ETV Bharat / city

ವಾರ್ಷಿಕೋತ್ಸವದ ಸಂಭ್ರಮದ ಹೊತ್ತಲ್ಲಿ ಬೊಮ್ಮಾಯಿ ಕೆಳಗಿಳಿಸುವ ವೇದಿಕೆ ಸಜ್ಜಾಗುತ್ತಿದೆ: ಕಾಂಗ್ರೆಸ್​​ ಟೀಕೆ

author img

By

Published : Aug 10, 2022, 1:49 PM IST

ರಾಜ್ಯದಲ್ಲಿ 3ನೇ ಸಿಎಂ ಆಯ್ಕೆಗೆ ಬಿಜೆಪಿಯಿಂದ ಕಸರತ್ತು ನಡೆದಿದೆ ಎಂದು ಆರೋಪಿಸಿ ನಿನ್ನೆ ಸರಣಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಇಂದು ಸಹ ಮುಂದುವರಿಸಿದೆ.

Congress
ಕಾಂಗ್ರೆಸ್

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಹಬ್ಬಿರುವ ವದಂತಿ ಹಿನ್ನೆಲೆ ಸರ್ಕಾರವನ್ನು ಲೇವಡಿ ಮಾಡಿ ಕಾಂಗ್ರೆಸ್ ತನ್ನ ಸರಣಿ ಟ್ವೀಟ್ ಮುಂದುವರಿಸಿದೆ. ರಾಜ್ಯದಲ್ಲಿ 3ನೇ ಸಿಎಂ ಆಯ್ಕೆಗೆ ಬಿಜೆಪಿಯಿಂದ ಕಸರತ್ತು ನಡೆದಿದೆ ಎಂದು ಆರೋಪಿಸಿ ನಿನ್ನೆ ಸರಣಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಇಂದು ಸಹ ಮುಂದುವರಿಸಿದೆ.

ಯಡಿಯೂರಪ್ಪ ಅವರನ್ನು ಸರ್ಕಾರದ 2ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಸಂದರ್ಭದಲ್ಲೇ ಕಣ್ಣೀರು ಹಾಕಿಸಿ ಕಳಿಸಲಾಗಿತ್ತು. ಈಗ ಬೊಮ್ಮಾಯಿ ಅವರನ್ನು 1ನೇ ವಾರ್ಷಿಕೋತ್ಸವದ ಹೊತ್ತಲ್ಲಿ ಕೆಳಗಿಳಿಸುವ ವೇದಿಕೆ ಸಜ್ಜಾಗುತ್ತಿದೆ. 1 ವರ್ಷದಲ್ಲಿ 12 ಬಾರಿ ದೆಹಲಿ ಪ್ರವಾಸ ಕೈಗೊಂಡರೂ ಸಿಎಂಗೆ ಸಂಪುಟ ಸಂಕಟ ಬಗೆಹರಿಸಲಾಗದ್ದೇ ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್​ ಲೇವಡಿ ಮಾಡಿದೆ.

  • '@BSYBJP ಅವರನ್ನು ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವದ
    ಸಂಭ್ರಮದ ಸಂದರ್ಭದಲ್ಲೇ ಕಣ್ಣೀರು ಹಾಕಿಸಿ ಕಳಿಸಲಾಗಿತ್ತು.

    ಈಗ @BSBommai ಅವರನ್ನು 1ನೇ ವಾರ್ಷಿಕೋತ್ಸವದ ಹೊತ್ತಲ್ಲಿ ಕೆಳಗಿಳಿಸುವ ವೇದಿಕೆ ಸಜ್ಜಾಗುತ್ತಿದೆ.

    1 ವರ್ಷದಲ್ಲಿ 12 ಬಾರಿ ದೆಹಲಿ ಪ್ರವಾಸ ಕೈಗೊಂಡರೂ #PuppetCM ಗೆ ಸಂಪುಟ ಸಂಕಟ ಬಗೆಹರಿಸಲಾಗದ್ದೇ ಇದಕ್ಕೆ ಸಾಕ್ಷಿ!

    — Karnataka Congress (@INCKarnataka) August 10, 2022 " class="align-text-top noRightClick twitterSection" data=" ">

ಬಿಜೆಪಿ ಹೈಕಮಾಂಡ್​ಗೆ ಕರ್ನಾಟಕದ ಸಿಎಂಗಳೆಂದರೆ ಕೈಗೊಂಬೆ ಸಿಎಂ ಇದ್ದಹಾಗೆ. ಅಡಿಸಿಯೂ ನೋಡುತ್ತಾರೆ, ಬೀಳಿಸಿಯೂ ನೋಡುತ್ತಾರೆ. ಬಿ.ಎಸ್ ಯಡಿಯೂರಪ್ಪ ಅವರಂತಹ ನಾಯಕರನ್ನೇ ಹೇಳದೆ ಕೇಳದೆ ಮನೆಗೆ ಕಳಿಸಿರುವಾಗ ಬೊಂಬೆ ಬಸವರಾಜ ಬೊಮ್ಮಾಯಿ ಅವರು ಯಾವ ಲೆಕ್ಕ. 'ಸಂತೋಷ ಕೂಟ'ಕ್ಕೆ ಸಂತೋಷಪಡಿಸುವ ಬೊಮ್ಮಾಯಿಯವರ ಪ್ರಯತ್ನ ವಿಫಲವಾಗಿದೆ. ಹಗರಣ ಮತ್ತು ವೈಫಲ್ಯಗಳ ಕೊಡ ತುಂಬಿದೆ ಎಂದಿದೆ.

ಸಿದ್ದರಾಮಯ್ಯನವರ ಅಮೃತ ಮಹೋತ್ಸವದಲ್ಲಿ ಕಾಂಗ್ರೆಸ್‌ಗೆ ಸಿಕ್ಕ ಅಭೂತಪೂರ್ವ ಜನಬೆಂಬಲ, ಕಾಂಗ್ರೆಸ್ ಆಯೋಜಿಸಿರುವ ಸ್ವಾತಂತ್ರ್ಯೋತ್ಸವ ನಡಿಗೆಗೆ ಸಿಗುತ್ತಿರುವ ಅಪರಿಮಿತ ಯಶಸ್ಸನ್ನು ಕಂಡ ಬಿಜೆಪಿ ಕಂಗಾಲಾಗಿ ಹೋಗಿದೆ. ಚುನಾವಣೆಗೆ ಹೋಗಲು ಮುಖವಿಲ್ಲದ ಕಾರಣ ಸಿಎಂ ಕುರ್ಚಿಯಲ್ಲಿ ಬೇರೆ ಕೈಗೊಂಬೆ ಸಿಎಂ ಕೂರಿಸಲು ಕಸರತ್ತು ನಡೆಸುತ್ತಿದೆ ರಾಜ್ಯ ಬಿಜೆಪಿ. ಬೊಮ್ಮಾಯಿಯವರ ಆಡಳಿತದಲ್ಲಿ 'ಆ್ಯಕ್ಷನ್' ಇಲ್ಲದಕ್ಕೆ ಸಿಎಂ ಬದಲಾವಣೆಯ 'ರಿಯಾಕ್ಷನ್' ಸೃಷ್ಟಿಯಾಗಿದೆ.

  • ಬಿಜೆಪಿ ಹೈಕಮಾಂಡಿಗೆ ಕರ್ನಾಟಕದ ಸಿಎಂಗಳೆಂದರೆ #PuppetCM ಇದ್ದಹಾಗೆ,
    ಅಡಿಸಿಯೂ ನೋಡುತ್ತಾರೆ, ಬೀಳಿಸಿಯೂ ನೋಡುತ್ತಾರೆ!@BSYBJP ಅವರಂತಹ ನಾಯಕರನ್ನೇ ಹೇಳದೆ ಕೇಳದೆ ಮನೆಗೆ ಕಳಿಸಿರುವಾಗ ಬೋಂಬೆ @BSBommai ಅವರು ಯಾವ ಲೆಕ್ಕ!

    'ಸಂತೋಷ ಕೂಟ'ಕ್ಕೆ ಸಂತೋಷಪಡಿಸುವ ಬೊಮ್ಮಾಯಿಯವರ ಪ್ರಯತ್ನ ವಿಫಲವಾಗಿದೆ.

    ಹಗರಣ & ವೈಫಲ್ಯಗಳ ಕೊಡ ತುಂಬಿದೆ.

    — Karnataka Congress (@INCKarnataka) August 10, 2022 " class="align-text-top noRightClick twitterSection" data=" ">

ಪ್ರವೀಣ್ ಹತ್ಯೆ, ಕಾರ್ಯಕರ್ತರ ರಾಜೀನಾಮೆ, ಬಲಪಂಥೀಯ ಸಂಘಟನೆಗಳ ಆಕ್ರೋಶ, ಗೃಹಸಚಿವರ ಮನೆ ಮೇಲೆ ದಾಳಿ, ಎಲ್ಲವೂ ರಾಜ್ಯ ಬಿಜೆಪಿ ಒಳಗಿನ ಅತೃಪ್ತ ಆತ್ಮಗಳ ಕುರ್ಚಿ ಕಸಿಯುವ ಪೂರ್ವ ನಿಯೋಜಿತ ಕೃತ್ಯಗಳಾಗಿರಬಹುದೇ ಬಸವರಾಜ ಬೊಮ್ಮಾಯಿ ಅವರೇ? ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

ಹಿಂದೆ ಸಿ.ಟಿ ರವಿ, ಡಾ ಅಶ್ವತ್ಥ್​ ನಾರಾಯಣ, ಆರ್. ಅಶೋಕ್, ಉಮೇಶ್ ಕತ್ತಿ, ಬಸನಗೌಡ ಪಾಟೀಲ ಯತ್ನಾಳ್ ಅವರು ಸಿಎಂ ಆಸೆಯನ್ನು ಬಿಚ್ಚಿಟ್ಟಿದ್ದರು. ಈಗ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸಿಎಂ ಬದಲಾವಣೆಯ ಸುದ್ದಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಜನೋತ್ಸವ ಮಾಡಲಾಗದ ಬಸವರಾಜ ಬೊಮ್ಮಾಯಿ ಅವರು ಈಗ ಆತಂಕೋತ್ಸವ ಮಾಡುತ್ತಿದ್ದಾರೆ.

ಮೊದಲ ಸಿಎಂ - ₹2,500 ಕೋಟಿ, ಎರಡನೇ ಸಿಎಂ - ₹2,500 ಕೋಟಿ, ಮೂರನೇ ಸಿಎಂ- ₹2,500 ಕೋಟಿ. ಒಟ್ಟು ಸಂಪಾದನೆ - ₹7,500 ಕೋಟಿ. ರಾಜ್ಯ ಬಿಜೆಪಿ ಪಕ್ಷದ ಹೈಕಮಾಂಡ್ ಸಂಪಾದನೆಗೆ ಅದ್ಬುತ ದಾರಿ ಕಂಡುಕೊಂಡಿದೆ. ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಕಂತು ತೀರಿತೇ?, ಅಥವಾ 40 ಪರ್ಸೆಂಟ್​​ ಕಮಿಷನ್‌ನಲ್ಲಿ ಹೈಕಮಾಂಡ್ ಪಾಲು ತಲುಪಿಸಲು ವಿಫಲರಾದ್ರಾ? ಎಂದು ಕೇಳಿದೆ.

ಇದನ್ನೂ ಓದಿ: ಕೈಗೊಂಬೆ ಸಿಎಂ ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತ ಬಂದಿದೆ: ಕಾಂಗ್ರೆಸ್‌ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.