ETV Bharat / city

ಇದೇನಾ ನಿಮ್ಮ ಕಾಂಗ್ರೆಸ್ ಸಂಸ್ಕೃತಿ?: ಸಿ.ಟಿ.ರವಿ ಕಿಡಿ

author img

By

Published : Nov 18, 2021, 10:33 PM IST

ಬಿಟ್ ಕಾಯಿನ್​​ನಲ್ಲಿ (Bitcoin) ಯಾರೇ ಭಾಗಿಯಾಗಿದ್ದರೂ ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ. ಯಾರನ್ನೂ ರ ಕ್ಷಣೆ ಮಾಡುವ ಪ್ರಶ್ನೆ ಉದ್ಭವಿಸಲಿಲ್ಲ, ನಮ್ಮ ಪಕ್ಷದ ನಿಲುವು ಕೂಡ ಅದೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿಳಿಸಿದ್ದಾರೆ.

ಸಿ.ಟಿ.ರವಿ
ಸಿ.ಟಿ.ರವಿ

ಬೆಂಗಳೂರು/ಚಿಕ್ಕಮಗಳೂರು: ತಾಲಿಬಾನಿ ಉಗ್ರರ ಮನಸ್ಥಿತಿಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಘರ್ ಹೇಳಿಕೆ ಕಾಂಗ್ರೆಸ್ ನಾಯಕರ ಮನಸ್ಥಿತಿಯ ಕನ್ನಡಿಯಾಗಿದೆ. 'ಟಿಪ್ಪು ಸುಲ್ತಾನ್ ನೆಲದಿಂದ ಬಂದವರು. ನಿಮಗೆ ತಲೆ ಕತ್ತರಿಸುವುದು ಗೊತ್ತಿದೆ ತಲೆ ತಗ್ಗಿಸುವುದು ಗೊತ್ತಿಲ್ಲ' ಎಂಬ ಹೇಳಿಕೆ ನಿಜಕ್ಕೂ ತಾಲಿಬಾನಿ ಮನಸ್ಥಿತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟೀಕಿಸಿದ್ದಾರೆ.

ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಅವರೇ ನೀವು ಎಂತಹ 'ಅದ್ಭುತ' ನಾಯಕರನ್ನು ಬೆಳೆಸುತ್ತಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮ ಸಮ್ಮುಖದಲ್ಲೇ ತಲೆ ತೆಗೆಯುವ ಪ್ರಚೋದನಕಾರಿ ಹೇಳಿಕೆ ನೀಡಿದ ನಿಮ್ಮ ನಾಯಕನ ಮಾತಿಗೆ ನಿಮ್ಮ ಪ್ರತಿಕ್ರಿಯೆ ಏನು? ಇದೇನಾ ನಿಮ್ಮ ಕಾಂಗ್ರೆಸ್ ಸಂಸ್ಕೃತಿ? ಎಂದು ಟ್ವಿಟ್ ಮೂಲಕ ಪ್ರಶ್ನಿಸಿದ್ದಾರೆ.

ಸಿ.ಟಿ.ರವಿ

ಉಗ್ರವಾದಿ ಮನಸ್ಥಿತಿಯ ವ್ಯಕ್ತಿಯನ್ನು ನಿಮ್ಮ ಪಕ್ಕ ಕೂರಿಸಿಕೊಂಡು ತಲೆ ತೆಗೆಯುವ ಹೇಳಿಕೆ ಕೊಟ್ಟಾಗ ಗಪ್‌ಚುಪ್ ಆಗಿದ್ದೀರಲ್ಲ? ಒಳಗೊಂದು ಹೊರಗೊಂದು ಮುಖವಾಡದ ಬದುಕು ಏಕೆ ? ಮಾತೆತ್ತಿದರೆ "ಸಾಮರಸ್ಯ ನಮ್ಮ ಸಿದ್ಧಾಂತ" ಎಂದು ಬೊಗಳೆ ಬಿಡುವ ನೀವುಗಳು ಇಮ್ರಾನ್ ಪ್ರತಾಪ್ ಘರ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಿರಾ? ಅವರ ತಲೆಕತ್ತರಿಸುವ ತಾಲಿಬಾನಿ ಮಾತುಗಳನ್ನು ಬೆಂಬಲಿಸುವಿರಾ? ಎಂದು ರಾಜ್ಯದ ಜನತೆಗೆ ಸ್ಪಷ್ಟಪಡಿಸಿ, ಅವರ ಹೇಳಿಕೆಗೆ ನೀವು ಪ್ರತಿಕ್ರಿಯಿಸದಿದ್ದರೆ ಅದೇ ನಿಮ್ಮ ಪಕ್ಷ ಸಂಸ್ಕೃತಿಯ ದ್ಯೋತಕ ಎಂದು ಟೀಕಿಸಿದ್ದಾರೆ.

"ಸೊರ"ಗಿದ (ಸೋನಿಯಾ, ರಾಹುಲ್) ಕಾಂಗ್ರೆಸ್ ನಾಯಕರೆ, ವಿವಿಧತೆಯಲ್ಲಿ ಏಕತೆ ಕಾಣುವ ಭಾರತದಲ್ಲಿ ಆಫ್ಘಾನಿಸ್ತಾನದ ತಾಲಿಬಾನಿಗಳ ರೀತಿ ತಲೆ ಕತ್ತರಿಸುವ ಮಾತನಾಡಿರುವ ನಿಮ್ಮ ಪಕ್ಷದ "ಅನಾಗರಿಕ ಅವಿದ್ಯಾವಂತ" (ಜಮೀರ್ ಸಾಹೇಬರ ಮಾತಿನಲ್ಲಿ ಓದಿಕೊಳ್ಳಿ) ನಾಯಕನನ್ನು ಯಾವಾಗ ಉಚ್ಛಾಟಿಸುವಿರಿ? ಅವರ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು? ಕಾಂಗ್ರೆಸ್ ನಾಯಕರೆ, ನೀವು ತಲೆ ಕತ್ತರಿಸುವ ತಾಲಿಬಾನಿಗಳ ಜೊತೆ ಇರುತ್ತೀರೋ ಅಥವಾ ವಸುದೈವ ಕುಟುಂಬಕಂ ಎಂದು ಸಾರಿದ ಭಾರತದಲ್ಲೋ ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಲ್ಲಿ ಸಿಟಿ ರವಿ ಹೇಳಿಕೆ:

(BitCoin) ಬಿಟ್ ಕಾಯಿನ್ ಶಬ್ಧ ಕೇಳಲಾರಂಭಿಸಿದ್ದೇ 29 ಅಕ್ಟೋಬರ್ ನಂತರ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ‌ಸಿ.ಟಿ.ರವಿ ಹೇಳಿದ್ದಾರೆ. ಬಿಟ್ ಕಾಯಿನ್​​ನಲ್ಲಿ ಯಾರೇ ಭಾಗಿಯಾಗಿದ್ದರೂ ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಉದ್ಭವಿಸಲಿಲ್ಲ, ನಮ್ಮ ಪಕ್ಷದ ನಿಲುವು ಕೂಡ ಅದೇ. ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತೆ. ವಿಪಕ್ಷದ‌ ಹೇಳಿಕೆ ಹಾಸ್ಯಾಸ್ಪದ ರೀತಿಯಲ್ಲಿ ಇದೆ. ಯಾರು ಆರೋಪ ಮಾಡುತ್ತಾರೋ ಅವರು ದಾಖಲೆ‌ ಬಿಡುಗಡೆ ಮಾಡಬೇಕು. ಅದು ಬಿಟ್ಟು ಆರೋಪ ಮಾಡುವುದರಲ್ಲಿ ವಿಪಕ್ಷಗಳು ನಿಂತಿವೆ. ಸರ್ಕಾರ, ಪಕ್ಷದ‌ ನಿಲುವು‌ ಸ್ಪಷ್ಟವಾಗಿದೆ, ನಿಷ್ಪಕ್ಷಪಾತವಾದ ತನಿಖೆ ಆಗಬೇಕು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.