ಚಿಕ್ಕಬಳ್ಳಾಪುರ ತಾಲೂಕಾಸ್ಪತ್ರೆಗೆ ಸಂಪುಟ ಸಭೆಯಲ್ಲಿ ಸ್ವಪಕ್ಷ ಸಚಿವರ ಆಕ್ಷೇಪ: ಸಚಿವ ಸುಧಾಕರ್‌​ಗೆ ಮುಜುಗರ

author img

By

Published : Nov 25, 2021, 10:02 PM IST

cabinet-meeting

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಜೊತೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಿಸುವ ಕಾಮಗಾರಿಗಳ 27 ಕೋಟಿ ರೂ. ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಸ್ವಪಕ್ಷದ ಸಚಿವರ ವಿರೋಧಕ್ಕೆ ಸಚಿವ ಸುಧಾಕರ್ ಮುಜುಗರಕ್ಕೆ ಒಳಗಾದರು.

ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆ, ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣ ವಿಚಾರವಾಗಿ ಸಚಿವ ಡಾ.ಕೆ.ಸುಧಾಕರ್ ಮತ್ತು ಸಚಿವರ ಮಧ್ಯೆ ಜಟಾಪಟಿ ನಡೆಯಿತು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಹೊಸದಾಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಜೊತೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಿಸುವ ಕಾಮಗಾರಿಗಳ 27 ಕೋಟಿ ರೂ. ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಆರೋಗ್ಯ ಸಚಿವ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಆಸ್ಪತ್ರೆ ನಿರ್ಮಾಣ ಸಂಬಂಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಪ್ರಸ್ತಾವನೆಗೆ ಸಚಿವ ನಾರಾಯಣ ಗೌಡ ವಿರೋಧ ವ್ಯಕ್ತಪಡಿಸಿದರು. ನಮಗೂ ಹೊಸ ಆಸ್ಪತ್ರೆ ಕಟ್ಟಡ ಹಂಚಿಕೆ ಮಾಡಿ ಎಂದು ನಾರಾಯಣ ಗೌಡ ಒತ್ತಾಯಿಸಿದರು‌.‌ ಈ ಬಗ್ಗೆ ಹಿಂದಿನ‌ ಸಿಎಂ ಯಡಿಯೂರಪ್ಪ ಕೆ.ಆರ್.ಪೇಟೆಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು.‌ ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದರೆ, ಚಿಕ್ಕಬಳ್ಳಾಪುರದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದಕ್ಕೆ ಇತರ ಸಚಿವರೂ ದನಿಗೂಡಿಸಿದರು.

ಸಚಿವ ನಾರಾಯಣಗೌಡ, ಅಶ್ವತ್ಥನಾರಾಯಣ, ಎಂಟಿಬಿ ಸೇರಿ ಏಳಕ್ಕೂ ಹೆಚ್ಚು ಹಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲಾ ಅವ್ರೆ ತೆಗೆದುಕೊಂಡು ಹೋದರೆ ನಾವೇನ್ ಮಾಡಬೇಕು ಎಂದು ವಿರೋಧಿಸಿದರು‌. ಸಂಪುಟ ಸಹೋದ್ಯೋಗಿಗಳ ಮಾತಿಂದ ಸಚಿವ ಸುಧಾಕರ್ ಮುಜುಗರಕ್ಕೆ ಒಳಗಾದರು. ಸಚಿವರ ವಿರೋಧ ಹೆಚ್ಚಾಗುತ್ತಿದ್ದ ಹಾಗೇ ಕೊನೆಗೆ ಸಿಎಂ ಪ್ರಸ್ತಾವನೆ ಕೈ ಬಿಟ್ಟರು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸೋಣ ಎಂದು ಪ್ರಸ್ತಾವನೆಯನ್ನು ಮುಂದಕ್ಕೆ ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.