಿ ಕುಳಿತವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕ್ರಷರ್​​ಗಳ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಶಿವಮೊಗ್ಗದ ಘಟನೆ ಭೀಕರ ದುರಂತ, ಸರ್ಕಾರ ಕೇವಲ 2 ದಿನ ಚರ್ಚೆ ಮಾಡಿ ಕೈ ಬಿಡುತ್ತಿದೆ. ಅಕ್ರಮ ಕ್ರಷರ್‌ಗಳನ್ನು ಸಕ್ರಮ ಮಾಡಿ ಎಂದು ಸರ್ಕಾರ ಹೇಳುತ್ತಿದೆ.

ಸರ್ಕಾರ ಅಭಿವೃದ್ಧಿಯನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿದೆ. ಅವರು ಅಧಿಕಾರಕ್ಕಾಗಿ ಆಪರೇಷನ್ ಮಾಡುತ್ತಾರೆ. ಜನರೂ ಸಹ ಬದಲಾಗಿದ್ದಾರೆ. ನೀವೂ ಹಣ ಮಾಡಿ ನಮಗೂ ಕೊಡಿ ‌ಎಂದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಮುಂದಿನ ಬಾರಿ ನಾವು ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.