ETV Bharat / city

ಯೋಗಿ ಬೆಳಕಿಗೆ ಬಂದಿದ್ದೇ ಪ್ರಯೋಗಶೀಲತೆಯಿಂದ: ಸಂತೋಷ್ ಹೇಳಿಕೆ ಸಮರ್ಥಿಸಿಕೊಂಡ ಸಿ.ಟಿ ರವಿ

author img

By

Published : May 1, 2022, 9:18 PM IST

ಉತ್ತರಾಖಂಡದಲ್ಲಿ ಸೋತವರನ್ನೂ ಸಿಎಂ ಮಾಡಲಾಗಿದೆ. ಪಕ್ಷ ತೀರ್ಮಾನ ಮಾಡಿದರೆ ಯಾರನ್ನ, ಯಾವ ಸ್ಥಾನಕ್ಕೆ ಬೇಕಾದರೂ ಕೂರಿಸಲಿದೆ ಅಂತ ಬಿ ಎಲ್​ ಸಂತೋಷ್ ಬಾಹ್ಯ ಹೇಳಿಕೆ ನೀಡಿದ್ದಾರೆ. ಯಾವುದು ಆ ಕಾಲಕ್ಕೆ ಸೂಕ್ತ ಆಗಲಿದೆಯೋ ಅದನ್ನ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಬಿ.ಎಲ್ ಸಂತೋಷ್ ಹೇಳಿಕೆಯನ್ನು ಸಿ.ಟಿ ರವಿ ಸಮರ್ಥಿಸಿಕೊಂಡಿದ್ದಾರೆ‌.

CT Ravi defends Santosh's statement
ಸಂತೋಷ್ ಹೇಳಿಕೆ ಸಮರ್ಥಿಸಿಕೊಂಡ ಸಿ.ಟಿ ರವಿ

ಬೆಂಗಳೂರು: ಯೋಗಿ ಆದಿತ್ಯನಾಥ್ ಅಂತವರು ಬೆಳಕಿಗೆ ಬಂದಿದ್ದು ಬಿಜೆಪಿಯ ಪ್ರಯೋಗಶೀಲತೆಯಿಂದಲೇ, ಉತ್ತರಾಖಂಡದಲ್ಲಿ ಸೋತವರನ್ನೂ ಮುಖ್ಯಮಂತ್ರಿ ಮಾಡಲಾಗಿದೆ. ಪಕ್ಷ ತೀರ್ಮಾನ ಮಾಡಿದರೆ ಯಾರನ್ನ, ಯಾವ ಸ್ಥಾನಕ್ಕೆ ಬೇಕಾದರೂ ಕೂರಿಸಲಿದೆ ಎಂದು ಕುಟುಂಬ ರಾಜಕಾರಣ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದಾರೆ‌.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಹೇಳಿಕೆ ರಾಷ್ಟ್ರಕ್ಕೆ ಸೇರಲಿದೆ. ನಮ್ಮ ಪಕ್ಷ ಏನು ಮಾಡಲಿದೆ ಮತ್ತು ಪಕ್ಷದ ಪ್ರಯೋಗ ಶೀಲತೆ ಬಗ್ಗೆ ಅವರು ಹೇಳಿದ್ದಾರೆ. ಭಾರತದಲ್ಲೇ ಕರ್ನಾಟಕ ಇದೆ, ಎಲ್ಲವೂ ಅದರಲ್ಲಿ ಸೇರಲಿದೆ. ಸಂತೋಷ್ ಅವರ ಹೇಳಿಕೆಗೆ ಯಾವುದೇ ಅರ್ಥ ಕಲ್ಪಿಸುವುದು ಬೇಡ. ವ್ಯಕ್ತಿಗತವಾಗಿ ತೆಗೆದುಕೊಳ್ಳುವುದು ಬೇಡ. ಯೋಗಿ ಆದಿತ್ಯನಾಥ್ ಅಂತವರು ಬೆಳಕಿಗೆ ಬಂದಿದ್ದು, ಇಂತ ಪ್ರಯೋಗಶೀಲತೆಯಿಂದಲೇ. ಪಕ್ಷದ ಸಿದ್ಧಾಂತ ಕಾರ್ಯಕರ್ತನಾಗಿ ಯಾವ ಎತ್ತರಕ್ಕೆ ಬೇಕಾದರೂ ಹೋಗಬಹುದು, ಕುಟುಂಬದಿಂದ ಅಲ್ಲ ಎಂದರು.

ಪಕ್ಷ ಸೇರ್ಪಡೆಯಾಗಲು ತುಂಬಾ ಜನ ಸಿದ್ಧ: ಇಂದಿನ ಸಭೆಯಲ್ಲಿ ಅಮಿತ್ ಶಾ ಕಾರ್ಯಕ್ರಮ, ನಮ್ಮ ಮುಂದಿನ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮಾಧ್ಯಮಕ್ಕೆ ಹೇಳದಿರುವ ವಿಚಾರವೂ ಬಹಳ‌ ಚರ್ಚೆಯಾಗಿದೆ. ತುಂಬಾ ಜನ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಮುಂದೆ ಚುನಾವಣೆ ಬರಲಿದೆ, ಅದರ ಬಗ್ಗೆ ಚರ್ಚೆಯಾಗಿದೆ. ಹಳೆ ಮೈಸೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಭಾಗದಿಂದಲೂ ಸೇರ್ಪಡೆಯಾಗಲಿದ್ದಾರೆ. ಎಲ್ಲದರ ಬಗ್ಗೆ ಚರ್ಚೆಯಾಗಿದೆ ಎಂದು ಸಿ.ಟಿ. ರವಿ ಮಾಹಿತಿ ನೀಡಿದರು.

ಇದನ್ನೂ ಓದಿ: ಕರ್ನಾಟಕದ ಮರಾಠಿ ಭಾಷಿಕ ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹೋರಾಟಕ್ಕೆ ಬೆಂಬಲ: ಅಜಿತ್ ಪವಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.