ETV Bharat / city

ನಾಳಿನ ಕರ್ನಾಟಕ ಬಂದ್​ಗೆ ನಮ್ಮ ಅನುಮತಿ ಕೇಳಿಲ್ಲ : ನಗರ ಪೊಲೀಸ್‌ ಆಯುಕ್ತ ಪಂತ್ ಸ್ಪಷ್ಟನೆ

author img

By

Published : Dec 4, 2020, 1:18 PM IST

Updated : Dec 4, 2020, 1:55 PM IST

ಅನುಮತಿ ಪಡೆಯದೆ ಜಾಥಾ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸದ್ಯ ಟೌನ್​ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಮಾತ್ರ ಪ್ರತಿಭಟನೆ ಮಾಡುವ ಅವಕಾಶವಿದೆ. ಒಂದು ವೇಳೆ ಸಾರ್ವಜನಿಕರಿಗೆ ತೊಂದರೆಯಾದ್ರೆ ಪ್ರತಿಭಟನಾಕಾರರನ್ನು ಅರೆಸ್ಟ್ ಮಾಡುತ್ತೇವೆ..

ಕರ್ನಾಟಕ ಬಂದ್ ಕುರಿತು ಕಮಲ್ ಪಂತ್ ಪ್ರತಿಕ್ರಿಯೆ
ಕರ್ನಾಟಕ ಬಂದ್ ಕುರಿತು ಕಮಲ್ ಪಂತ್ ಪ್ರತಿಕ್ರಿಯೆ

ಬೆಂಗಳೂರು : ಮರಾಠ ಅಭಿವೃದ್ಧಿ ‌ನಿಗಮ ರಚನೆ ವಿರೋಧಿಸಿ ಕನ್ನಡ ಪರ ಸಂಘಗಟನೆಗಳು ನಾಳೆ‌ ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಆದ್ರೆ, ಈ ಕುರಿತು ನಮ್ಮ ಅನುಮತಿ ಪಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ನಾಳೆ ಬೆಂಗಳೂರಿನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆಂದು 15,000 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಜೊತೆಗೆ 5 ಅಡಿಷನಲ್ ಹಾಗೂ ಜಂಟಿ ಪೊಲೀಸ್ ಆಯುಕ್ತರನ್ನು ಮತ್ತು ಆಯಾ ವಿಭಾಗದ ಎಸಿಪಿ ಹಾಗೂ ಇನ್ಸ್​ಪೆಕ್ಟರ್​ಗಳು ಜೊತೆಗೆ 33 ಕೆಎಸ್​ಆರ್​ಪಿ, 37 ಸಿಎಆರ್ ಮತ್ತು 12 ಜನ ಡಿಸಿಪಿಯನ್ನು ನಿಯೋಜನೆ ಮಾಡಲಾಗಿದೆ. ನಗರಾದ್ಯಂತ ಪೊಲೀಸ್ ಸಿಬ್ಬಂದಿ ಗಸ್ತಿನಲ್ಲಿರುತ್ತಾರೆ ಎಂದರು.

ಕರ್ನಾಟಕ ಬಂದ್ ಕುರಿತು ಕಮಲ್ ಪಂತ್ ಪ್ರತಿಕ್ರಿಯೆ

ಬಂದ್​ ವೇಳೆ ಕಾನೂನನ್ನು ಭಂಗ ಮಾಡಲಿಕ್ಕೆ ಅವಕಾಶ ಕೊಡುವುದಿಲ್ಲ. ಬಂದ್​ ಕುರಿತು ವಾಟಳ್ ನಾಗರಾಜ್ ಆಗಲಿ, ಯಾರೂ ಕೂಡ ನಮ್ಮ ಬಳಿ ಅನುಮತಿ ಪಡೆದಿಲ್ಲ. ಬಲವಂತವಾಗಿ ಬಂದ್ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹಾಗೆಯೇ ಕೋವಿಡ್ ಪ್ರೋಟೋ ಕಾಲ್ ಜಾರಿಯಲ್ಲಿದೆ ಎಂದು ಎಚ್ಚರಿಸಿದರು.

ಅನುಮತಿ ಪಡೆಯದೆ ಜಾಥಾ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸದ್ಯ ಟೌನ್​ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಮಾತ್ರ ಪ್ರತಿಭಟನೆ ಮಾಡುವ ಅವಕಾಶವಿದೆ. ಒಂದು ವೇಳೆ ಸಾರ್ವಜನಿಕರಿಗೆ ತೊಂದರೆಯಾದ್ರೆ ಪ್ರತಿಭಟನಾಕಾರರನ್ನು ಅರೆಸ್ಟ್ ಮಾಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಾಳೆ ಕರ್ನಾಟಕ ಬಂದ್: ಬೆಂಗಳೂರಲ್ಲಿ ಹದ್ದಿನ ಕಣ್ಣಿಡಲು ಪೊಲೀಸರಿಗೆ​ ಪಂತ್​ ಸೂಚನೆ

Last Updated :Dec 4, 2020, 1:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.