ETV Bharat / city

ಮನೆಯಲ್ಲಿ ಜಿರಳೆ ಕಾಟವೆಂದು ಔಷಧ ಸಿಂಪಡಣೆ: ಬೆಂಗಳೂರಲ್ಲಿ ಬಾಲಕಿ ಸಾವು

author img

By

Published : Aug 2, 2022, 8:11 AM IST

ಜಿರಲೆ ಕಾಟ ಹೆಚ್ಚಾದ ಹಿನ್ನೆಲೆ ಮನೆಗೆ ಮಾಲೀಕ ಔಷಧ ಸಿಂಪಡಿಸಿದ್ದರು. ಬಳಿಕ ಸರಿಯಾಗಿ ಮನೆ ಸ್ವಚ್ಛ ಮಾಡದ ಹಿನ್ನೆಲೆಯಲ್ಲಿ ಔಷಧಿಯಿಂದಾಗಿ ಬಾಲಕಿ ಮೃತಪಟ್ಟಿದ್ದಾಳೆ.

ಸ

ಬೆಂಗಳೂರು: ಜಿರಳೆ ಔಷಧದಿಂದಾಗಿ ಆರು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ವಸಂತನಗರದ ಮಾರಮ್ಮ ದೇವಸ್ಥಾನನದ ಬಳಿ ಮನೆಯೊಂದರಲ್ಲಿ ತಡರಾತ್ರಿ ನಡೆದಿದೆ. ಅಹನಾ (6) ಮೃತ ಬಾಲಕಿ.

ಇಲ್ಲಿನ ಕಟ್ಟಡದ 4 ಮನೆಗಳಲ್ಲಿ ಜಿರಳೆ ಕಾಟವೆಂದು ಮಾಲೀಕ ಶಿವಶಂಕರ್ ಔಷಧ ಸಿಂಪಡಿಸಿ, ಒಂದು ವಾರ ಮನೆಗಳನ್ನ ಖಾಲಿ ಬಿಡುವಂತೆ ನಿವಾಸಿಗಳಿಗೆ ಸೂಚಿಸಿದ್ದರು. ಅದರಂತೆ ತಾತ್ಕಾಲಿಕವಾಗಿ ಮನೆ ಖಾಲಿ ಮಾಡಿದ್ದ ಬಾಲಕಿಯ ಪೋಷಕರು, ಬಳಿಕ ಮಾಲೀಕನಿಗೆ ಹೇಳದೇ ನಾಲ್ಕೇ ದಿನದಲ್ಲಿ ಮನೆಗೆ ಮರಳಿದ್ದರು. ಅಷ್ಟೇ ಅಲ್ಲ ಸರಿಯಾಗಿ ಮನೆ ಸ್ವಚ್ಛ ಮಾಡದೇ ಮನೆಯಲ್ಲಿದ್ದ ವಸ್ತುಗಳನ್ನ ಬಳಸಿದ್ದಾರೆ. ಪರಿಣಾಮ ಮೂವರಿಗೂ ಉಸಿರಾಟದ ಸಮಸ್ಯೆ ಉಲ್ಬಣಿಸಿತ್ತು.

ಆದರೆ ಬಾಲಕಿ ಪರಿಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಬಾಲಕಿ ಬದುಕುಳಿದಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸದ್ಯ ಪೋಷಕರಿಂದ ಹೇಳಿಕೆ ಪಡೆದಿರುವ ಹೈಗ್ರೌಂಡ್ಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮನೆ ಮಾಲೀಕ ಶಿವಶಂಕರ್​​ನನ್ನ ವಶಕ್ಕೆ ಪಡೆದಿದ್ದಾರೆ.

(ಇದನ್ನೂ ಓದಿ: ಬೆಂಗಳೂರಿನಲ್ಲಿ ಸತತ 3ನೇ ದಿನವೂ ಮಳೆಯಬ್ಬರ: ಜಲಾವೃತ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರನಿಗೆ ಗಂಭೀರ ಗಾಯ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.